More

    ಕಾರ್ಮಿಕರ ಮೇಲೇ ಉರುಳಿದ ಪಿಲ್ಲರ್​; ಅವಶೇಷಗಳಡಿ ಸಿಲುಕಿ ಇಬ್ಬರು ಸಾವು

    ಬೆಂಗಳೂರು: ಹಳೆಯ ಕಟ್ಟಡ ತೆರವುಗೊಳಿಸುವಾಗ ಪಿಲ್ಲರ್ ಮುರಿದು ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿ ಮೃತಪಟ್ಟಿರುವ ಪ್ರಕರಣ ಮಹಾಲಕ್ಷ್ಮೀ ಬಡಾವಣೆಯಲ್ಲಿ ನಡೆದಿದೆ.

    ಪಶ್ಚಿಮ ಬಂಗಾಳ ಮೂಲದ ಸಿರಾಜ್‌ವುಲ್ಲಾ (35) ಮತ್ತು ಇನಾಮ್‌ವುಲ್ಲಾ (32) ಮೃತ ಕಾರ್ಮಿಕರು. ರಾಜಾಜಿನಗರ ಮೆಟ್ರೋ ರೈಲು ನಿಲ್ದಾಣದ ಹಿಂಭಾಗದ ಮಹಾಲಕ್ಷ್ಮೀ ಲೇಔಟ್ ಹತ್ತನೇ ‘ಎ’ ಕ್ರಾಸ್‌ನಲ್ಲಿ ಶನಿವಾರ ಸಂಜೆ 4.30ರ ಸುಮಾರಿಗೆ ಘಟನೆ ನಡೆದಿದೆ. ಈ ಸಂಬಂಧ ಕಟ್ಟಡದ ಮಾಲೀಕ ವೈದ್ಯಪ್ರಕಾಶ್ ಮತ್ತು ಗುತ್ತಿಗೆದಾರ ಅನ್ಬು ವಿರುದ್ಧ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಾರ್ಮಿಕರ ಬಿದ್ದ ಪಿಲ್ಲರ್: ವೈದ್ಯ ಪ್ರಕಾಶ್ ಅವರು ತಮ್ಮ ಸುಮಾರು 10 ವರ್ಷ ಹಳೆಯ ಒಂದಂತಸ್ತಿನ ಕಟ್ಟಡ ತೆರವುಗೊಳಿಸಲು ಗುತ್ತಿಗೆದಾರ ಅನ್ಬುಗೆ ಗುತ್ತಿಗೆ ನೀಡಿದ್ದರು. ಅದರಂತೆ ಪಶ್ಚಿಮ ಬಂಗಾಳ ಮೂಲದ ಆರು ಮಂದಿ ಕಾರ್ಮಿಕರು ಕಳೆದೊಂದು ವಾರದಿಂದ ಈ ಹಳೇ ಕಟ್ಟಡ ತೆರವು ಕೆಲಸದಲ್ಲಿ ತೊಡಗಿದ್ದರು. ಶನಿವಾರ ತೆರವು ಕಾರ್ಯಾಚರಣೆ ಮಾಡುವಾಗ ಕಾರ್ಮಿಕರಾದ ಸಿರಾಜ್‌ವುಲ್ಲಾ ಹಾಗೂ ಇನಾಮ್‌ವುಲ್ಲಾ ಕಟ್ಟಡದ ಪಿಲ್ಲರ್ ಸಡಿಲಗೊಳಿಸಲು ಸುತ್ತಿಗೆಯಿಂದ ಜೋರಾಗಿ ಹೊಡೆದಿದ್ದಾರೆ. ಈ ವೇಳೆ ಕಟ್ಟಡದ ಒಂದು ಭಾಗದ ತುಂಡು ಗೋಡೆ ಸಹಿತ ಪಿಲ್ಲರ್ ಕಾರ್ಮಿಕರ ಮೇಲೆಯೇ ಕುಸಿದು ಬಿದ್ದಿದೆ. ಈ ವೇಳೆ ಅವಶೇಷಗಳ ಅಡಿ ಸಿಲುಕಿದ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಸುರಕ್ಷತೆ ಕ್ರಮಕೈಗೊಂಡಿರಲಿಲ್ಲ: ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು, ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದ ಮೃತದೇಹಗಳನ್ನು ಹೊರಗೆ ತೆಗೆಸಿ, ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಕಟ್ಟಡ ತೆರವು ಕೆಲಸ ಮಾಡಲಾಗುತ್ತಿದೆ. ಸುರಕ್ಷತೆ ನಿರ್ಲಕ್ಷ್ಯದಿಂದಲೇ ಇಬ್ಬರು ಕಾರ್ಮಿಕರು ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    40 ಸಾವಿರ ರೂ. ವಂಚಿಸಿ 15 ವರ್ಷ ತಲೆಮರೆಸಿಕೊಂಡಿದ್ದವ 2 ಚಿನ್ನದ ಹಲ್ಲುಗಳಿಂದಾಗಿ ಸಿಕ್ಕಿಬಿದ್ದ!

    ಯುಕೆಜಿ ಮಗು ಫೇಲ್: ತಪ್ಪು ನಮ್ಮದಲ್ಲ ಎಂದ ಶಾಲೆಯವರು ಶಿಕ್ಷಣ ಇಲಾಖೆಗೆ ನೀಡಿದ ಸ್ಪಷ್ಟನೆ ಇದು..

    ನಟಿ ರಾಖಿ ಸಾವಂತ್ ಪತಿ ಆದಿಲ್ ವಿರುದ್ಧ ಅತ್ಯಾಚಾರ ಆರೋಪ; ಇನ್ನೊಬ್ಬಳು ಮಹಿಳೆಯಿಂದ ದೂರು ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts