More

    ಒಂದೇ ದಿನದಲ್ಲಿ 2,292 ಮಂದಿಗೆ ಡೆಂಗ್ಯೂ ಜ್ವರ ಪತ್ತೆ; ಜನರಲ್ಲಿ ಹೆಚ್ಚಾದ ಆತಂಕ

    ಬಾಂಗ್ಲಾದೇಶ: ಒಂದೇ ದಿನದಲ್ಲಿ ಅತಿ ಹೆಚ್ಚು ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ಬಾಂಗ್ಲಾದೇಶದಲ್ಲಿಭಾನುವಾರ ಕೇವಲ 24 ಗಂಟೆಗಳಲ್ಲಿ ಒಟ್ಟು 2,292 ಹೊಸ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.

    ಬಾಂಗ್ಲಾದೇಶದಲ್ಲಿ ಭಾನುವಾರ ಕೇವಲ 24 ಗಂಟೆಗಳಲ್ಲಿ ಒಟ್ಟು 2,292 ಹೊಸ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. 2023 ರಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಡೆಂಗ್ಯೂ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. (ಬಾಂಗ್ಲಾದೇಶವು ಅತಿ ಹೆಚ್ಚು ಸಂಖ್ಯೆಯನ್ನು ದಾಖಲಿಸಿದೆ) ಡೆಂಗ್ಯೂ ಜ್ವರದಿಂದ 9 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಡೆಂಗ್ಯೂಗೆ ಬಲಿಯಾದವರ ಸಂಖ್ಯೆ 176ಕ್ಕೆ ಏರಿಕೆಯಾಗಿದೆ. ಒಂದೇ ದಿನ ಢಾಕಾ ನಗರದಲ್ಲಿ 1,064 ಮಂದಿ ಡೆಂಗ್ಯೂ ಜ್ವರದಿಂದ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ ಉಳಿದವರಿಗೆ ಹೊರಗಡೆ ಚಿಕಿತ್ಸೆ ನೀಡಲಾಗುತ್ತಿದೆ.

    ಇದನ್ನೂ ಓದಿ: ಪತ್ನಿ, ಸೋದರಳಿಯನಿಗೆ ಗುಂಡು ಹಾರಿಸಿ ಪ್ರಾಣ ಬಿಟ್ಟ ಎಸಿಪಿ ಭರತ್​​ ಗಾಯಕ್‌ವಾಡ್

    ಬಾಂಗ್ಲಾದೇಶದ ಆಸ್ಪತ್ರೆಗಳಲ್ಲಿ 7,175 ಮತ್ತು ರಾಜಧಾನಿಯಲ್ಲಿ 4,149 ಡೆಂಗ್ಯೂ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ:VIDEO| ರೈಲ್ವೇ ಟ್ರ್ಯಾಕ್‌ನಲ್ಲಿ ನೃತ್ಯ ಮಾಡಿದ ತಾಯಿ, ರೆಕಾರ್ಡ್ ಮಾಡಿದ ಮಗಳು ಇಬ್ಬರು ಅರೆಸ್ಟ್​​

    ದೇಶದಲ್ಲಿ 32,977 ಮಂದಿ ಡೆಂಗ್ಯೂ ಸೋಂಕಿಗೆ ಒಳಗಾಗಿದ್ದು, ಈ ಪೈಕಿ 25,626 ಮಂದಿ ಗುಣಮುಖರಾಗಿದ್ದಾರೆ. ಕಳೆದ ವರ್ಷ 281 ಮಂದಿ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ. ಕಳೆದ ವರ್ಷವೂ 62,423 ಮಂದಿ ಡೆಂಗ್ಯೂ ಸೋಂಕಿಗೆ ಒಳಗಾಗಿದ್ದರು. ಕಳೆದ 21 ದಿನಗಳಲ್ಲಿ 109 ಡೆಂಗ್ಯೂ ಸಾವುಗಳು ಮತ್ತು 20,465 ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಜುಲೈ ತಿಂಗಳೊಂದರಲ್ಲೇ ಡೆಂಗ್ಯೂ ಜ್ವರದಿಂದ 109 ಮಂದಿ ಸಾವನ್ನಪ್ಪಿದ್ದಾರೆ.

     ಇದನ್ನೂ ಓದಿ: Twitter New Logo; ಹಾರಿ ಹೋಯ್ತು ಟ್ವಿಟ್ಟರ್ ಹಕ್ಕಿ, ‘X’ ಹೊಸ ಲೋಗೋ

    ಸೊಳ್ಳೆಗಳ ಸಂತಾನೋತ್ಪತ್ತಿಗೆ ಈ ಎರಡು ತಿಂಗಳು ಸೂಕ್ತವಾಗಿರುವುದರಿಂದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಡೆಂಗ್ಯೂ ಜ್ವರ ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚು ಎಂದು ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

    ಫೋಟೋ ತೆಗೆಸಿಕೊಳ್ಳಲು ಹೋಗಿ ಜಲಪಾತಕ್ಕೆ ಬಿದ್ದ ಯುವಕ; ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts