More

    ಬರಗಾಲದ ಮಧ್ಯೆ ಕುಡಿಯುವ ನೀರಿನಿಂದ ಕಾರು ತೊಳೆದ 22 ಮಂದಿಗೆ ಬಿತ್ತು ಭಾರೀ ದಂಡ! ಸಂಗ್ರಹ ಹಣವೆಷ್ಟು? ಇಲ್ಲಿದೆ ವರದಿ

    ಬೆಂಗಳೂರು: ರಾಜ್ಯದಲ್ಲಿ ಬರಗಾಲದ ಭೀತಿ ಎದುರಾಗಿದ್ದು, ಕುಡಿಯುವ ನೀರಿಗಾಗಿ ಹಾಹಾಕಾರ ಕೇಳಿಂದಿದೆ. ರಾಜ್ಯವ್ಯಾಪಿ ನೀರಿನ ಸಮಸ್ಯೆ ತೀವ್ರವಾದ ಬೆನ್ನಲ್ಲೇ ಸರ್ಕಾರ ನೀರನ್ನು ಮಿತವಾಗಿ, ವ್ಯರ್ಥ ಮಾಡದಂತೆ ಬಳಸಬೇಕು. ಅನಗತ್ಯವಾಗಿ ನೀರು ಪೋಲು ಮಾಡುವವರಿಗೆ ಭಾರೀ ದಂಡ ಹಾಕಲಾಗುವುದು ಎಂದು ಎಚ್ಚರಿಕೆಯ ಸಂದೇಶ ರವಾನಿಸಿತ್ತು. ಇದನ್ನು ಮೀರಿ ಕಾವೇರಿ ನೀರನ್ನು ಕಾರು ತೊಳೆಯಲು ಬಳಸಿದ 22 ಕುಟುಂಬಕ್ಕೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ದಂಡ ವಿಧಿಸಿದ್ದು, ಕೇವಲ ಮೂರೇ ದಿನಗಳಲ್ಲಿ 1.1 ಲಕ್ಷ ರೂ. ದಂಡ ಸಂಗ್ರಹಿಸಿದೆ.

    ಇದನ್ನು ಓದಿ: ಲೋಕಸಭೆ ಚುನಾವಣೆಯ ಬೆನ್ನಲ್ಲೇ ಇಂದು ಮತ್ತೆ ಬಿಜೆಪಿ ಸೇರಲಿರುವ ಜನಾರ್ದನ ರೆಡ್ಡಿ!

    ಮಾರ್ಚ್​ 10ರಂದು ಪ್ರಕರಣೆ ಹೊರಡಿಸಿದ್ದ ಬಿಡಬ್ಲ್ಯೂಎಸ್​ಎಸ್​ಬಿ, ಕುಡಿಯುವ ನೀರನ್ನು ಕಾರು ತೊಳೆಯಲು, ಗಿಡಗಳಿಗೆ ನೀರು ಹಾಕಲು, ದೊಡ್ಡ ಕಟ್ಟಡಗಳ ಕಾಮಗಾರಿ ಯೋಜನೆಗಳಿಗೆ ಬಳಸುವುದು ನಿಷೇಧ ಎಂದು ಪ್ರತ್ಯೇಕವಾಗಿ ಉಲ್ಲೇಖಿಸಿತ್ತು. ಈ ನಿಯಮ ಉಲ್ಲಂಘಿಸಿದವರಿಗೆ ಭಾರೀ ಮೊತ್ತದ ದಂಡವನ್ನು ವಿಧಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟಿತ್ತು. ಆದ್ರೆ, ಕೆಲವರು ಈ ನಿಯಮ ಮುರಿದು, ಕಾವೇರಿ ನೀರನ್ನು ದುರ್ಬಳಕೆ ಮಾಡಿದ್ದಾರೆ.

    “ಕುಡಿಯುವ ನೀರಿನ ಸಮಸ್ಯೆಯಿಂದ ಇಡೀ ನಗರವೇ ತತ್ತರಿಸಿದೆ. ನಾವು ನೀಡಿದ ಆದೇಶದ ಮೇರೆಗೆ ಶುಕ್ರವಾರ ಮತ್ತು ಶನಿವಾರ ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಿದೆವು. ಕೇವಲ ಮೂರು ದಿನಗಳಲ್ಲಿ 22 ಜನರು ಕಾವೇರಿ ನೀರನ್ನು ತಮ್ಮ ಕಾರು ತೊಳೆಯಲು ಅನಗತ್ಯವಾಗಿ ಬಳಸಿರುವುದು ನಮಗೆ ತಿಳಿಯಿತು. ಇದರ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡು, ಟ್ರಾಫಿಕ್ ಪೊಲೀಸರಂತೆ ದಂಡದ ರಶೀತಿ ಕೊಟ್ಟಿದ್ದೇವೆ” ಎಂದು ಬಿಡಬ್ಲ್ಯೂಎಸ್​ಎಸ್​ಬಿ ಅಧ್ಯಕ್ಷರಾದ ವಿ. ರಾಮ್​ ಪ್ರಸಾತ್ ಮನೋಹರ್​ ತಿಳಿಸಿದ್ದಾರೆ.

    ಇದನ್ನೂ ಓದಿ: ಲಖನೌ ಸೂಪರ್‌ಜೈಂಟ್ಸ್ ಎದುರು ವಿಶಿಷ್ಠ ದಾಖಲೆ ಬರೆದ ರಾಜಸ್ಥಾನ ರಾಯಲ್ಸ್​ನ ವೇಗಿ ಬೌಲ್ಟ್, ನಾಯಕ ಸ್ಯಾಮ್ಸನ್

    22 ಕುಟುಂಬಳಿಗೆ ತಲಾ 5000 ರೂ. ದಂಡ ವಿಧಿಸಿದ ಅಧಿಕಾರಿಗಳು, ಒಟ್ಟು 1.1 ಲಕ್ಷ ರೂ. ಪಾವತಿ ಮಾಡಿಸಿಕೊಂಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಎಲ್ಲಾ ಪ್ರಕರಣಗಳು ಸ್ಥಳ ಪರಿಶೀಲನೆ ಹಾಗೂ ಸ್ಥಳೀಯರು ನೀಡಿದ ದೂರಿನ ಮೇರೆಗೆ ತೆಗೆದುಕೊಂಡ ಕ್ರಮವಾಗಿದ್ದು, ಇದನ್ನು ಮುಂದುವರೆಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ,(ಏಜೆನ್ಸೀಸ್).

    ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

    ನನಗೆ ಸಾಕಾಗಿದೆ, 1 ಗಂಟೆಗೆ 5 ಲಕ್ಷ ರೂ. ಕೊಡಿ, ಬನ್ನಿ… ವೈರಲ್ ಆಗ್ತಿದೆ ಈ ನಿರ್ದೇಶಕನ ಹೇಳಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts