More

    ಆನೆದಂತ, ಶ್ರೀಗಂಧ, ರಕ್ತಚಂದನ ಸೇರಿ 3 ಕೋಟಿ ಮೌಲ್ಯದ ವಸ್ತುಗಳ ಅಕ್ರಮ ಸಂಗ್ರಹ; ಇಬ್ಬರು ಅರೆಸ್ಟ್​

    ಚಿತ್ರದುರ್ಗ: ಮನೆಯೊಂದಲ್ಲಿ ಅಕ್ರಮವಾಗಿ ಆನೆದಂತೆ, ಶ್ರೀಗಂಧ, ರಕ್ತಚಂದನವನ್ನು ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಬಬ್ಬೂರು ಗ್ರಾಮದಲ್ಲಿ ನಡೆದಿದೆ.

    ಬಬ್ಬೂರು ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ಆನೆದಂತೆ, ಶ್ರೀಗಂಧ, ರಕ್ತಚಂದನವನ್ನು ಸಂಗ್ರಹಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಮೂರು ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆದಿದ್ದಾರೆ.

    ಇದನ್ನೂ ಓದಿ: ಅಜ್ಜಿಯರು ದೇವತೆಗಳಾಗಿದ್ದು, ಅವರ ನೆನಪುಗಳು ಶಾಶ್ವತವಾಗಿ ಉಳಿಯುತ್ತವೆ, ಜೈ ಶ್ರೀರಾಮ್: ರಚಿನ್ ರವೀಂದ್ರ

    ಪ್ರಕರಣ ಸಂಬಂಧ ಚಿಕ್ಕಮಗಳೂರು ಮೂಲದ ಚಂದ್ರಶೇಖರ್​ ಹಾಗೂ ತಮಿಳುನಾಡು ಮೂಲದ ಖಲೀಲ್​ ಎಂಬುವವರನ್ನು ವಶಕ್ಕೆ ಪಡೆದಿದ್ದು, ಸೌದೆ ವ್ಯಾಪಾರ ಮಾಡುವುದಾಗಿ ಹೇಳಿ‌ ನಾರಾಯಣಪ್ಪ ಎಂಬುವವರ ಮನೆಯನ್ನು ಲೀಸ್​ಗೆ ಪಡೆದಿದ್ದರು ಎಂದು ತಿಳಿದು ಬಂದಿದೆ.

    ಪೊಲೀಸರು ಎಲ್ಲಾ ವಸ್ತುಗಳನ್ನು ಮಹಜರು ಮಾಡಿದ್ದು, ಚಿತ್ರದುರ್ಗ ಪೊಲೀಸ್ ಕಚೇರಿಗೆ ಅಧಿಕಾರಿಗಳ ತಂಡ ಆ ವಸ್ತುಗಳನ್ನು ತೆಗೆದುಕೊಂಡು ಹೋಗಿದೆ. ಇನ್ನು ಅಲ್ಲಿಯೇ ಪತ್ರಿಕಾಗೋಷ್ಠಿ ನಡೆಸಿ ಎಲ್ಲ ಮಾಹಿತಿಯನ್ನು ತಿಳಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts