More

    ಚೀನಾ: ಅಗ್ನಿ ಅವಘಡದಲ್ಲಿ 13 ಮಕ್ಕಳು ಸೇರಿ 21 ಮಂದಿ ಸಾವು

    ಬೀಜಿಂಗ್​: ಚೀನಾದಲ್ಲಿ ಎರಡು ಪ್ರತ್ಯೇಕ ಬೆಂಕಿ ಅವಘಡದಲ್ಲಿ ಶಾಲಾ ಮಕ್ಕಳು ಸೇರಿ ಒಟ್ಟು 21 ಮಂದಿ ಸಾವನ್ನಪ್ಪಿರುವ ಎಂದು ಸ್ಥಳೀಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

    ಇದನ್ನೂ ಓದಿ:ವರದಕ್ಷಿಣೆಯಾಗಿ ಸ್ಕಾರ್ಪಿಯೋ ಕಾರು ನೀಡಲಿಲ್ಲ ಎಂದು ಪತ್ನಿಗೆ ತಲಾಖ್ ನೀಡಿದ ಪತಿ

    ಶುಕ್ರವಾರ ರಾತ್ರಿ ಹೆನಾನ್​ ಪ್ರಾಂತ್ಯದ ಯನ್​ಶನ್ಪು ಹಳ್ಳಿಯ ಯಿಂಗ್​ಕೈ ಶಾಲೆಯಲ್ಲಿ ಸಂಭವಿಸಿದ ಅವಘಡದಲ್ಲಿ ಮೂರನೇ ತರಗತಿಯ 13 ಶಾಲಾ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ. ಗಾಯಗೊಂಡಿರುವ ಓರ್ವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಶುಕ್ರವಾರ ರಾತ್ರಿ 11 ಗಂಟೆಗೆ ಶಾಲೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಸ್ಥಳೀಯ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ತಿಳಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಷಿನ್​ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಪೂರ್ವ ಚೀನಾದ ಚಾಂಗ್​ಜೊವ್​ ನಗರದ ಕೈಗಾರಿಕಾ ಘಟಕದ ಕಾರ್ಯಾಗಾರದಲ್ಲಿ ಸ್ಫೂಟ ಸಂಭವಿಸಿ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ಮಾಡಿದೆ.

    ನವೆಂಬರ್‌ನಲ್ಲಿ ಶಾಂಕ್ಸಿ ಪ್ರಾಂತ್ಯದ ಲುಲಿಯಾಂಗ್ ನಗರದಲ್ಲಿನ ಕಚೇರಿ ಕಟ್ಟಡದಲ್ಲಿ ದೊಡ್ಡ ಬೆಂಕಿ ಕಾಣಿಸಿಕೊಂಡ ನಂತರ 26 ಜನರು ಸಾವನ್ನಪ್ಪಿದರು. ಕಳೆದ ಏಪ್ರಿಲ್‌ನಲ್ಲಿ ಬೀಜಿಂಗ್‌ನಲ್ಲಿ ನಡೆದ ಆಸ್ಪತ್ರೆಯ ಬೆಂಕಿಯು 29 ಜನರನ್ನು ಬಲಿ ತೆಗೆದುಕೊಂಡಿತ್ತು.

    ಛತ್ತೀಸಗಢ: ಎನ್​ಕೌಂಟರ್​ನಲ್ಲಿ ಐದು ನಕ್ಸಲರ ಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts