More

    Twitter New Logo; ಹಾರಿ ಹೋಯ್ತು ಟ್ವಿಟ್ಟರ್ ಹಕ್ಕಿ, ‘X’ ಹೊಸ ಲೋಗೋ

    ನವದೆಹಲಿ: ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಇಂದು ಟ್ವಿಟರ್​ ಜಾಲತಾಣ ವೇದಿಕೆಯಲ್ಲಿ ಮಹತ್ವದ ಬದಲಾವಣೆಗೆ ಮಾಡಿದ್ದಾರೆ. ಟ್ವಿಟರ್​ ಲೋಗೋ ಬದಲಾಯಿಸಿ, ಟ್ವಿಟರ್​ ಬರ್ಡ್​ಗೆ ವಿದಾಯ ಹೇಳುವ ಮೂಲಕ ಇಡೀ ವೇದಿಕೆಯನ್ನು ರೀಬ್ರ್ಯಾಂಡ್​ ಮಾಡಿದ್ದಾರೆ.

    ಟ್ವಿಟ್ಟರ್‌ನ ಅವಿಭಾಜ್ಯ ಅಂಗವಾಗಿದ್ದ ಅದರ ನೀಲಿ ಹಕ್ಕಿಯ ಲೋಗೋ ಬದಲು  ʼಎಕ್ಸ್‌ʼ ಲೋಗೋ ಕಾಣಿಸಿಕೊಳ್ಳಲಿದೆ ಎಂದು ಹೇಳುವ ಮೂಲಕ ಟ್ವಿಟರ್‌ ಲೋಗೋ ಬದಲಾವಣೆಯ ಸುಳಿವನ್ನು ಟ್ವಿಟರ್​ ಮಾಲೀಕ ಎಲನ್​ ಮಸ್ಕ್​ ಸೋಶಿಯಲ್​​ ಮೀಡಿಯಾ ಮೂಲಕವಾಗಿ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: 1 ದಿನದ ರಜೆಗೆ 500, ಇಷ್ಟದ ಡ್ಯೂಟಿಗೆ 10,000 ರೂಪಾಯಿ: ಕೆಲ KSRP ಅಧಿಕಾರಿಗಳ ಲಂಚಾವತಾರ ಬಯಲು

    ಟ್ವಿಟರ್ ಮಾಲೀಕ ಎಲಾನ್ ಮಸ್ಕ್, ಸಿಇಒ ಲಿಂಡಾ ಯಕಾರಿನೋ ನೂತನ ಲೋಗೋವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಲೋಗೋ ಬಿಡುಗಡೆ ಸಮಾರಂಭದ ಅಂಗವಾಗಿ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿರುವ ಟ್ವಿಟರ್ ಪ್ರಧಾನ ಕಚೇರಿ ಎಲ್ಇಡಿ ಲೈಟಿಂಗ್ ಮೂಲಕ ಲೋಗೋ ಹಾಕಲಾಗಿದೆ. ಎರಡು ದಿನಗಳ ಹಿಂದೆ ಲಿಂಡಾ ಯಕಾರಿನೋ ಟ್ವಿಟರ್ ರಿಬ್ರ್ಯಾಂಡಿಂಗ್ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದರು.

    ಎಲಾನ್ ಮಸ್ಕ್ ಮಾಲೀಕತ್ವ ಹೊಂದಿರುವ ಹಾಗೂ ಅತೀ ಹೆಚ್ಚಿನ ಪಾಲು ಹೊಂದಿರುವ ಬಹುತೇಕ ಕಂಪನಿಗಳ ಹೆಸರು ಅಥವಾ ಲೋಗೋದಲ್ಲಿ X ಇದೆ. ಎಲಾನ್ ಮಸ್ಕ್ ಅವರ ಬಾಹ್ಯಾಕಾಶ ಕಂಪನಿ ಹೆಸರು ಸ್ಪೇಸ್ ಎಕ್ಸ್. ಇನ್ನು ಟ್ವಿಟರ್ ಕಂಪನಿಯನ್ನು ಈಗಾಗಲೇ ಎಕ್ಸ್ ಕಾರ್ಪ್ ಅನ್ನೋ ಶೆಲ್ ಕಂಪನಿ ಜೊತೆ ಮರ್ಜ್ ಮಾಡಿದ್ದಾರೆ. ಇದೀಗ ಟ್ವಿಟರ್ ಲೋಗೋವನ್ನು ಎಕ್ಸ್ ಎಂದು ರಿ ಬ್ರ್ಯಾಂಡ್ ಮಾಡಲಾಗಿದೆ.

    ಟ್ವಿಟರ್​ ಬರ್ಡ್​ಗೆ ವಿದಾಯ: ಲೋಗೋ ಬದಲಾಯಿಸಿ ರೀಬ್ರ್ಯಾಂಡ್​ ಮಾಡಲು ಎಲನ್​ ಮಸ್ಕ್​ ಪ್ಲ್ಯಾನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts