ಕರೊನಾ ಮೂರನೇ ಅಲೆ ದೇಶಕ್ಕೆ ಕಾಲಿಟ್ಟೇ ಬಿಡ್ತಾ? ಆತಂಕಕಾರಿ‌ ಮಾಹಿತಿ ಹೊರಹಾಕಿದ ವಿಧಿ ವಿಜ್ಞಾನ ತಜ್ಞ

ಬೆಂಗಳೂರು: ಕರೊನಾದ ಎರಡನೇ ಅಲೆಗಿಂತ ಮೂರನೇ ಅಲೆ ಹೆಚ್ಚು ಭೀಕರವಾಗಿದೆ. ಮೂರನೇ ಅಲೆಯೂ ಬರುವ ನಿರೀಕ್ಷೆಯಲ್ಲಿ ಭಾರತೀಯರಿದ್ದಾರೆ. ಈ ನಡುವೆ ವಿಧಿ ವಿಜ್ಞಾನ ತಜ್ಞ ಡಾ.ದಿನೇಶ್ ಆತಂಕಕಾರಿ‌ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಕರೊನಾದ ಮೂರನೇ ಅಲೆ ಈಗಾಗಲೇ ಬೇರೆ ದೇಶಗಳಲ್ಲಿ ಕಾಣಿಸಿಕೊಂಡಿದೆ. ತೈವಾನ್, ಬ್ರೆಜಿಲ್, ಸಿಂಗಾಪುರ, ಅಮೆರಿಕಾದ ಟೆಕ್ಸಾಸ್ ಅಷ್ಟೇ ಏಕೆ ಭಾರತದ ಮಹಾರಾಷ್ಟ್ರದಲ್ಲೂ ಅದರ ಸುಳಿವು ಸಿಕ್ಕಿದೆ. ಬಿ.1.617 ಹೆಸರಿನ ಭಾರತದ ಥಳಿ ವೈರಸ್ ಈ ಪ್ರದೇಶಗಳಲ್ಲಿ ಕಾಣಿಸಿಕೊಂಡಿದೆ. ಈಗಾಗಲೇ ವಿದೇಶಗಳಲ್ಲಿ ಮೂರನೇ ಅಲೆಯ ಆರ್ಭಟ ಆರಂಭವಾಗಿದೆ. … Continue reading ಕರೊನಾ ಮೂರನೇ ಅಲೆ ದೇಶಕ್ಕೆ ಕಾಲಿಟ್ಟೇ ಬಿಡ್ತಾ? ಆತಂಕಕಾರಿ‌ ಮಾಹಿತಿ ಹೊರಹಾಕಿದ ವಿಧಿ ವಿಜ್ಞಾನ ತಜ್ಞ