More

    ಬೈಡೆನ್​ ಗೆಲುವು ಪ್ರಮಾಣೀಕರಿಸದಂತೆ ಆಗ್ರಹ: ಡೊನಾಲ್ಡ್​ ಟ್ರಂಪ್​ ಬೆಂಬಲಿಗರ ಹಿಂಸಾಚಾರಕ್ಕೆ ನಾಲ್ವರು ಬಲಿ

    ವಾಷಿಂಗ್ಟನ್​: ಡೆಮಾಕ್ರಟಿಕ್​ ಪಕ್ಷದ ಚುನಾಯಿತ ಅಧ್ಯಕ್ಷ ಜೋ ಬೈಡೆನ್ ಚುನಾವಣಾ ವಿಜಯವನ್ನು ಕಾಂಗ್ರೆಸ್​ ಸಭೆ ಪ್ರಮಾಣೀಕರಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ನಿರ್ಗಮಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಬೆಂಬಲಿಗರು ಯುಎಸ್​ ಕ್ಯಾಪಿಟಲ್​ ಕಟ್ಟಡ ಎದುರು ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ನಾಲ್ವರು ಸಾವಿಗೀಡಾಗಿದ್ದಾರೆ.

    ಭಾರಿ ಹಿಂಸಾಚಾರ ಕಾರಣ ಯುಎಸ್​ ಕ್ಯಾಪಿಟಲ್​ ಸುತ್ತ ಕರ್ಪ್ಯೂ ಜಾರಿ ಮಾಡಿಲಾಗಿದ್ದು, ಕರ್ಪ್ಯೂ ಉಲ್ಲಂಘಿಸಿದ 52 ಮಂದಿಯನ್ನು ಬಂಧಿಸಿರುವುದಾಗಿ ವಾಷಿಂಗ್ಟನ್​ ಡಿಸಿ ಪೊಲೀಸ್​ ಮುಖ್ಯಸ್ಥ ಮಾಹಿತಿ ನೀಡಿದ್ದಾರೆ. ಅಲ್ಲದೆ, ಪರವಾನಗಿ ಪಡೆಯದ ನಿಷೇಧಿತ ಬಂದೂಕುಗಳನ್ನು ಪ್ರತಿಭಟನಾ ಸ್ಥಳಕ್ಕೆ ತಂದಿರುವ ಅನೇಕರ ವಿರುದ್ಧ ಪ್ರಕರಣ ದಾಖಲಿಸಿ ವಶಕ್ಕೆ ಪಡೆಯಲಾಗಿದೆ.

    ಇದನ್ನೂ ಓದಿ: ಹಕ್ಕಿ ಜ್ವರದ ಎಫೆಕ್ಟ್​ ಚಿಕನ್​ ಬೆಲೆಯಲ್ಲಿ ಕುಸಿತ: ಬಾಯ್ಲರ್​ ಕೋಳಿ ಕೆಜಿಗೆ 15 ರೂ.!

    ಬೈಡೆನ್​ ಗೆಲುವು ಪ್ರಮಾಣೀಕರಿಸುವುದನ್ನು ವಿರೋಧಿಸಿ ಟ್ರಂಪ್​ ಬೆಂಬಲಿಗರು ಭಾರಿ ಸಂಖ್ಯೆಯಲ್ಲಿ ಯುಎಸ್​ ಕ್ಯಾಪಿಟಲ್​ ಎದುರು ಜಮಾಯಿಸಿದ್ದು, ಟ್ರಂಪ್​ ಪರ ಬಾವುಟಗಳನ್ನು ಹಾರಿಸುತ್ತಿದ್ದಾರೆ. ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪೊಲೀಸ್​ ಪಡೆ ಜಮಾವಣೆಗೊಂಡಿದೆ.

    ಇದಕ್ಕೂ ಮುನ್ನ ಪ್ರತಿಭಟನೆಯ ಭಾಗವಾಗಿದ್ದ ಮಹಿಳೆಯೊಬ್ಬಳು ಕ್ಯಾಪಿಟಲ್​ ಕಟ್ಟಡದ ಒಳಗಡೆ ನಡೆದ ಗುಂಡಿನ ಚಕಮಕಿಯಲ್ಲಿ ಭುಜಕ್ಕೆ ಗುಂಡೇಟು ಬಿದ್ದು, ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಡೊನಾಲ್ಡ್ ಟ್ರಂಪ್ ಬೆಂಬಲಿಗರು ಯುಎಸ್ ಕ್ಯಾಪಿಟಲ್ ಕಟ್ಟಡವನ್ನು ಮುತ್ತಿಗೆ ಹಾಕಿದರೆ, ಇನ್ನೊಂದೆಡೆ ಡೆಮೋಕ್ರೆಟಿಕ್​ ಪಕ್ಷದ ಜೋ ಬೈಡೆನ್ ಗೆಲುವನ್ನು ರದ್ದುಗೊಳಿಸುವ ಅಧ್ಯಕ್ಷರ ಬೇಡಿಕೆಯನ್ನು ತಮ್ಮದೇ ರಿಪಬ್ಲಿಕನ್​ ಪಕ್ಷದ ಉಪಾಧ್ಯಕ್ಷ ಮೈಕ್ ಪೆನ್ಸ್ ನಿರಾಕರಿಸಿದರು ಮತ್ತು ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸಲು ಒತ್ತಾಯಿಸಿರುವ ಟ್ರಂಪ್​ ಬೆಂಬಲಿಗರ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

    ಇದನ್ನೂ ಓದಿ: ನಿಮ್ಮನ್ನು ಭೇಟಿಯಾಗಬೇಕು ಎನ್ನುತ್ತಲೇ ಗೇಟ್​ ಹಾರಿ ನಟಿ ಮನೆಗೆ ನುಗ್ಗಿದ ಯುವಕ: ಮುಂದೇನಾಯ್ತು?!

    ಇನ್ನು ನವೆಂಬರ್ 3ರ ಚುನಾವಣೆಯಲ್ಲಿ ಟ್ರಂಪ್ ವಿರುದ್ಧದ ಬೈಡೆನ್ ವಿಜಯವನ್ನು ಔಪಚಾರಿಕವಾಗಿ ಪ್ರಮಾಣೀಕರಿಸಲು ಎಲ್ಲ ಶಾಸಕರು ಕ್ಯಾಪಿಟಲ್​ ಕಟ್ಟಡ ಒಳಗೆ ಹೋಗುವಾಗ ಟ್ರಂಪ್​ ಬೆಂಬಲಿಗರ ಆಕ್ರೋಶ ಭುಗಿಲೆದ್ದಿತು. ಈ ವೇಳೆ ಪೊಲೀಸರು ಅಧಿಕಾರಿಗಳು ಕಾನೂನು ಸುವ್ಯವಸ್ಥೆ ಕಾಪಾಡಲು ಹೆಣಗಾಡಿದರು.

    ರಿಪಬ್ಲಿಕನ್ ಶಾಸಕರ ತಂಡವು ಟ್ರಂಪ್ ಪರ ತಂದಿದ್ದ ಬೈಡೆನ್ ಅವರ ವಿಜಯದ ಬಗ್ಗೆ ಆಕ್ಷೇಪಣೆಗಳನ್ನು ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ನಲ್ಲಿ ವ್ಯಕ್ತಪಡಿಸಲಾಯಿತು. ಟ್ರಂಪ್‌ರ ಅಧ್ಯಕ್ಷತೆಯ ನಾಲ್ಕು ವರ್ಷಗಳ ಅವಧಿಯಲ್ಲಿ ನಿಷ್ಠಾವಂತ ಉಪಾಧ್ಯಕ್ಷರಾಗಿದ್ದ ಪೆನ್ಸ್, ನವೆಂಬರ್ 3ರ ಚುನಾವಣಾ ಗೆಲುವನ್ನು ಔಪಚಾರಿಕವಾಗಿ ಪ್ರಮಾಣೀಕರಿಸಲು ಕಾಂಗ್ರೆಸ್ ಜಂಟಿ ಅಧಿವೇಶನವನ್ನು ಪ್ರಾರಂಭಿಸಿದರು. ಈ ವೇಳೆ ರಿಪಬ್ಲಿಕನ್ ಶಾಸಕರ ತಂಡವು ಫಲಿತಾಂಶಗಳ ಮೇಲೆ ಅನುಮಾನ ವ್ಯಕ್ತಪಡಿಸಿ ಅನೇಕ ಪ್ರಶ್ನೆಗಳನ್ನು ಕೇಳಿದರು.

    ಇದನ್ನೂ ಓದಿ: ಕಾಮುಕ ಸೋದರಸಂಬಂಧಿಯನ್ನು ಕೊಂದ ಯುವತಿಯನ್ನು ಬಂಧಿಸದೇ ಬಿಟ್ಟು ಕಳುಹಿಸಿದ ಪೊಲೀಸ್​ ಅಧಿಕಾರಿ!

    ಈ ವೇಳೆ ಮಧ್ಯ ಪ್ರವೇಶಸಿದ ಸೆನೆಟ್ ಬಹುಸಂಖ್ಯಾತ ನಾಯಕ ಮಿಚ್ ಮೆಕ್‌ಕಾನ್ನೆಲ್, “ಈ ಚುನಾವಣೆಯನ್ನು ಸೋತವರ ಇಲ್ಲಸಲ್ಲದ ಆರೋಪಗಳಿಂದ ರದ್ದುಗೊಳಿಸಿದರೆ, ನಮ್ಮ ಪ್ರಜಾಪ್ರಭುತ್ವವು ಸಾವಿನ ಸುರುಳಿಯನ್ನು ಪ್ರವೇಶಿಸುತ್ತದೆ” ಎಂದು ಅಭಿಪ್ರಾಯಪಟ್ಟರು. ಸದ್ಯ ಕಾಂಗ್ರೆಸ್​ ಸಭೆ ಮುಂದುವರಿದಿದೆ. (ಏಜೆನ್ಸೀಸ್​)

    ಟ್ರಂಪ್​ ಬೆಂಬಲಿಗರ ಆಕ್ರೋಶ: ಯುಎಸ್ ಕ್ಯಾಪಿಟಲ್​ ಹಿಂಸಾಚಾರಕ್ಕೆ ಓರ್ವ ಬಲಿ, ಪ್ರಧಾನಿ ಮೋದಿ ಬೇಸರ

    17ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮ

    ವಾಟ್ಸ್​ಆ್ಯಪ್​ ಖಾಸಗಿತನದ ನೀತಿ ಅಪ್​ಡೇಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts