More

    2024ರ ಬಹುನಿರೀಕ್ಷಿತ ದಕ್ಷಿಣ ಭಾರತೀಯ ಸಿನಿಮಾಗಳಿವು; ನಿಮ್ಮ ನೆಚ್ಚಿನ ಸ್ಟಾರ್​ ನಟರ ಚಿತ್ರಗಳು ಈ ಪಟ್ಟಿಯಲಿದ್ಯಾ ನೋಡಿ

    ಬೆಂಗಳೂರು: ಈ ವರ್ಷದ ಪ್ರಾರಂಭದಲ್ಲಿ ಸಂಕ್ರಾಂತಿ ಹಬ್ಬಕ್ಕೆ ಟಾಲಿವುಡ್​ನ ಸಾಲು ಸಾಲು ಸಿನಿಮಾಗಳು ತೆರೆಕಂಡು, ಸಿನಿಪ್ರೇಕ್ಷಕರನ್ನು ಮನರಂಜಿಸಲು ಮುಂಚೂಣಿಯಲ್ಲಿತ್ತು. ಕೆಲವು ಚಿತ್ರಗಳು ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರಿತು. ಎಲ್ಲಾ ಭಾಷೆಯ ಫಿಲಂಗಳು ಸಹ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡುವಲ್ಲಿ ಸಫಲವಾಗಿದೆ. ಈ ಪೈಕಿ ಹಿಟ್ ಆಗಿದ್ದು ಮಾತ್ರ ಬೆರಳೆಣಿಕೆಯಷ್ಟು.

    ಇದನ್ನೂ ಓದಿ: ಮತದಾನ ಸಮೀಪಿಸುತ್ತಿರುವುದರಿಂದ ಕಾರ್ಯಪ್ರೌವೃತ್ತರಾಗಿ ಆಮಿಷ ತಡೆಯಿರಿ: ರಾಜ್ಯದ ವಿಶೇಷ ವೆಚ್ಚ ವೀಕ್ಷಕ ಬಿ.ಮುರಳಿಕುಮಾರ ಸೂಚನೆ

    ಕಳೆದ ನಾಲ್ಕು ತಿಂಗಳ ಹಿಂದೆ ಯಾವೆಲ್ಲಾ ಸಿನಿಮಾಗಳು ಹಿಟ್ ಆಯಿತು ಎಂದು ನೋಡುವುದಾದರೆ, ಓಪನ್​ಹೈಮರ್​, ಫೈಟರ್, ಬೇಬಿ, ಸೈತಾನ್, ಗುಂಟೂರು ಕಾರಂ, ಹನು-ಮ್ಯಾನ್, ಟಿಲ್ಲು ಸ್ಕ್ವೇರ್, ಪ್ರೇಮಲು, ಮಂಜುಮ್ಮೆಲ್ ಬಾಯ್ಸ್ ಮತ್ತು ದಿ ಗೋಟ್ ಲೈಫ್ ಮುಂತಾದ ದಕ್ಷಿಣ ಭಾರತದ ಚಲನಚಿತ್ರಗಳು ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸಿವೆ. ಈ ಮೂಲಕ ವಿತರಕರಿಗೆ ಭಾರಿ ಲಾಭವನ್ನು ತಂದುಕೊಟ್ಟಿದೆ.

    ಈಗ ಮುಂಬರುವ ಸಿನಿಮಾಗಳ ಮೇಲೆ ಭಾರೀ ನಿರೀಕ್ಷೆಗಳು ಹೆಚ್ಚಿದ್ದು, ಸಿನಿಪ್ರೇಕ್ಷಕರು ತಮ್ಮ ನೆಚ್ಚಿನ ಸ್ಟಾರ್​ ನಟರ ಚಿತ್ರಗಳ ರಿಲೀಸ್​ಗಾಗಿ ಎದುರುನೋಡುತ್ತಿದ್ದಾರೆ. ಆ ಪೈಕಿ ಸುಕುಮಾರ್ ನಿರ್ದೇಶನದ ಹಾಗೂ ಟಾಲಿವುಡ್​ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2: ದಿ ರೂಲ್, ಜೂ. ಎನ್‌ಟಿಆರ್ ಅಭಿನಯದ ದೇವರ, ಪ್ರಭಾಸ್ ನಟನೆಯ ಕಲ್ಕಿ 2898 ಎಡಿ, ಗೇಮ್ ಚೇಂಜರ್ ಮತ್ತು ರಾಮ್ ಚರಣ್ ಮತ್ತು ಕಮಲ್ ಹಾಸನ್ ಮುಖ್ಯಭೂಮಿಕೆಯಲ್ಲಿರುವ ಇಂಡಿಯನ್ 2, ತಮಿಳು ನಟ ಸೂರ್ಯ ಅಭಿನಯದ ಕಂಗುವ ಚಿತ್ರಗಳ ಸಿಕ್ಕಾಪಟ್ಟೆ ನಿರೀಕ್ಷೆಯಿದೆ. ಈ ಸಿನಿಮಾಗಳು ಭಾರತೀಯ ಬಾಕ್ಸ್​ ಆಫೀಸ್​ ಲೆಕ್ಕಾಚಾರಗಳನ್ನು ಬದಲಾಯಿಸಲಿವೆ ಎಂದು ಊಹಿಸಲಾಗಿದೆ.

    ಇದನ್ನೂ ಓದಿ: ಹಿರಿಯ ಪತ್ರಕರ್ತ, ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಅರ್ಜುನ್ ದೇವ ನಿಧನ

    ಇದೇ ಜೂನ್‌ನಲ್ಲಿ ಇಂಡಿಯನ್ 2 ಪ್ರೇಕ್ಷಕರ ಎದುರು ಹಾಜರಾಗಲು ಸಿದ್ಧವಿದ್ದರೆ, ಆಗಸ್ಟ್ 15ರಂದು ಪುಷ್ಪ 2 ಬಿಡುಗಡೆಯಾಗಲಿದೆ. ದೇವರ ಅಕ್ಟೋಬರ್ 10ರಂದು ಅದ್ಧೂರಿ ರಿಲೀಸ್​ಗೆ ಸಜ್ಜಾದರೆ, ಕಲ್ಕಿ 2898 AD ಮತ್ತು ಗೇಮ್ ಚೇಂಜರ್, ಕಂಗುವ ಚಿತ್ರಗಳಿಗೆ ಇನ್ನೂ ಅಧಿಕೃತ ಬಿಡುಗಡೆ ದಿನಾಂಕ ಫಿಕ್ಸ್​ ಆಗುವುದು ಬಾಕಿ ಉಳಿದಿದೆ. ಸದ್ಯ ಈ ಚಿತ್ರಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ, ನಿರೀಕ್ಷೆ ವ್ಯಕ್ತವಾಗಿದ್ದು, ಟಿಕೆಟ್ ಖರೀದಿಯಲ್ಲಿ ದೊಡ್ಡ ಮಟ್ಟದ ದಾಖಲೆ ನಿರ್ಮಿಸಬಹುದು ಎಂದು ಹೇಳಲಾಗಿದೆ,(ಏಜೆನ್ಸೀಸ್).

    “ಹಾರ್ದಿಕ್ ನಾಯಕತ್ವ ಹೀಗೆ ಮುಂದುವರಿದರೆ…” ಪಾಂಡ್ಯ ಕ್ಯಾಪ್ಟನ್ಸಿ ಬಗ್ಗೆ ಭವಿಷ್ಯ ನುಡಿದ ಮನೋಜ್ ತಿವಾರಿ!

    4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts