More

  ವಿಶ್ವಕಪ್ ಫೈನಲ್​​ ಹಿಂದಿತ್ತಾ ಬಿಜೆಪಿಯ ಮಾಸ್ಟರ್ ಪ್ಲ್ಯಾನ್​? ಮೋದಿ ಸ್ಕ್ರಿಪ್ಟ್​ ತಪ್ಪಾಗಿದೆ ಎಂದ ಪ್ರಕಾಶ್​ ರಾಜ್​!

  ಬೆಂಗಳೂರು: ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುಂಡ ಬಳಿಕ ಟೀಮ್​ ಇಂಡಿಯಾದ ಡ್ರೆಸ್ಸಿಂಗ್​ ರೂಮ್​ಗೆ ತೆರಳಿ ಆಟಗಾರರಿಗೆ ಸಾಂತ್ವಾನ ಹೇಳಿದ ಪ್ರಧಾನಿ ಮೋದಿ ಅವರನ್ನು ಬಹುಭಾಷ ನಟ ಪ್ರಕಾಶ್​ ರಾಜ್​ ಅವರು ಮತ್ತೊಮ್ಮೆ ಟೀಕಿಸಿದ್ದಾರೆ.

  ಅಮೋಕ್​ ಹೆಸರಿನ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ವಿಷಯಕ್ಕೆ ಪ್ರಕಾಶ್​ ರಾಜ್​ ಪ್ರತಿಕ್ರಿಯೆ ನೀಡಿದ್ದು, ಭಾರತದ ಹೀನಾಯ ಸೋಲಿನ ಬಳಿಕ ಸುಪ್ರೀಂ ನಟನ ಸ್ಕ್ರಿಪ್ಟ್​ ತಪ್ಪಾಗಿದೆ ಎಂದು ಪ್ರಧಾನಿ ಮೋದಿ ಅವರನ್ನು ಅಣಕಿಸಿದ್ದಾರೆ.

  ಅಮೋಕ್​​ ಎಕ್ಸ್​ ಖಾತೆಯಲ್ಲಿ ಏನಿತ್ತು?
  ರಾಜಸ್ಥಾನದ ಬಿಜೆಪಿ ನಾಯಕರೊಬ್ಬರು ಕಾಂಗ್ರೆಸ್ ನಾಯಕ ಸುಪ್ರಿಯಾ ಶ್ರೀನೇತ್ ಅವರಿಗೆ ಆಘಾತಕಾರಿ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಇದನ್ನು ಕೇಳಿದರೆ ನಿಮ್ಮ ಮನಸ್ಸು ಸಂಪೂರ್ಣವಾಗಿ ಸ್ಫೋಟಿಸುತ್ತದೆ. ವಿಶ್ವಕಪ್​ ಫೈನಲ್​ಗೂ ಮುಂಚೆಯೇ ರಾಜಸ್ಥಾನದ ಬಿಜೆಪಿ ಬ್ಯಾನರ್ ಮತ್ತು ಹೋರ್ಡಿಂಗ್​ಗಳನ್ನು ಮುದ್ರಿಸುವ ಮೂಲಕ ಭಾರೀ ಸಿದ್ಧತೆ ಮಾಡಿಕೊಂಡಿತ್ತು. ಈ ಬ್ಯಾನರ್‌ಗಳಲ್ಲಿ ವಿಜಯ(ವಿ)ದ ಸಂಕೇತದ ಜತೆಗೆ ಕ್ರಿಕೆಟ್ ಜರ್ಸಿಯಲ್ಲಿ ಪ್ರಧಾನಿ ಮೋದಿಯವರ ಫೋಟೋ ಇತ್ತು. ಚುನಾವಣಾ ಹೋರ್ಡಿಂಗ್‌ಗಳನ್ನು ತೆಗೆದುಹಾಕಿ ಪ್ರಧಾನಿ ಜೊತೆಗಿನ ಟೀಂ ಇಂಡಿಯಾ ಆಟಗಾರರ ಫೋಟೋಗಳನ್ನು ಹಾಕಲು ಯೋಜನೆ ರೂಪಿಸಲಾಗಿತ್ತು. ಅಲ್ಲದೆ, ತೆರೆದ ಬಸ್​ನಲ್ಲಿ ಐಸಿಸಿ ಟ್ರೋಫಿಯೊಂದಿಗೆ ಪ್ರಧಾನಿ ಮೋದಿ ಅವರೊಂದಿಗೆ ಭಾರತೀಯ ಆಟಗಾರರು ಜೈಪುರದಲ್ಲಿ ರೋಡ್‌ಶೋ ನಡೆಸಲು ಯೋಜನೆ ರೂಪಿಸಲಾಗಿತ್ತು ಎಂಬುದನ್ನು ಬಿಜೆಪಿ ನಾಯಕ ಬಹಿರಂಗಪಡಿಸಿದ್ದಾರೆ.

  ಅತ್ಯಂತ ಕುತೂಹಲಕಾರಿ ಸಂಗತಿ ಏನೆಂದರೆ ಈ ಯೋಜನೆಗಳು ಮತ್ತು ಚಿತ್ರಗಳನ್ನು ಸುಪ್ರಿಯಾ ಶ್ರೀನೇತ್​ ಅವರಿಗೆ ಬಿಜೆಪಿ ನಾಯಕ ತೋರಿಸಿ, ಉನ್ನತ ನಾಯಕರಲ್ಲಿ ಈ ವಿಚಾರವನ್ನು ಗೌಪ್ಯವಾಗಿಟ್ಟಿರುವುದರಿಂದ ಯಾರೊಂದಿಗು ಹಂಚಿಕೊಳ್ಳಬೇಡಿ ಎಂದು ಹೇಳಿದರು. ಭಾನುವಾರ ಆಸ್ಟ್ರೇಲಿಯಾ ವಿರುದ್ಧ ಭಾರತ ವಿಶ್ವಕಪ್​ ಗೆದ್ದಿದ್ದರೆ ಬಿಜೆಪಿಯವರು ಎಷ್ಟು ಕೆಳಮಟ್ಟಕ್ಕೆ ಹೋಗುತ್ತಾರೆ ಎಂದು ನೀವು ಊಹಿಸಬಲ್ಲಿರಾ? ಇದು ಕೇವಲ ಅವಾಸ್ತವವಾಗಿದೆ. ಆದರೆ ನನಗೇನೂ ಆಶ್ಚರ್ಯವಿಲ್ಲ. ವಾಸ್ತವವಾಗಿ, ವಿಶ್ವಕಪ್​ ಕಳೆದುಕೊಂಡ ನಂತರವೂ ಪ್ರಚಾರ ಪಡೆಯಲು ಏನನ್ನೂ ಬಿಡಲಿಲ್ಲ ಎಂದು ಅಮೋಕ್​ ಹೆಸರಿನ ಎಕ್ಸ್​ ಖಾತೆಯಲ್ಲಿ ಬರೆಯಲಾಗಿದೆ.

  ಪ್ರಕಾಶ್​ ರಾಜ್​ ಅವರು ತಮ್ಮ ಮತ್ತೊಂದು ಎಕ್ಸ್​ ಪೋಸ್ಟ್​ನಲ್ಲಿ ಪ್ರಧಾನಿ ಮೋದಿ ಅವರ ಡ್ರೆಸ್ಸಿಂಗ್​ ರೂಮ್​ ವಿಡಿಯೋವನ್ನು ಶೇರ್​ ಮಾಡಿಕೊಂಡು ಇದನ್ನು ಯಾರೇ ಮಾಡಿದರೂ.. ನೀವು ಮಾತ್ರ ಮಾಡಬೇಡಿ. ದಯವಿಟ್ಟು ನಗು ಎಂದು ಬರೆದುಕೊಂಡಿದ್ದಾರೆ. ಪ್ರಕಾಶ್​ ರಾಜ್​ ಅವರ ಪೋಸ್ಟ್​ ವೈರಲ್​ ಆಗುತ್ತಿದ್ದು, ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.

  ಪಂದ್ಯದ ವಿಚಾರಕ್ಕೆ ಬರುವುದಾದರೆ, ನ.19ರಂದು ಅಹಮಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ ಟೂರ್ನಿಯ ಮಹತ್ವದ ಫೈನಲ್​ ಪಂದ್ಯದಲ್ಲಿ ಭಾರತ ನೀಡಿದ 241 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ಆಸಿಸ್ ಕೇವಲ​ 43 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 241 ರನ್​ ಗಳಿಸುವ ಮೂಲಕ ಸುಲಭವಾಗಿ ಗುರಿ ಮುಟ್ಟಿತು. ಕೇವಲ 47 ರನ್​ಗಳಿಗೆ ಪ್ರಮುಖ 3 ವಿಕೆಟ್​ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿದ ಆಸಿಸ್​​ಗೆ ಟ್ರಾವಿಸ್​ ಹೆಡ್ ಆಪತ್ಭಾಂದವರಾದರು. ನಿರ್ಣಾಯಕ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಹೆಡ್ ( 137 ರನ್​ 120 ಎಸೆತ 15 ಬೌಂಡರಿ, 4ಸಿಕ್ಸರ್​) ​, ಆಸಿಸ್​ಗೆ ಸುಲಭ ಗೆಲುವು ತಂದುಕೊಟ್ಟರು. ಹೆಡ್​ ಜತೆಗೆ ಮಾರ್ನಸ್​ ಲಬುಶೇನ್​ ಉತ್ತಮ ಸಾಥ್​ ನೀಡಿದರು. ಈ ಜೋಡಿ ನಿರ್ಣಾಯಕ ಪಂದ್ಯದಲ್ಲಿ 192 ರನ್​ಗಳ ಅಮೋಘ ಜತೆಯಾಟವಾಡಿದರು. ತಾಳ್ಮೆಯ ಆಟವಾಡಿದ ಲಬುಶೇನ್ 110​ ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 58 ರನ್​ಗಳ ಅರ್ಧಶತಕ ಸಿಡಿಸಿ ಮಿಂಚಿದರು. (ಏಜೆನ್ಸೀಸ್​)

  ಅಪ್ಪ ರೂಮ್​ನಲ್ಲಿದ್ದಾರೆ ಇನ್ನೊಂದು ತಿಂಗಳಲ್ಲಿ ನಗ್ತಾರೆ… ರೋಹಿತ್​ ಪುತ್ರಿಯ ವಿಡಿಯೋ ವೈರಲ್​

  ಕೊನೇ ಎಸೆತದಲ್ಲಿ ರಿಂಕು ಸಿಂಗ್​ ಸಿಡಿಸಿದ ಸಿಕ್ಸರ್​ ವ್ಯರ್ಥವಾಗಿದ್ದೇಕೆ? ಗೆಲುವಿನ ಸಿಕ್ಸರ್​ಗೆ “ನೋ” ಎಂದ ಅಂಪೈರ್​!

  ವಿಶ್ವಕಪ್​ ಟ್ರೋಫಿಯ ಮೇಲೆ ಕಾಲಿಟ್ಟ ಮಿಚೆಲ್​ ಮಾರ್ಷ್​ ವಿರುದ್ಧ ಗುಡುಗಿದ ಮೊಹಮ್ಮದ್​ ಶಮಿ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts