More

    ಲಖನೌ ಸೂಪರ್‌ಜೈಂಟ್ಸ್ ಎದುರು ವಿಶಿಷ್ಠ ದಾಖಲೆ ಬರೆದ ರಾಜಸ್ಥಾನ ರಾಯಲ್ಸ್​ನ ವೇಗಿ ಬೌಲ್ಟ್, ನಾಯಕ ಸ್ಯಾಮ್ಸನ್

    ಜೈಪುರ: ನಾಯಕ ಸಂಜು ಸ್ಯಾಮ್ಸನ್ (82* ರನ್, 52 ಎಸೆತ, 3 ಬೌಂಡರಿ, 6 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್-17ನೇ ಆವೃತ್ತಿಯಲ್ಲಿ ಲಖನೌ ಸೂಪರ್‌ಜೈಂಟ್ಸ್ ಎದುರು 20 ರನ್‌ಗಳ ಗೆಲುವು ದಾಖಲಿಸಿ ಶುಭಾರಂಭ ಕಂಡಿದೆ. ಕನ್ನಡಿಗ ಕೆಎಲ್ ರಾಹುಲ್ ಗಾಯದಿಂದ ಚೇತರಿಸಿಕೊಂಡ ಬಳಿಕ ಕಣಕ್ಕಿಳಿದ ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿದರು.
    ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ರಾಜಸ್ಥಾನ, ಸಂಜು ಸ್ಯಾಮ್ಸನ್ ಹಾಗೂ ರಿಯಾನ್ ಪರಾಗ್ (43) ಜತೆಯಾಟದ ಬಲದಿಂದ 4 ವಿಕೆಟ್‌ಗೆ 193 ರನ್ ಪೇರಿಸಿತು. ಪ್ರತಿಯಾಗಿ 60 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡ ಲಖನೌ ಸಂಕಷ್ಟಕ್ಕೆ ಸಿಲುಕಿತು. ಆಗ ಜತೆಯಾದ ನಾಯಕ ಕೆಎಲ್ ರಾಹುಲ್ (58 ರನ್, 44 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ನಿಕೋಲಸ್ ಪೂರನ್ (64* ರನ್, 41 ಎಸೆತ, 4 ಬೌಂಡರಿ, 4 ಸಿಕ್ಸರ್) ಐದನೇ ವಿಕೆಟ್‌ಗೆ 52 ಎಸೆತದಲ್ಲಿ 85 ರನ್ ಕಸಿದು ಚೇಸಿಂಗ್‌ಗೆ ಬಲ ತುಂಬಿದರು. ಆದರೆ ಸ್ಲಾಗ್ ಓವರ್‌ಗಳಲ್ಲಿ ಬಿಗಿಬೌಲಿಂಗ್ ನಡೆಸಿದ ರಾಜಸ್ಥಾನ ಕಡಿವಾಣ ಹೇರಿತು. ಅಂತಿಮವಾಗಿ ಲಖನೌ 6 ವಿಕೆಟ್‌ಗೆ 173 ರನ್‌ಗಳಿಸಲಷ್ಟೇ ಶಕ್ತವಾಯಿತು. ಅಂತಿಮ ಓವರ್‌ನಲ್ಲಿ ಲಖನೌ ಗೆಲುವಿಗೆ 25 ರನ್ ಅಗತ್ಯವಿತ್ತು.

    ಸ್ಯಾಮ್ಸನ್ ನಾಯಕನಾಟ
    ರಾಜಸ್ಥಾನ ತವರಿನಲ್ಲಿ ಆರಂಭಿಕ ಆಘಾತ ಕಂಡಿತು. ಜೋಸ್ ಬಟ್ಲರ್ (11) ಹಾಗೂ ಯಶಸ್ವಿ ಜೈಸ್ವಾಲ್ (24) ಬೇಗನೆ ನಿರ್ಗಮಿಸಿದರು. ಬಳಿಕ 3ನೇ ವಿಕೆಟ್‌ಗೆ ಜತೆಯಾದ ಸ್ಯಾಮ್ಸನ್-ಪರಾಗ್ ಲಖನೌ ಬೌಲರ್‌ಗಳ ಬೆವರಿಳಿಸಿದರು. ಇವರಿಬ್ಬರು 59 ಎಸೆತದಲ್ಲಿ 93 ರನ್ ಕಸಿದು ರನ್‌ಗಳಿಕೆಗೆ ಚುರುಕು ನೀಡಿದರು. ಶಿಮ್ರೊನ್ ಹೆಟ್ಮೆಯರ್ (5) ಹೆಚ್ಚು ಹೊತ್ತು ನಿಲ್ಲಲಿಲ್ಲ. ಸ್ಯಾಮ್ಸನ್ 33 ಎಸೆತಗಳಲ್ಲಿ ಅರ್ಧಶತಕಗಳಿಸಿದರು. ನಂತರ ಸ್ಯಾಮ್ಸನ್ ಜತೆಯಾದ ಧ್ರುವ ಜುರೆಲ್ (20*) ಉತ್ತಮ ಸಾಥ್ ನೀಡಿದರು. ಈ ಜೋಡಿ 22 ಎಸೆತದಲ್ಲಿ 43 ರನ್ ಕಸಿಯಿತು. ಅಂತಿಮ ಐದು ಓವರ್‌ನಲ್ಲಿ ರಾಜಸ್ಥಾನ 50 ರನ್ ಕಲೆಹಾಕಿ 190ರ ಗಡಿ ದಾಟಿತು.

    *6. ಕೆಎಲ್ ರಾಹುಲ್ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಿದ 14 ಇನಿಂಗ್ಸ್‌ಗಳಲ್ಲಿ 6ನೇ ಬಾರಿ 50 ಪ್ಲಸ್ ರನ್ ಕಲೆಹಾಕಿದರು.

    23: ರಾಜಸ್ಥಾನ ರಾಯಲ್ಸ್ ಆಡಿದ ಎಲ್ಲ ಟಿ20 ಪಂದ್ಯಗಳಲ್ಲಿ ಗರಿಷ್ಠ ಅರ್ಧಶತಕ ಸಿಡಿಸಿದ ಜೋಸ್ ಬಟ್ಲರ್ (71 ಇನಿಂಗ್ಸ್), ಅಜಿಂಕ್ಯರಹಾನೆ (99 ಇನಿಂಗ್ಸ್) ದಾಖಲೆ ಸರಿಗಟ್ಟಿದರು.

    *5: ಸಂಜು ಸ್ಯಾಮ್ಸನ್ 2020ರಿಂದ ಐಪಿಎಲ್‌ನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಸತತ 5ನೇ ಬಾರಿ 50 ಪ್ಲಸ್ ರನ್ ಕಲೆಹಾಕಿದರು.

    1. ವೇಗಿ ಟ್ರೆಂಟ್ ಬೌಲ್ಟ್ 2020ರಿಂದ ಆಡಿದ ಐಪಿಎಲ್ ಪಂದ್ಯಗಳ ಮೊದಲ ಓವರ್‌ನಲ್ಲಿ ಇದುವರೆಗೆ 23 ವಿಕೆಟ್ ಕಬಳಿಸಿದ್ದಾರೆ. ಭುವನೇಶ್ವರ್ ಕುಮಾರ್ ಹಾಗೂ ಮೊಹಮದ್ ಶಮಿ (8) ನಂತರದ ಸ್ಥಾನದಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts