More

    ನರೇಗಾ ಯೋಜನೆ ನಗರ ಪ್ರದೇಶಕ್ಕೂ ವಿಸ್ತರಿಸಿ

    ಸಿಂಧನೂರು: ಬಜೆಟ್‌ನಲ್ಲಿ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕೆಲಸಗಾರರ ಬೇಡಿಕೆಗಳ ಈಡೇರಿಕೆ ಮನ್ನಣೆ ನೀಡಬೇಕೆಂದು ಒತ್ತಾಯಿಸಿ ಶಾಸಕ ಹಂಪನಗೌಡ ಬಾದರ್ಲಿ ಆಪ್ತ ಸಹಾಯಕ ಮುತ್ತಣ್ಣಗೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕು ಘಟಕ ಸೋಮವಾರ ಮನವಿ ಸಲ್ಲಿಸಿತು.

    ಅಸಂಘಟಿತ ಕಾರ್ಮಿಕರಂತೆ ಕೃಷಿ ಕೂಲಿಕಾರರಿಗಾಗಿ ಕಲ್ಯಾಣ ನಿಧಿ ಸ್ಥಾಪಿಸಬೇಕು. ಉದ್ಯೋಗ ಖಾತ್ರಿ ಕೆಲಸಗಾರರಿಗೆ ಆಧಾರ್ ಕಾರ್ಡ್ ಆಧರಿಸಿ ವೇತನ ನೀಡುವ ಪದ್ಧತಿ ಕೈಬಿಡಬೇಕು. ನರೇಗಾ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಿ, 200 ದಿನಗಳ ಕೆಲಸ ನೀಡುವುದರೊಂದಿಗೆ ದಿನಕ್ಕೆ 600 ರೂ. ಕೂಲಿ ನೀಡಬೇಕು ಎಂದು ಆಗ್ರಹಿಸಿದರು.

    ವಸತಿ ರಹಿತ ಕೂಲಿಕಾರರಿಗೆ ನಿವೇಶನ ಹಾಗೂ ಮನೆಗಳನ್ನು ನಿರ್ಮಿಸಿ ಕೊಡಬೇಕು. ಸರ್ಕಾರಿ ಜಮೀನಿನಲ್ಲಿ ವಾಸಿಸುತ್ತಿರುವ ಕೂಲಿಕಾರರಿಗೆ ಹಕ್ಕುಪತ್ರ ನೀಡಬೇಕು. ಸರ್ಕಾರಿ ಜಮೀನು ಸಾಗುವಳಿ ಮಾಡುತ್ತಿರುವ ಕೂಲಿಕಾರರನ್ನು ಒಕ್ಕಲೆಬ್ಬಿಸಬಾರದು. ಕೂಲಿಕಾರರಿಗೆ ತಲಾ 4 ಎಕರೆ ಜಮೀನು ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಬೇಕು ಎಂದು ಒತ್ತಾಯಿಸಿದರು.

    ಮಹಿಳೆಯರಿಗೆ ಜಂಟಿ ಪಟ್ಟಾ ಕೊಡಬೇಕು. ಭೂರಹಿತ ದಲಿತ ಕುಟುಂಬಗಳು ಮತ್ತು ವಿಮುಕ್ತ ದೇವದಾಸಿಯರಿಗೆ ಕನಿಷ್ಠ 2 ಎಕರೆ ಜಮೀನು ನೀಡಬೇಕು. ವಿದ್ಯುತ್ ಖಾಸಗೀಕರಣ ಕೈಬಿಡಬೇಕು. ಕೇರಳ ಮಾದರಿಯಲ್ಲಿ ಕೂಲಿಕಾರರಿಗೆ ಬ್ಯಾಂಕ್ ಮೂಲಕ ಸಬ್ಸಿಡಿ ಸಹಿತ ಸಾಲ, 60 ವರ್ಷ ವಯಸ್ಸಾಗಿರುವ ಕೂಲಿಕಾರರಿಗೆ ತಲಾ 5 ಸಾವಿರ ರೂ. ಮಾಸಿಕ ನಿವೃತ್ತಿ ವೇತನ ನೀಡಬೇಕು. ಅಸ್ಪಶ್ಯತೆ ಆಚರಿಸುತ್ತಿರುವವರ ವಿರುದ್ಧ ಪೊಲೀಸರು ಸ್ವಂಪ್ರೇರಿತವಾಗಿ ಪ್ರಕರಣ ದಾಖಲು ಮಾಡಿಕೊಳ್ಳಬೇಕೆಂದು ಒತ್ತಾಯಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts