More

    ಪ್ರವಾಸಿ ಪ್ರಿಯರಿಗೆ ಗುಡ್​ ನ್ಯೂಸ್​: 2024ರಲ್ಲಿ ಇರಲಿವೆ 9 ಲಾಂಗ್​ ವೀಕೆಂಡ್ಸ್​!

    ಬೆಂಗಳೂರು: ಹೊಸ ವರ್ಷ ಸಂಭ್ರಮಾಚರಣೆಗೆ ದಿನಗಣನೆ ಆರಂಭವಾಗಿದೆ. 2023ಕ್ಕೆ ಗುಡ್​ ಬೈ ಹೇಳಿ 2024ರ ಹೊಸ ಸಂವತ್ಸರವನ್ನು ಬರಮಾಡಿಕೊಳ್ಳಲು ಎಲ್ಲರು ಎದುರು ನೋಡುತ್ತಿದ್ದಾರೆ. ಇದರ ನಡುವೆ ನಿಮಗೆಲ್ಲರಿಗೂ ಒಂದು ಗುಡ್​ ನ್ಯೂಸ್​ ಇದೆ. ಅದೇನೆಂದರೆ, ಮುಂದಿನ ವರ್ಷದಲ್ಲಿ 9 ದೀರ್ಘ ವಾರಾಂತ್ಯ ಅಥವಾ ವೀಕೆಂಡ್ಸ್​ ಇರಲಿದೆ.

    ಈಗಾಗಲೇ ರಾಜ್ಯ ಸರ್ಕಾರ 2024ನೇ ಸಾಲಿನ 25 ಸರ್ಕಾರಿ ರಜಾ ದಿನಗಳನ್ನು ಘೋಷಣೆ ಮಾಡಿದೆ. ಇದರೊಂದಿಗೆ ಮೂರು ಹೆಚ್ಚುವರಿ ರಜೆಗಳು ಎರಡನೇ ಶನಿವಾರಗಳು ಹಾಗೂ ಭಾನುವಾರದೊಂದಿಗೆ ಸೇರಿಕೊಳ್ಳುತ್ತದೆ. ಇದು ಬೇಸರದ ಸಂಗತಿಯಾದರೂ, ಗಮನಿಸಬೇಕಾದ ಬಹು ಮುಖ್ಯವಾದ ಸಂಗತಿ ಏನೆಂದರೆ, ಈ ರಜಾ ದಿನಗಳಲ್ಲಿ 9 ರಜೆಗಳು ಸೋಮವಾರ ಅಥವಾ ಶುಕ್ರವಾರ ಬರುವುದರಿಂದ 2024ರಲ್ಲಿ ಜನರು ದೀರ್ಘ ವಾರಂತ್ಯ ಅಥವಾ ಲಾಂಗ್​ ವೀಕೆಂಡ್ಸ್​ ಖುಷಿಯನ್ನು ಅನುಭವಿಸಬಹುದಾಗಿದೆ.

    ಮುಂದಿನ ವರ್ಷದಲ್ಲಿ ಜನವರಿ 15ರಂದು ಯುಗಾದಿ, ಸೆಪ್ಟೆಂಬರ್​ 16ರಂದು ಈದ್​ ಮಿಲಾದ್​ ಮತ್ತು ನವೆಂಬರ್​ 18ರಂದು ಕನಕದಾಸ ಜಯಂತಿಯ ವಿಶೇಷ ರಜಾ ದಿನಗಳು ಸೋಮವಾರ ಇರಲಿವೆ. ಜನವರಿ 26 ಗಣರಾಜ್ಯೋತ್ಸವ, ಮಾರ್ಚ್​ 8ರಂದು ಮಹಾ ಶಿವರಾತ್ರಿ, ಮೇ 10ರಂದು ಅಕ್ಷಯ ತೃತೀಯ, ಅಕ್ಟೋಬರ್​ 11ರಂದು ಆಯುಧ ಪೂಜಾ ಮತ್ತು ನವೆಂಬರ್​ 1ರಂದು ಕನ್ನಡ ರಾಜ್ಯೋತ್ಸವದ ವಿಶೇಷ ರಜಾ ದಿನಗಳು ಶುಕ್ರವಾರ ಇರಲಿವೆ.

    ಪ್ರವಾಸದ ಮೋಜು-ಮಸ್ತಿಗೆ ಒಳ್ಳೆಯ ಸಮಯ
    ಈ ಬಾರಿ 9 ದೀರ್ಘ ವೀಕೆಂಡ್ಸ್​ ದೊರೆಯುವರಿಂದ ಪ್ರವಾಸಿ ಪ್ರಿಯರಿಗೆ ಒಳ್ಳೆಯ ಅವಕಾಶವಾಗಿದೆ. ಮೊದಲೇ ಪ್ಲ್ಯಾನ್​ ಮಾಡಿಕೊಂಡರೆ ದೀರ್ಘ ವೀಕೆಂಡ್ಸ್​ನ ಲಾಭ ಪಡೆಯಬಹುದು. ಕುಟುಂಬದೊಂದಿಗೆ ಒಂದು ಉತ್ತಮ ಸಮಯ ಕಳೆಯಲು ದೀರ್ಘ ವಾರಂತ್ಯ ಒಳ್ಳೆಯ ಅವಕಾಶ ನೀಡಲಿದೆ. ನಿತ್ಯ ಕೆಲಸದ ಒತ್ತಡದಲ್ಲಿ ದೀರ್ಘ ವಿರಾಮಕ್ಕಾಗಿ ಎದುರು ನೋಡುವವರಿಗೆ 2024ರ ಲಾಂಗ್​ ವೀಕೆಂಡ್ಸ್​ ಒಂದು ಒಳ್ಳೆಯ ಸಮಯವಾಗಿದೆ.

    ಇನ್ನು ಹೆಚ್ಚುವರಿಯಾಗಿ ಏಪ್ರಿಲ್​ 12ರಂದು ಮಹಾವೀರ ಜಯಂತಿ ಮತ್ತು ಅಕ್ಟೋಬರ್​ 12ರಂದು ವಿಜಯದಶಮಿ ಎರಡನೇ ಶನಿವಾರದಂದು ಬರುತ್ತವೆ. ಏಪ್ರಿಲ್​ 14ರ ಅಂಬೇಡ್ಕರ್ ಜಯಂತಿ ಭಾನುವಾರ ಇರುವುದರಿಂದ ಈ ಮೂರು ರಜೆಗಳು ಮಾಮೂಲಿ ರಜೆಗಳೊಂದಿಗೆ ಸೇರಿಕೊಂಡಿವೆ. ಇದಲ್ಲದೆ, ಕೊಡಗು ಜಿಲ್ಲೆಯಲ್ಲಿ ಸೆಪ್ಟೆಂಬರ್ 3 ರಂದು ಕೈಲ್ ಮುಹೂರ್ತ, ಅಕ್ಟೋಬರ್ 17 ರಂದು ತುಲಾ ಸಂಕ್ರಮಣ ಮತ್ತು ಡಿಸೆಂಬರ್ 14 ರಂದು ಹುತ್ತರಿ ವಿಶೇಷವಾಗಿ ರಜಾದಿನಗಳನ್ನು ಆಚರಿಸಲಾಗುತ್ತದೆ. (ಏಜೆನ್ಸೀಸ್​)

    ಇಂದಿನಿಂದ 2 ದಿನ ಬೆಂಗ್ಳೂರಲ್ಲಿ ಕಂಬಳ ಕಲರವ: ಪ್ರವೇಶ ಉಚಿತ, ಇಲ್ಲಿದೆ ಕಾರ್ಯಕ್ರಮಗಳ ವಿವರ…

    ವಿಶ್ವಕಪ್ ಫೈನಲ್​​ ಹಿಂದಿತ್ತಾ ಬಿಜೆಪಿಯ ಮಾಸ್ಟರ್ ಪ್ಲ್ಯಾನ್​? ಮೋದಿ ಸ್ಕ್ರಿಪ್ಟ್​ ತಪ್ಪಾಗಿದೆ ಎಂದ ಪ್ರಕಾಶ್​ ರಾಜ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts