More

    ಪಾಕ್​​​ನಿಂದ 38 ಭಾರತೀಯ ಅಧಿಕಾರಿಗಳು ವಾಪಸ್; ಬಸ್​, ಟ್ರಕ್​​ನಲ್ಲಿ ಗಡಿ ತಲುಪಿದ ಸಿಬ್ಬಂದಿ

    ನವದೆಹಲಿ: ಸದಾ ಪಿತೂರಿ ನಡೆಸುವ ಪಾಕಿಸ್ತಾನಕ್ಕೆ ಸ್ವಲ್ಪ ದಿನಗಳ ಹಿಂದೆ ಭಾರತ ಒಂದು ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಭಾರತದಲ್ಲಿರುವ ಪಾಕ್​ನ ಹೈಕಮೀಷನ್​ ಮೂಲಕ ಬೇಹುಗಾರಿಕೆ ನಡೆಸುವುದು, ಹಾಗೇ ತಮ್ಮ ದೇಶದಲ್ಲಿರುವ ಭಾರತದ ಹೈಕಮಿಷನ್​ ಅಧಿಕಾರಿಗಳು, ರಾಯಭಾರಿ ಅಧಿಕಾರಿಗಳನ್ನು ಅಪಹರಣ ಮಾಡುವಂತಹ ನೀಚ ಕೆಲಸದಲ್ಲೇ ತೊಡಗಿಕೊಂಡಿದೆ ಪಾಕಿಸ್ತಾನ.

    ಈ ಕೃತ್ಯಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪಾಕಿಸ್ತಾನಕ್ಕೆ ಹೇಳಿದ್ದ ಭಾರತ, ನವದೆಹಲಿಯಲ್ಲಿ ನಿಮ್ಮ ಹೈಕಮಿಷನ್​ನಲ್ಲಿರುವ ಅರ್ಧದಷ್ಟು ಸಿಬ್ಬಂದಿಯನ್ನು ಒಂದು ವಾರದೊಳಗೆ ವಾಪಸ್​ ಕರೆಸಿಕೊಳ್ಳಿ ಎಂದು ಖಡಕ್​ ಆಗಿ ಹೇಳಿತ್ತು. ಹಾಗೇ, ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನ್​ ಮತ್ತು ರಾಯಭಾರಿ ಕಚೇರಿಯಲ್ಲಿ ಅರ್ಧದಷ್ಟು ಸಿಬ್ಬಂದಿಯನ್ನು ನಾವು ವಾಪಸ್​ ಕರೆಸಿಕೊಳ್ಳುತ್ತೇವೆ ಎಂದು ಸೂಚನೆಯಲ್ಲಿ ಉಲ್ಲೇಖಿಸಿತ್ತು. ಇದನ್ನೂ ಓದಿ:  ಕರೊನಾದಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣದಲ್ಲಿ ರಾಷ್ಟ್ರವನ್ನು ಹಿಂದಿಕ್ಕಿದ ದೆಹಲಿ….

    ಅದರ ಅನ್ವಯ ಪಾಕಿಸ್ತಾನದಿಂದ 38 ಭಾರತೀಯ ಅಧಿಕಾರಿಗಳು ದೇಶಕ್ಕೆ ವಾಪಸ್​ ಆಗುತ್ತಿದ್ದಾರೆ. ಅವರೆಲ್ಲ ಎರಡು ಬಸ್​ ಮತ್ತು ಒಂದು ಟ್ರಕ್​ ಮೂಲಕ ವಾಘಾ ಗಡಿಯನ್ನು ತಲುಪಿದ್ದಾರೆ. ಈ 38 ಅಧಿಕಾರಿಗಳಲ್ಲಿ 6 ಮಂದಿ ರಾಯಭಾರಿ ಕಚೇರಿ ಸಿಬ್ಬಂದಿಯಾಗಿದ್ದಾರೆ.

    ಅಷ್ಟೇ ಅಲ್ಲ, ಭಾರತದಲ್ಲಿರುವ ಪಾಕ್​ ಹೈಕಮಿಷನ್​ನ ಸುಮಾರು 143 ಅಧಿಕಾರಿಗಳೂ ಕೂಡ ತಮ್ಮ ದೇಶಕ್ಕೆ ವಾಪಸ್​ ಆಗಿದ್ದಾರೆ. (ಏಜೆನ್ಸೀಸ್​)

    ಕೋವಿಡ್​ಗೆ ಭಾರತದಲ್ಲಿ ಸಿದ್ಧವಾಗಿದೆ ಕೊವಾಕ್ಸಿನ್​ ಚುಚ್ಚುಮದ್ದು, ನಾಳೆಯಿಂದ ಮಾನವರ ಮೇಲೆ ಪ್ರಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts