More

    ತಮಿಳುನಾಡಿನಲ್ಲಿ ಅಂಡಾಣು ಮಾರಾಟ ಜಾಲ ಪತ್ತೆ: 4 ಆಸ್ಪತ್ರೆಗಳಿಗೆ ಬೀಗ ಜಡಿದ ಆರೋಗ್ಯ ಇಲಾಖೆ

    ಚೆನ್ನೈ: ಇತ್ತೀಚೆಗೆ ಬಾಡಿಗೆ ತಾಯಿಯಾಗುವ ಮೂಲಕ ಬೇರೆಯವರಿಗೆ ಮಗು ಹೆತ್ತು ಕೊಡುವುದು ಸಾಮಾನ್ಯವಾಗಿತ್ತು. ಇದಕ್ಕೆ ಕಾನೂನು ಜಾರಿಯಾದ ಬಳಿಕ ತಕ್ಕಮಟ್ಟಿಗೆ ಕಡಿಮೆಯಾಗಿದೆ. ಈ ಬೆನ್ನಲ್ಲೇ ಮತ್ತೊಂದು ಜಾಲ ಹುಟ್ಟಿಕೊಂಡಿದೆ. ಅಂಡಾಣು ಮಾರಾಟ ಮಾಡುವುದು ಕೂಡ ಕಾನೂನು ಬಾಹಿರವಾಗಿದ್ದು, ಇದಕ್ಕೆ ಇಂತಹದ್ದೇ ಕೆಲವು ನಿಯಮ ಪಾಲನೆಯ ಅಗತ್ಯವೂ ಇದೆ. ಇವೆಲ್ಲವನ್ನೂ ಮೀರಿ ಈ ಕೃತ್ಯಗಳಲ್ಲಿ ತೊಡಗಿದ್ದ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಬಿಸಿ ಮುಟ್ಟಿಸಿದೆ.

    ಇಂತಹ ಕೃತ್ಯದಲ್ಲಿ ತೊಡಗಿದ್ದ ನಾಲ್ಕು ಆಸ್ಪತ್ರೆಗಳಿಗೆ ತಮಿಳುನಾಡಿನ ಆರೋಗ್ಯ ಇಲಾಖೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ಇಂತಹ ಜಾಲವೊಂದು ಪತ್ತೆಯಾಗಿದ್ದು, ಈ ಆಸ್ಪತ್ರೆಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ.18 ರಿಂದ 20 ವಯಸ್ಸಿನ ಯುವತಿಯರ ಅಂಡಾಣುವನ್ನು ಶೇಖರಿಸಿ ಮಾರಾಟ ಮಾಡಲಾಗುತ್ತಿತ್ತು. ಇದರಲ್ಲಿ 16 ವರ್ಷ ವಯಸ್ಸಿನವರೂ ಹೆಚ್ಚಿನವರಿದ್ದಾರೆ ಎನ್ನಲಾಗಿದೆ.

    21 ರಿಂದ 35 ವರ್ಷದೊಳಗಿನ ಮಹಿಳೆಯರು ಮಾತ್ರ ಅಂಡಾಣು ನೀಡಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಇಲ್ಲಿ ಸಣ್ಣ ವಯಸ್ಸಿನವರಿಂದ ಒತ್ತಾಯಪೂರ್ವಕವಾಗಿ ಅಂಡಾಣು ಶೇಖರಿಸಿ ಮಾರಾಟ ಮಾಡುತ್ತಿದ್ದರಿಂದ ನಾಲ್ಕು ಆಸ್ಪತ್ರೆಗಳನ್ನು ಮುಚ್ಚಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ ಎಂದು  ಆರೋಗ್ಯ ಸಚಿವ ಮಾ. ಸುಬ್ರಮಣಿಯನ್​ ತಿಳಿಸಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ವಯಸ್ಕಳೆಂದು ತೋರಿಸಲು ಆಧಾರ್​ ಕಾರ್ಡ್​ನ್ನು ನಕಲಿ ಮಾಡಲಾಗಿರುವುದು ಬೆಳಕಿಗೆ ಬಂದಿದ್ದು, ಗಂಡನೂ ಇದ್ದಾನೆ ಎಂದು ತೋರಿಸಿ ಈ ಆಸ್ಪತ್ರೆಗಳು ಹೀನ ಕೃತ್ಯದಲ್ಲಿ ತೊಡಗಿದ್ದವು ಎಂದು ಸಚಿವರು ತಿಳಿಸಿದ್ದಾರೆ.


    ಈ ನಾಲ್ಕು ಆಸ್ಪತ್ರೆಗಳ ವಿರುದ್ಧ ಆರೋಪ ಸಾಬೀತಾದಲ್ಲಿ 50 ಲಕ್ಷ ರೂ. ದಂಡ ಹಾಗೂ ಭಾಗಿಯಾದ ವೈದ್ಯರಿಗೂ ಸಹ 10 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಸದ್ಯ ರೋಗಿಗಳ ಹಿತದೃಷ್ಟಿಯಿಂದ ಆಸ್ಪತ್ರೆಗಳನ್ನು ಮುಚ್ಚಲು ಆದೇಶಿಸಲಾಗಿದ್ದು, ಇದರಲ್ಲಿ ಎರಡು ಆಸ್ಪತ್ರೆಗಳು ತಮ್ಮ ಪರವಾನಗಿಯನ್ನು ಕಳೆದುಕೊಳ್ಳಲಿದೆ ಎಂದು ಸಚಿವ ಸುಬ್ರಮಣಿಯನ್ ತಿಳಿಸಿದ್ದಾರೆ. (ಏಜೆನ್ಸೀಸ್​)

    ವಿಶ್ವದ ಶ್ರೇಷ್ಠ ಸ್ಥಳಗಳ ಪೈಕಿ ಭಾರತದ ಈ ಎರಡು ರಾಜ್ಯಗಳ ನಗರಗಳಿಗೂ ಸ್ಥಾನ! ಇಲ್ಲಿದೆ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts