More

    20 ವರ್ಷದ ಪುತ್ರಿಯ ಅಮಾನುಷ ಕೊಲೆ: ಪಾಲಕರಿಂದಲೇ ಮಗಳ ಮರ್ಯಾದಾಗೇಡು ಹತ್ಯೆ?

    ಹೈದರಾಬಾದ್: ಮಗಳು ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ ಗರ್ಭಿಣಿಯಾಗಿದ್ದು, ಗರ್ಭಪಾತಕ್ಕೆ ನಿರಾಕರಿಸಿದ್ದಕ್ಕೆ ಆಕೆಯ ಹೆತ್ತವರೇ ಅಮಾನುಷವಾಗಿ ಕೊಲೆಗೈದಿದ್ದಾರೆ. ಈ ಮರ್ಯಾದಾಗೇಡು ಹತ್ಯೆ ಎನ್ನಲಾದ ಈ ಪ್ರಕರಣ ನಡೆದದ್ದು ತೆಲಂಗಾಣದಲ್ಲಿ. ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ 20 ವರ್ಷದ ಯುವತಿ ಗರ್ಭಿಣಿಯಾಗಿದ್ದು, ಗರ್ಭಪಾತಕ್ಕೆ ನಿರಾಕರಿಸಿದ್ದಕ್ಕಾಗಿ ಆಕೆಯ ಪೋಷಕರು ಹತ್ಯೆ ಗೈದಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

    ಇದನ್ನೂ ಓದಿ: ಅತ್ತ ಪತಿರಾಯ ಜವರಾಯನ ಮಡಿಲಿಗೆ, ಇತ್ತ ಮಗು ತಾಯಿಯ ಮಡಿಲಿಗೆ…

    ಗಡ್ವಾಲಾ ಜಿಲ್ಲೆಯ ಜೋಗುಳಾಂಬಾದ ಕಲುಕುಂಟಾದ ತಮ್ಮ ಮನೆಯಲ್ಲಿ ಜೂನ್ 7 ರಂದು ಬೆಳಗಿನ ಜಾವ ಯುವತಿ ಮಲಗಿದಾಗ ಪಾಲಕರು ತಲೆದಿಂಬು ಬಳಸಿ ಹತ್ಯೆ ಗೈದಿದ್ದು, ಹೃದಯಾಘಾತದಿಂದಾಗಿ ಸಾವಿಗೀಡಾಗಿದ್ದಾಳೆ. ಇದು ಸಹಜ ಸಾವು ಎಂದು ನಿರೂಪಿಸಲು ಪ್ರಯತ್ನಿಸಿದರು.

    ಇದನ್ನೂ ಓದಿ: ಪೊಲೀಸರ ತನಿಖೆಗೆ ಇನ್ನೂ ಹಾಜರಾಗದ ತಬ್ಲಿಘಿ ಮುಖ್ಯಸ್ಥ…!

    ಆದರೆ ಈ ಯುವತಿಯ ಸಾವಿನ ಕುರಿತು ಸಿಕ್ಕ ಮಾಹಿತಿಯಾಧಾರದ ಮೇಲೆ ಹಾಗೂ ಗ್ರಾಮೀಣ ಕಾರ್ಯದರ್ಶಿ ಸಂಗ್ರಹಿಸಿದ ಮಾಹಿತಿ ಮತ್ತು ಕೆಲವೊಂದು ಅನುಮಾನದ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಲಾಗಿತ್ತು. ಮರಣೋತ್ತರ ಪರೀಕ್ಷೆಯ ನಂತರ ಐಪಿಸಿ ಸೆಕ್ಷನ್ 302 ರ ಅಡಿ ಕೊಲೆ ಆರೋಪದ ಮೇಲೆ ದಂಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಡಿಎಆರ್​​ಪಿಜಿಗೆ ಕೇಂದ್ರ ನೀಡಿದ ಹೊಸ ರಕ್ಷಣಾ ಮಾರ್ಗಸೂಚಿಯಲ್ಲಿ ಏನೇನಿವೆ.?

    ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಪದವಿ ಓದುತ್ತಿರುವಾಗ ಪ್ರೇಮಪಾಶಕ್ಕೆ ಬಿದ್ದು, ಗರ್ಭಿಣಿಯಾಗಿದ್ದಾಗ ಈ ವಿಷಯವನ್ನು ಪೋಷಕರಿಗೆ ತಿಳಿಸಿದ್ದಾಳೆ. ಆಕೆಯ ಪೋಷಕರು ತಮ್ಮ ಮಗಳು ತನ್ನ ಪ್ರೇಮಿಯೊಂದಿಗೆ ಓಡಿಹೋಗಬಹುದೆಂದು ಹೆದರಿದ್ದರು ಮತ್ತು ಗರ್ಭಪಾತ ಮಾಡಿಸಿಕೊಳ್ಳಲು ಅವಳ ಮೇಲೆ ಒತ್ತಡ ತಂದಿದ್ದರು.

    ಇದನ್ನೂ ಓದಿ: ದಿಲ್ಲಿಯಲ್ಲಿ 5.5 ಲಕ್ಷ ಕೇಸ್?: ಪ್ರತಿದಿನ ಸಾವಿರ ಪ್ರಕರಣ

    ಆರಂಭದಲ್ಲಿ ಅವಳು ಒಪ್ಪಿಕೊಂಡರೂ, ನಂತರ ಅದಕ್ಕೆ ಅವಳು ನಿರಾಕರಿಸಿದಾಗ ಅವರು ಆಕೆಯನ್ನು ಕೊಂದು ತಮ್ಮ ಮಗಳು ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ಎಲ್ಲರಿಗೂ ತಿಳಿಸಿದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪೊಲೀಸರ ತಂಡವು ಅವರ ಮನೆಗೆ ಹೋಗಿ ಆಕೆಯ ದೇಹದ ಮೇಲೆ ಕೆಲವು ಗುರುತುಗಳನ್ನು ಗಮನಿಸಿದ ನಂತರ ಮರಣೋತ್ತರ ಪರೀಕ್ಷೆ ನಡೆಸಲು ಮುಂದಾದಾಗ ಪೋಷಕರು ಅದನ್ನು ತಡೆಯಲು ಪ್ರಯತ್ನಿಸಿದರು.

    ಇದನ್ನೂ ಓದಿ: ಆನ್​ಲೈನ್​ನಲ್ಲಿ ಕೆಮಿಸ್ಟ್ರಿ ಕಲಿಸೋಕೆ ಶಿಕ್ಷಕಿಯ ಸರ್ಕಸ್​…!

    ನಂತರ, ಪೊಲೀಸರು ಶವವನ್ನು ಆಸ್ಪತ್ರೆಗೆ ಸ್ಥಳಾಂತರಿಸಿದರು. ಅಲ್ಲಿ ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆಯನ್ನು ಕೊಲೆ ಮಾಡಿರುವುದು ತಿಳಿದುಬಂದಿದೆ. ವಿಚಾರಣೆ ವೇಳೆ ಆಕೆಯ ಪೋಷಕರು ತಮ್ಮ ಮಗಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದು, ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

    ಬೈಕ್​ ಕದಿಯಲು ಬರುವೆ, ತಾಕತ್​ ಇದ್ರೆ ಹಿಡೀರಿ: ಪೊಲೀಸರಿಗೆ ಕಳ್ಳನ ಸವಾಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts