More

    70 ವರ್ಷದ ವೃದ್ಧನ ಪ್ರೀತಿಯ ಬಲೆಯಲ್ಲಿ ಬಿದ್ದ 19ರ ಯುವತಿ! ಇಬ್ಬರ ಲವ್​ ಸ್ಟೋರಿ ಕೇಳಿದ್ರೆ ಹುಬ್ಬೇರಿಸ್ತೀರಾ

    ಇಸ್ಲಮಾಬಾದ್​: ಅನೇಕ ವಿಶೇಷ ದಂಪತಿಗಳ ವಿಡಿಯೋ ಶೇರ್​ ಮಾಡುವ ಮೂಲಕ ಪಾಕಿಸ್ತಾನದ ಯೂಟ್ಯೂಬರ್​ ಸೈಯದ್​ ಬಾಸಿತ್​ ಅಲಿ ಸಾಕಷ್ಟು ಫಾಲೋವರ್ಸ್​ ಸಂಪಾದಿಸಿದ್ದಾರೆ. ಬಹುತೇಕ ವಯಸ್ಸಿನ ಭಾರಿ ಅಂತರ ಇರುವ ದಂಪತಿಯನ್ನೇ ಬಾಸಿತ್​ ಸಂದರ್ಶನ ಮಾಡುತ್ತಾರೆ. ಸಮಾಜದಲ್ಲಿ ಎಂದಿಗೂ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಜನರೊಂದಿಗೆ ಮಾತನಾಡಲು ಬಾಸಿತ್​ ಇಷ್ಟಪಡುತ್ತಾರೆ.

    ಕಳೆದ ಆಗಸ್ಟ್​ನಲ್ಲಿ ಬಾಸಿತ್​ ಒಂದು ಸ್ಟೋರಿಯನ್ನು ಶೇರ್​ ಮಾಡಿಕೊಂಡಿದ್ದರು. ಅದು 18 ವರ್ಷದ ಯುವತಿ 55 ವರ್ಷದ ವ್ಯಕ್ತಿಯನ್ನು ಮದುವೆಯಾಗಿರುವುದರ ಕುರಿತಾಗಿತ್ತು. ಬಾಬಿ ಡಿಯೋಲ್​ ಅವರ ಹಾಡು ನಮ್ಮನ್ನು ಒಂದು ಮಾಡಿತು ಎಂದು ಬಾಸಿತ್​ ಬಳಿ ದಂಪತಿ ಹೇಳಿಕೊಂಡಿದ್ದರು. ಆ ದಂಪತಿಯ ಹೆಸರು 18 ವರ್ಷದ ಮಸ್ಕಾನ್​ ಮತ್ತು 55 ವರ್ಷದ ಫಾರೂಕ್​ ಅಹ್ಮದ್​. ಮ್ಯೂಸಿಕ್​ನಿಂದಲೇ ಪ್ರೀತಿಯ ಬಲೆಯಲ್ಲಿ ಇಬ್ಬರು ಬಿದ್ದಿದ್ದು ಹೇಗೆ ಎಂಬುದನ್ನು ದಂಪತಿ ವಿವರಿಸಿದ್ದರು.

    ಇದೀಗ ಕೆಲವು ತಿಂಗಳ ಹಿಂದೆ ಇನ್ನೊಂದು ವಿಶೇಷ ವಿಡಿಯೋವನ್ನು ಬಾಸಿತ್​ ಹಂಚಿಕೊಂಡಿದ್ದಾರೆ. ಇದು 70 ವರ್ಷದ ಬಾಬಾ ಮತ್ತು 19 ವರ್ಷದ ಯುವತಿ ನಡುವಿನ ಪ್ರೇಮ ಕತೆಯಾಗಿದೆ. ಬೆಳಗಿನ ವಾಕಿಂಗ್​ ಮಾಡುವ ವೇಳೆ ಇಬ್ಬರು ಪರಸ್ಪರ ಭೇಟಿಯಾಗಿ, ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರ ಬಗ್ಗೆ ವಿಡಿಯೋದಲ್ಲಿ ವಿವರಿಸಿದ್ದಾರೆ.

    ವಿಶೇಷ ದಂಪತಿಯ ಹೆಸರು ಲಿಯಾಕತ್​​ ಅಲಿ ಮತ್ತು ಶುಮೈಲಾ. ಲಾಹೋರ್​ ನಿವಾಸಿಯಾಗಿರುವ ಇಬ್ಬರು ಬೆಳಗಿನ ವಾಯುವಿಹಾರದ ಸಮಯದಲ್ಲಿ ಒಬ್ಬರನ್ನೊಬ್ಬರನ್ನು ನೋಡುತ್ತಾ ಪ್ರೀತಿಯ ಬಲೆಯಲ್ಲಿ ಬಿದ್ದೆವು ಎಂದು ಹೇಳಿಕೊಂಡಿದ್ದಾರೆ. ಒಮ್ಮೆ ಲಿಯಾಕತ್, ಶುಮೈಲಾಳ ಹಿಂದೆ ಜಾಗಿಂಗ್ ಮಾಡುವಾಗ ಹಾಡನ್ನು ಗುನುಗಲು ಪ್ರಾರಂಭಿಸಿದಾಗ ಪ್ರೇಮ ಸಂಬಂಧವು ಪ್ರಾರಂಭವಾಯಿತು ಎಂದಿದ್ದಾರೆ.

    ನಾವು ಪ್ರೀತಿ ಮಾಡುವಾಗ ವಯಸ್ಸನ್ನು ನೋಡಲೇ ಇಲ್ಲ. ಎಲ್ಲವು ಆಗೇ ನಡೆದು ಹೋಯಿತು. ಮದುವೆ ಬಗ್ಗೆ ಪಾಲಕರನ್ನು ಕೇಳಿದಾಗ ವಿರೋಧಿಸಿದರು. ಆದರೂ ಅವರನ್ನು ಮನವೊಲಿಸಿ ಮದುವೆ ಮಾಡಿಕೊಂಡೆವು. ಭಾರಿ ವಯಸ್ಸಿನ ಅಂತರವಿದ್ದರೂ ನಮ್ಮ ಮದುವೆ ಬಗ್ಗೆ ಯಾರೊಬ್ಬರು ಕಾಮೆಂಟ್​ ಮಾಡಲಿಲ್ಲ. ಎಲ್ಲರೂ ನಮ್ಮ ನಿರ್ಧಾರವನ್ನು ಗೌರವಿಸಿದರು. ಅದು ಅವರ ಜೀವನ. ಅವರಿಗೆ ಹೇಗೆ ಅನಿಸುತ್ತದೆ ಆ ರೀತಿ ಬಾಳಲಿ ಎಂದು ಬಿಟ್ಟುರು ಎಂದು ಶುಮೈಲಾ ಹೇಳಿದ್ದಾರೆ.

    70 ವರ್ಷ ವಯಸ್ಸಿನವರಾಗಿದ್ದರೂ ಹೃದಯದಲ್ಲಿ ತುಂಬಾ ಚಿಕ್ಕವರು. ಪ್ರಣಯ ಅಂತಾ ಬಂದಾಗ ವಯಸ್ಸು ಒಂದು ಅಂಶವಲ್ಲ ಎಂದು ಲಿಯಾಕತ್​ ಹೇಳಿದರು. 70ರ ಹರೆಯದ ಲಿಯಾಕತ್​ ತಮ್ಮ ಹೆಂಡತಿಯ ಕೈರುಚಿಯಿಂದ ತುಂಬಾ ಸಂತೋಷವಾಗಿದ್ದಾರೆ ಮತ್ತು ರೆಸ್ಟೋರೆಂಟ್‌ಗಳಲ್ಲಿ ತಿನ್ನುವುದನ್ನು ಬಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.

    ಭಾರಿ ವಯಸ್ಸಿನ ಅಂತರ ಇರುವವರು ಮದುವೆಯಾಗಬೇಕೇ ಅಥವಾ ಬೇಡವೇ ಎಂದು ಲಿಯಾಕತ್​ರನ್ನು ಪ್ರಶ್ನಿಸಿದಾಗ, ಇಲ್ಲಿ ವಯಸ್ಸಾದವರು ಅಥವಾ ಚಿಕ್ಕವರು ಎಂಬುದು ಪ್ರಶ್ನೆಯೇ ಅಲ್ಲ. ಮದುವೆಯಾಗಲು ಕಾನೂನುಬದ್ಧವಾಗಿ ಅನುಮತಿಸುವ ಯಾರಾದರೂ ಸಹ ಮದುವೆಯಾಗಬಹುದು ಎಂದು ಲಿಯಾಕತ್​ ಹೇಳಿದರೆ, ಮದುವೆಯಲ್ಲಿ ವೈಯಕ್ತಿಕ ಘನತೆ ಮತ್ತು ಗೌರವವನ್ನು ಪರಿಗಣಿಸಬೇಕು ಎಂದು ಅವರ ಪತ್ನಿ ಶುಮೈಲಾ ತಿಳಿಸಿದರು.

    ಕೆಟ್ಟ ಸಂಬಂಧವನ್ನು ಬೆಳೆಸುವ ಬದಲು, ಒಬ್ಬ ಒಳ್ಳೆಯ ವ್ಯಕ್ತಿಯನ್ನು ಮದುವೆಯಾಗಬೇಕು. ಒಬ್ಬರು ವಯಸ್ಸಿನ ವ್ಯತ್ಯಾಸವನ್ನು ನೋಡಬಾರದು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ವೈಯಕ್ತಿಕ ಘನತೆ ಅಥವಾ ಗೌರವವನ್ನು ಪರಿಗಣಿಸಬಾರದು ಎಂದು ಶುಮೈಲಾ ಹೇಳಿದರು.

    ಸದ್ಯ ಇವರಿಬ್ಬ ಲವ್​ ಸ್ಟೋರಿ ವೈರಲ್​ ಆಗಿದ್ದು ಎಲ್ಲರ ಮೆಚ್ಚುಗೆ ಪಾತ್ರವಾಗಿದೆ. ಇಬ್ಬರು ಮಾತನಾಡಿರುವ ಪರಿ ನೆಟ್ಟಿಗರ ಗಮನ ಸೆಳೆದು, ಲೈಕ್ಸ್​ಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)

    https://www.youtube.com/watch?v=DaCTKi_wXJU

    ಹಣದ ಆಸೆಗೆ ಬಿದ್ದು ಸಾವಿಗೆ ಶರಣಾದ ಉಪನ್ಯಾಸಕಿ! ಡೆತ್​ನೋಟ್​ನಲ್ಲಿತ್ತು ಆಕೆಯ ಕಣ್ಣೀರಿನ ಕತೆ

    ತಂದೆಯ ಎದುರೇ ಬಸ್ಸಿನಲ್ಲಿ ಅನುಭವಿಸಿದ ಕರಾಳ ಘಟನೆಯನ್ನು ವಿವರಿಸಿದ ನಟಿ ಆಂಡ್ರಿಯಾ ಜರೆಮಿಯ!

    ಪ್ರಾಜೆಕ್ಟ್ ವಾರ್‌ಡೆಕ್: ದೆಹಲಿಯಲ್ಲಿ ಆರಂಭವಾಗಲಿದೆ ಭಾರತದ ಮುಂದಿನ ಎಐ ಆಧಾರಿತ ವಾರ್‌ಗೇಮ್ ಸೆಂಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts