More

    ಯುಕೆಜಿ ಮಗು ಫೇಲ್: ತಪ್ಪು ನಮ್ಮದಲ್ಲ ಎಂದ ಶಾಲೆಯವರು ಶಿಕ್ಷಣ ಇಲಾಖೆಗೆ ನೀಡಿದ ಸ್ಪಷ್ಟನೆ ಇದು..

    ಬೆಂಗಳೂರು: ಯುಕೆಜಿಯಲ್ಲಿ ಅಭ್ಯಾಸ ಮಾಡುತ್ತಿದ್ದ ಮಗುವನ್ನು ಅನುತ್ತೀರ್ಣಗೊಳಿಸುವ ಮೂಲಕ ಶಾಲೆಯೊಂದು ವಿವಾದಕ್ಕೆ ಒಳಗಾಗಿದ್ದು, ಈ ಕುರಿತು ಆ ಮಗುವಿನ ಪಾಲಕರು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದರಿಂದ ವಿಷಯ ದೊಡ್ಡದಾಗಿತ್ತು. ಇದರ ಬೆನ್ನಿಗೇ ಸ್ಪಷ್ಟನೆಯನ್ನು ನೀಡಿರುವ ಶಾಲಾ ಆಡಳಿತ ಮಂಡಳಿ ತಪ್ಪಾಗಲು ಕಾರಣ ಏನು ಎಂಬುದು ಬಹಿರಂಗಪಡಿಸಿ, ಮಗು ಫೇಲ್ ಅಲ್ಲ ಎಂಬುದನ್ನೂ ಸ್ಪಷ್ಟಪಡಿಸಿದೆ.

    ಉದ್ದೇಶಪೂರ್ವಕವಾಗಿ ಯುಕೆಜಿ ಮಗುವನ್ನು ಅನುತ್ತೀರ್ಣ ಮಾಡಿಲ್ಲ. ಮಕ್ಕಳ ಕಲಿಕಾ ಚಟುವಟಿಕೆಗಾಗಿ ಶಾಲೆಯಲ್ಲಿ ಅಳವಡಿಸಿಕೊಂಡಿರುವ ಆ್ಯಪ್‌ನಿಂದಾಗಿ ಆ ತಪ್ಪಾಗಿದೆ. ಅದನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಆನೇಕಲ್‌ನ ಸೇಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿ ಶಾಲೆಯು ಶಿಕ್ಷಣ ಇಲಾಖೆಯ ನೋಟಿಸ್‌ಗೆ ಸ್ಪಷ್ಟನೆ ನೀಡಿದೆ.

    ಶಾಲೆಯಲ್ಲಿ ಮಕ್ಕಳ ಕಲಿಕಾ ಚಟುವಟಿಕೆ, ಪೋಷಕರಿಗೆ ಶಾಲೆಯ ವಿವಿಧ ಮಾಹಿತಿ, ಸೂಚನೆಗಳನ್ನು ನೀಡುವುದು, ಶಾಲಾ ಬಸ್ಸುಗಳ ಸಂಚಾರದ ಮೇಲೆ ನಿಗಾ ವಹಿಸುವುದು ಸೇರಿ ಮಕ್ಕಳ ಹಿತದೃಷ್ಟಿಯಿಂದ ಆ್ಯಪ್‌ವೊಂದನ್ನು ಅಳವಡಿಸಿಕೊಳ್ಳಲಾಗಿದೆ. ಈ ಆ್ಯಪ್ ಮೂಲಕವೇ ಪೂರ್ವ ಪ್ರಾಥಮಿಕ ತರಗತಿ ಮಕ್ಕಳ ಕಲಿಕಾ ಅಂಕಗಳನ್ನು ದಾಖಲಿಸಿ ಪೋಷಕರಿಗೆ ಕಳುಹಿಸಲಾಗಿತ್ತು. ಈ ವೇಳೆ ಕಡಿಮೆ ಅಂಕದ ವಿಷಯಗಳನ್ನು ಈ ಆ್ಯಪ್ ಸ್ವಯಂ ಪ್ರೇರಿತವಾಗಿ ಫೇಲ್ ಎಂದು ತೋರಿಸಿದೆ ಎಂದು ತಿಳಿಸಿದೆ.

    ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ಶಾಲೆಯ ಜತೆಗೆ ಮನೆಯಲ್ಲಿ ಪೋಷಕರೂ ಒತ್ತು ನೀಡಲಿ ಎಂಬುದು ನಮ್ಮ ಉದ್ದೇಶ. ಯಾವುದೇ ಮಗುವನ್ನು ಫೇಲ್ ಮಾಡುವ ಪ್ರಮೇಯ ಇಲ್ಲ. ಶಾಲೆಯಲ್ಲಿ ಲಿಖಿತವಾಗಿ ದಾಖಲಿಸಿಕೊಂಡಿರುವ ಮಕ್ಕಳ ಫಲಿತಾಂಶ ಪುಸ್ತಕ ಅಥವಾ ಪಟ್ಟಿಯಲ್ಲಿ ಯಾವುದೇ ಮಗುವನ್ನು ಅನುತ್ತೀರ್ಣಗೊಳಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ.

    ಸಿನಿಮಾ ಹೀರೋಯಿನ್​ಗೆ ಹೋಲಿಸಿದ್ದಕ್ಕೆ ಪತಿಗೆ ಊಟ ಹಾಕಲ್ಲ ಎಂದ ಪತ್ನಿ!

    ಎಟಿಎಮ್​ನಿಂದ ವಿಚಿತ್ರ ರೀತಿಯಲ್ಲಿ ಕಳವಾದ ಹಣ; ಬ್ಯಾಂಕ್​ನವರಿಗೆ ತಲೆನೋವಾಗಿರುವ ಖದೀಮರು!

    ಭೀಕರ ಅಪಘಾತ: ಕೆಟ್ಟು ನಿಂತಿದ್ದ ಕ್ಯಾಂಟರ್​ಗೆ ಬುಲೆಟ್ ಡಿಕ್ಕಿ, ಯುವಕ-ಯುವತಿ ಸ್ಥಳದಲ್ಲೇ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts