More

    ಅಮೇರಿಕಾದಲ್ಲಿ 7ತಿಂಗಳು ಬಾತ್​ರೂಂನಲ್ಲಿ ಬಂಧಿಯಾಗಿದ್ದ ಭಾರತೀಯ ವಿದ್ಯಾರ್ಥಿ – ಮೈಮೂಳೆ ಮುರಿಯುವಂತೆ ಥಳಿತ- ಕಾರಣ ಕೇಳಿದ್ರೆ ಹೌಹಾರ್ತೀರಾ!

    ವಾಷಿಂಗ್ಟನ್: ತಿಂಗಳುಗಟ್ಟಲೆ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು ರಕ್ಷಿಸಿದ್ದಾರೆ, ವಿದ್ಯಾರ್ಥಿ ಹೆಸರು ಬಹಿರಂಗಪಡಿಸಿಲ್ಲ. ಶಿಕ್ಷಣಕ್ಕೆಂದು ಬಂದ ಆತನನ್ನು ಸೋದರಸಂಬಂಧಿ ಮತ್ತು ಇತರ ಇಬ್ಬರು ಸೇರಿ ಮೂರು ಮನೆಗಳಲ್ಲಿ ಕೆಲಸ ಮಾಡಲು ಒತ್ತಾಯಿಸಿದ್ದು, ಇದಕ್ಕೆ ಆತ ಒಪ್ಪದಿದ್ದಾಗ ಈ ದುಷ್ಕೃತ್ಯವೆಸಗಿದ್ದಾರೆ.

    ಇದನ್ನೂ ಓದಿ: ವಿಜಯಕಾಂತ್ ಅನಾರೋಗ್ಯದ ಬಗ್ಗೆ ವದಂತಿ.. ನಿರಾಕರಿಸಿದ ಕ್ಯಾಪ್ಟನ್ ಪತ್ನಿ ಪ್ರೇಮಲತಾ   

    ಸೇಂಟ್ ಚಾರ್ಲ್ಸ್ ಕೌಂಟಿಯ ಗ್ರಾಮೀಣ ಹೆದ್ದಾರಿಯ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆಗ ವಿದ್ಯಾರ್ಥಿಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ವಿದ್ಯಾರ್ಥಿಗೆ ಆರೇಳು ತಿಂಗಳಿಂದ ಕೂಡಿಹಾಕಿ, ಥಳಿಸಿರುವುದು ಕಂಡುಬಂದಿದೆ. ಮಾನವ ಕಳ್ಳಸಾಗಣೆ, ಅಪಹರಣ ಮತ್ತು ಹಲ್ಲೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಡಿ ಪ್ರಕರಣ ದಾಖಲಿಸಿಕೊಂಡು ಕೃತ್ಯದಲ್ಲಿ ಭಾಗಿಯಾಗಿದ್ದ ವೆಂಕಟೇಶ್ ಆರ್. ಸತ್ತಾರು, ಶ್ರವಣ್ ವರ್ಮ ಪೆನುಮೆಚ್ಚ ಮತ್ತು ನಿಖಿಲ್ ವರ್ಮಾ ಪೆನ್ಮತ್ಸನನ್ನು ಬಂಧಿಸಲಾಗಿದೆ.

    ಸೇಂಟ್ ಚಾರ್ಲ್ಸ್ ಕೌಂಟಿಯ ಅಧಿಕೃತ ವೆಬ್‌ಸೈಟ್ ಪ್ರಕಾರ, ರೋಲಾದಲ್ಲಿರುವ ಮಿಸೌರಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವ ಭರವಸೆಯೊಂದಿಗೆ ವಿದ್ಯಾರ್ಥಿಯು ಕಳೆದ ವರ್ಷ ಭಾರತದಿಂದ ಯುಎಸ್‌ಗೆ ಬಂದಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಆದರೆ ಆತನನ್ನು ಕರೆಸಿಕೊಂಡಿದ್ದ ಪ್ರಮುಖ ಆರೋಪಿ ಸತ್ತಾರು ಕಳೆದ ಏಪ್ರಿಲ್‌ನಿಂದ ಮನೆಗೆಲಸವನ್ನು ಪ್ರಾರಂಭಿಸಲು ಒತ್ತಾಯಿಸಿದ್ದಾನೆ. ಮೊದಲು ಐಟಿ ಕಂಪನಿಯಲ್ಲಿ ಪೂರ್ಣ ದಿನ ಕೆಲಸ ಮಾಡಿಸಿ ಬಳಿಕ ಮನೆಗೆಲಸಕ್ಕೆ ಒತ್ತಾಯಿಸಿದ್ದಾರೆ.

    ಆದರೆ ಇದಕ್ಕೆ ವಿದ್ಯಾರ್ಥಿ ಒಪ್ಪದಿದ್ದಾಗ ಡಿಫೈಯನ್ಸ್, ಡಾರ್ಡೆನ್ನೆ ಪ್ರೈರೀ ಮತ್ತು ಓ’ಫಾಲನ್‌ನಲ್ಲಿರುವ ಸತ್ತಾರು ಒಡೆತನದ ಮೂರು ಮನೆಗಳ ನೆಲಮಾಳಿಗೆಯ ಸ್ನಾನಗೃಹಗಳಲ್ಲಿ ಏಳು ತಿಂಗಳು ಬಂಧಿಸಿಟ್ಟು ಅಲ್ಲಿಗೆ ಯಾರಿಗೂ ಪ್ರವೇಶವಿಲ್ಲದೆ ಮಾಡಿ ನೆಲದ ಮೇಲೆ ಮಲಗುವಂತೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ವಿದ್ಯುತ್ ತಂತಿ, ಪಿವಿಸಿ ಪೈಪ್, ರಾಡ್‌, ಕಟ್ಪೈಟಿಗೆ​ಗಳಿಂದ ಹೊಡೆದಿದ್ದಾರೆ. “ಇದು ಸಂಪೂರ್ಣವಾಗಿ ಅಮಾನವೀಯ ಮತ್ತು ಅವಿವೇಕದ ಪರಮಾವದಧಿ. ವಿದ್ಯಾರ್ಥಿ ಈಗ ಸುರಕ್ಷಿತವಾಗಿದ್ದಾನೆ. ಆದರೆ ಆತನ ಅನೇಕ ಮೂಳೆಗಳು ಮುರಿಯುವಂತೆ ಥಳಿಸಿದ್ದಾರೆ. ಮೈತುಂಬಾ ಗಾಯಗಳಾಗಿವೆ ಎಂದು ವಿದ್ಯಾರ್ಥಿ ಪಾಲಕರು 911 ಗೆ ಕರೆ ಮಾಡಿದ ನಂತರ ಮನೆಯ ತನಿಖೆಗಾಗಿ ಪೋಲೀಸರನ್ನು ಕಳುಹಿಸಲಾಯಿತು ಎಂದು ಪ್ರಾಸಿಕ್ಯೂಟರ್ ಜೋ ಮೆಕ್ಯುಲೋಚ್ ತಿಳಿಸಿದ್ದಾರೆ.

    ಪ್ರಕರಣದ ಪ್ರಮುಖ ಆರೋಪಿ ಸತ್ತಾರು 35 ಕ್ಕೂ ಹೆಚ್ಚು ಮಂದಿಯನ್ನು ಗುಲಾಮಗಿರಿಯ ಉದ್ದೇಶಕ್ಕಾಗಿ ಮಾನವ ಕಳ್ಳಸಾಗಣೆ ಮಾಡಿದ್ದಾನೆ. ಇದಕ್ಕೆ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾನೆ. ಆತ ಪತ್ನಿ ಮತ್ತು ಮಕ್ಕಳೊಂದಿಗೆ ಓ’ಫಾಲನ್ ಮನೆಯಲ್ಲಿ ವಾಸಿಸುತ್ತಿದ್ದಾನೆ. ವಿದ್ಯಾರ್ಥಿಯನ್ನು ರಕ್ಷಿಸಿದ ಮನೆಯಲ್ಲಿ ಪೆನುಮೆಟ್ಚಾ ಮತ್ತು ಪೆನ್ಮತ್ಸಾ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಓಡಿದರೂ ಬಿಡದೆ ಪೇದೆ ಮೇಲೆ ಸಿಐ ಲಾಠಿ ಚಾರ್ಜ್ – ಬೆಚ್ಚಿಬಿದ್ದ ಮತದಾರರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts