More

    ಪ್ರಾಜೆಕ್ಟ್ ವಾರ್‌ಡೆಕ್: ದೆಹಲಿಯಲ್ಲಿ ಆರಂಭವಾಗಲಿದೆ ಭಾರತದ ಮುಂದಿನ ಎಐ ಆಧಾರಿತ ವಾರ್‌ಗೇಮ್ ಸೆಂಟರ್

    ಪ್ರಾಜೆಕ್ಟ್ ವಾರ್‌ಡೆಕ್: ದೆಹಲಿಯಲ್ಲಿ ಆರಂಭವಾಗಲಿದೆ ಭಾರತದ ಮುಂದಿನ ಎಐ ಆಧಾರಿತ ವಾರ್‌ಗೇಮ್ ಸೆಂಟರ್| ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

    ಭಾರತೀಯ ಸೇನೆಯ ತರಬೇತಿ ಕಮಾಂಡ್ ರಾಷ್ಟ್ರೀಯ ರಕ್ಷಾ ಯುನಿವರ್ಸಿಟಿ (ಆರ್‌ಆರ್‌ಯು) ಜೊತೆಗೆ ಒಂದು ಮೆಮೊರಾಂಡಮ್ ಆಫ್ ಅಂಡರ್‌ಸ್ಟಾಂಡಿಂಗ್ (ಎಂಓಯು) ಸಹಿ ಹಾಕಿದ್ದು, ನವದೆಹಲಿಯಲ್ಲಿ ನೂತನ ವಾರ್ ಗೇಮ್ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ ಆರಂಭಗೊಳ್ಳಲಿದೆ.

    ಇದು ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹ ಕೃತಕ ಬುದ್ಧಿಮತ್ತೆ (ಎಐ) ಆಧಾರಿತವಾದ ಸಿಮ್ಯುಲೇಶನ್‌ ಮಾದರಿಯ ತರಬೇತಿ ಕೇಂದ್ರವಾಗಿರಲಿದೆ. ಇಲ್ಲಿ ವರ್ಚುವಲ್ ರಿಯಾಲಿಟಿ ಮಾದರಿಯ ಯುದ್ಧದ ಆಟಗಳನ್ನು ವಿನ್ಯಾಸಗೊಳಿಸಿ, ಭಾರತೀಯ ಸೈನಿಕರಿಗೆ ತರಬೇತಿ ನೀಡಿ, ಮೆಟಾವರ್ಸ್ ಆಧಾರಿತ ಆಟಗಳ ಮೂಲಕ ಅವರ ಕಾರ್ಯತಂತ್ರಗಳನ್ನು ಪರೀಕ್ಷಿಸಲಾಗುತ್ತದೆ.

    ಏನು ಈ ವಾರ್ ಗೇಮ್ ಸೆಂಟರ್‌?
    ಈ ವಾರ್ ಗೇಮ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಸೇನೆ ಭಾರತೀಯ ಸೈನಿಕರನ್ನು ತರಬೇತಿಗೊಳಿಸಲು ಮತ್ತು ಅವರ ಕಾರ್ಯತಂತ್ರಗಳ ಸಾಮರ್ಥ್ಯವನ್ನು ಮೆಟಾವರ್ಸ್ ಆಧಾರಿತ ಆಟಗಳ ಮೂಲಕ ಪರೀಕ್ಷಿಸಲು ಸಾಧ್ಯವಾಗುತ್ತದೆ. ಈ ಯುದ್ಧದ ಆಟಗಳನ್ನು ಸೈನಿಕರನ್ನು ಯುದ್ಧಗಳಿಗೆ, ಕೌಂಟರ್ ಟೆರರಿಸಂ ಕಾರ್ಯಾಚರಣೆಗಳಿಗೆ ಹಾಗೂ ದಂಗೆಗಳ ನಿಯಂತ್ರಣಕ್ಕೆ ಬಳಸಿಕೊಳ್ಳಲಾಗುತ್ತದೆ.

    ಈ ಸಿಮ್ಯುಲೇಶನ್‌ ಚಟುವಟಿಕೆಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ?
    ಈ ಚಟುವಟಿಕೆಯಲ್ಲಿ ಸೈನಿಕರ ಸಾಮರ್ಥ್ಯವನ್ನು ಮೆಟಾವರ್ಸ್ ನಲ್ಲಿ ಪರೀಕ್ಷಿಸಲಾಗುತ್ತದೆ. ಇಲ್ಲಿ ಸೈನಿಕರ ಸುತ್ತಮುತ್ತಲಿನ ಪ್ರದೇಶವನ್ನು ವರ್ಚುವಲ್ ರಿಯಾಲಿಟಿ (ವಿಆರ್) ಹಾಗೂ ಆಗ್ಮೆಂಟೆಡ್ ರಿಯಾಲಿಟಿ (ಎಆರ್) ಮೂಲಕ ಸಿಮ್ಯುಲೇಟ್ ಗೊಳಿಸಿ, ಅವರನ್ನು ಪರೀಕ್ಷಿಸಲಾಗುತ್ತದೆ.

    “ಮೆಟಾವರ್ಸ್‌ನಲ್ಲಿ ಈ ಆಟಗಳನ್ನು ಆಡುವವರಿಗೆ ಒಂದು ನೈಜ ಪರಿಸ್ಥಿತಿಯ ಅನುಭವವಾಗುತ್ತದೆ. ಒಂದು ವೇಳೆ ಆಟದ ಸಂದರ್ಭದಲ್ಲಿ ಕೈಯಲ್ಲಿರುವ ಐದು ಕೆಜಿಯ ಆಯುಧ ಏನಾದರೂ ಕೆಳಗೆ ಬಿದ್ದರೆ, ಅಥವಾ ಗಾಳಿಯ ಒತ್ತಡ ಕಡಿಮೆಯಾದರೆ, ಅದನ್ನು ನೈಜ ಪರಿಸ್ಥಿತಿಯಲ್ಲಿ ಇರುವಂತೆಯೇ ಅನುಭವಕ್ಕೆ ಬರುತ್ತದೆ. ಈ ಆಟಗಳನ್ನು ಆಟಗಾರರ ವಿರುದ್ಧ ಆಟಗಾರರು, ಕಂಪ್ಯೂಟರ್ ವಿರುದ್ಧ ಆಟಗಾರರು ಮತ್ತು ಕಂಪ್ಯೂಟರ್ ವಿರುದ್ಧ ಕಂಪ್ಯೂಟರ್ ಆಡಬಹುದು” ಎಂದು ಆರ್‌ಆರ್‌ಯು ಅಧಿಕಾರಿ ಒಬ್ಬರು ಅಭಿಪ್ರಾಯ ಪಡುತ್ತಾರೆ.

    ಈ ಕೇಂದ್ರ ಸೇನೆಗೆ ಹೇಗೆ ಸಹಾಯಕವಾಗಲಿದೆ?
    ಭಾರತೀಯ ಸೇನೆ ಈ ವಾರ್ ಗೇಮ್ ಕೇಂದ್ರವನ್ನು ಮಿಲಿಟರಿ ಹಂತಗಳ ಅಧಿಕಾರಿಗಳ ತರಬೇತಿಗೆ ಬಳಸಿಕೊಳ್ಳುವ ಉದ್ದೇಶ ಹೊಂದಿದೆ. ಆರ್‌ಆರ್‌ಯು ಅಧಿಕಾರಿಗಳ ಪ್ರಕಾರ, ಈ ಆಟಗಳ ಹಿನ್ನಲೆಯ ನಿರ್ಮಾಣಕ್ಕೆ ಬೇಕಾದ ಮಾಹಿತಿಗಳನ್ನು ಸೇನೆಯೇ ಒದಗಿಸಲಿದೆ. ಆ ಮೂಲಕ ಆಟಗಾರರು ಆಟದಲ್ಲಿ ನೈಜ ಪರಿಸ್ಥಿತಿಯನ್ನೇ ಅನುಭವಿಸಲಿದ್ದಾರೆ.

    “ಸೇನೆಯಲ್ಲಿ ಸಾಮಾನ್ಯವಾಗಿ ಮಾತನಾಡುವ ಸಂದರ್ಭದಲ್ಲಿ ಶತ್ರುಗಳು ನಮ್ಮ ಮೇಲೆ 361 ದಿಕ್ಕುಗಳಿಂದ ದಾಳಿ ನಡೆಸಬಲ್ಲರು ಎನ್ನಲಾಗುತ್ತದೆ. ಅದರಲ್ಲಿ 360 ದಿಕ್ಕುಗಳೆಂದರೆ ಸೈನಿಕನ ಸುತ್ತಲಿನ 360 ಡಿಗ್ರಿಯಾದರೆ ಇನ್ನೊಂದು ದಿಕ್ಕು ಮೇಲಿನ ಆಕಾಶವಾಗಿದ್ದು, ಗಾಳಿಯಿಂದ ದಾಳಿ ನಡೆಯುವ ಸಾಧ್ಯತೆಗಳು ಇದ್ದೇ ಇರುತ್ತವೆ. ಆದ್ದರಿಂದ ಈ ವಾರ್ ಗೇಮ್ ಸಿಮ್ಯುಲೇಶನ್‌‌ಗಳು ಸೇನೆಗೆ ಎಲ್ಲಾ ರೀತಿಯ ಪರಿಸ್ಥಿತಿಗಳನ್ನು ಯೋಚಿಸಲು ಸಹಾಯ ಮಾಡುತ್ತದೆ. ಇಳಿಜಾರು ಭೂಪ್ರದೇಶ, ಹವಾಮಾನ, ಸಮಯ, ಗಾಳಿಯ ಒತ್ತಡ, ಶತ್ರುವಿನ ವಿಚಕ್ಷಣಾ ಪ್ರದೇಶ, ಆರ್ಟಿಲರಿ ವ್ಯಾಪ್ತಿ, ಪಡೆಗಳ ಸ್ಥಾನ, ಸೈನಿಕರ ಆರೋಗ್ಯ, ಶತ್ರುಗಳ ದಾಳಿ ಸಾಮರ್ಥ್ಯ, ಹೀಗೆ ಎಲ್ಲ ಮಾಹಿತಿಗಳನ್ನೂ ಒಳಗೊಂಡಂತೆ ಈ ಎಐ ಆಟಗಳನ್ನು ತಯಾರಿಸಲಾಗುತ್ತದೆ‌. ಇಲ್ಲಿ ನೈಜತೆಗೆ ಅತಿಹೆಚ್ಚು ಒತ್ತು ನೀಡಲಾಗುತ್ತದೆ” ಎಂದು ಆರ್‌ಆರ್‌ಯು ಅಧಿಕಾರಿಗಳು ಹೇಳುತ್ತಾರೆ.

    ಎಐ ಆಧಾರಿತ ಯುದ್ಧದ ಗೇಮ್‌ಗಳ ಭರವಸೆ ಏನು?
    ಸೇನಾಪಡೆಗಳನ್ನು ಹೊರತುಪಡಿಸಿ, ಬಿಎಸ್ಎಫ್, ಸಿಆರ್‌ಪಿಎಫ್, ಸಿಐಎಸ್ಎಫ್, ಐಟಿಬಿಎಫ್, ಹಾಗೂ ಎಸ್ಎಸ್‌ಬಿಗಳೂ ಸಹ ಮೆಟಾವರ್ಸ್ ಆಧಾರಿತ ಸಿಮ್ಯುಲೇಶನ್‌ ಚಟುವಟಿಕೆಗಳಲ್ಲಿ ಭಾಗವಹಿಸಿ, ಉತ್ತಮ ತರಬೇತಿ ಹೊಂದಬಹುದು. ಎಐ ಬಳಕೆಯಿಂದ ಒಂದು ಸಂಪೂರ್ಣ ನೈಜ ತರಬೇತಿ ಅನುಭವ ಲಭ್ಯವಾಗುತ್ತದೆ. ಇಲ್ಲಿ ಸಿಮ್ಯುಲೇಶನ್‌ ಯುದ್ಧರಂಗ ಬಹುತೇಕ ನೈಜ ಯುದ್ಧರಂಗದ ರೀತಿಯಲ್ಲೇ ಇರುತ್ತದೆ. ನಿಜವಾದ ಯುದ್ಧದಲ್ಲಿ ಇರುವಂತಹ ಪರಿಸ್ಥಿತಿಗಳು ಇಲ್ಲೂ ಎದುರಾಗುತ್ತವೆ.

    “ಸದ್ಯದ ಮಟ್ಟಿಗೆ ಈ ಕೇಂದ್ರವನ್ನು ಕೇವಲ ಸೇನೆ ಮಾತ್ರವೇ ಬಳಸಿಕೊಳ್ಳುತ್ತದೆ. ಆದರೆ ನಮ್ಮ ಉದ್ದೇಶ ಒಂದು ಅತ್ಯಾಧುನಿಕ ಗುಣಮಟ್ಟದ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ, ಇನ್ನುಳಿದ ರಕ್ಷಣಾ ಸಂಸ್ಥೆಗಳೂ ಇದರಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡುವುದು” ಎಂದು ಆರ್‌ಆರ್‌ಯು ಅಧಿಕಾರಿಗಳು ಅಭಿಪ್ರಾಯ ಪಡುತ್ತಾರೆ.

    ಎಷ್ಟು ರಾಷ್ಟ್ರಗಳು ಇಂತಹ ವಾರ್‌ಗೇಮ್ ಚಟುವಟಿಕೆಗಳನ್ನು ಬಳಸುತ್ತವೆ?
    9/11 ದಾಳಿಯ ಬಳಿಕ, ಮಾಹಿತಿ ತಂತ್ರಜ್ಞಾನದ ಬಳಕೆಯ ಆಧಾರಿತ ಯುದ್ಧದ ಆಟಗಳನ್ನು ಅಮೆರಿಕಾ, ಇಸ್ರೇಲ್ ಹಾಗೂ ಯುಕೆಗಳು ಆಯ್ಕೆ ಮಾಡಿಕೊಂಡಿವೆ. ಅವುಗಳು ಈ ಆಟಗಳನ್ನು ಮುಂದೆ ಎದುರಾಗುವ ಯುದ್ಧ ಸಂದರ್ಭಗಳನ್ನು ಎದುರಿಸಲು ತರಬೇತಿ ಪಡೆಯಲು, ಸಿದ್ಧವಾಗಲು ಬಳಸಿಕೊಳ್ಳುತ್ತಿವೆ.

    ಮಾರ್ಚ್ 2014ರಲ್ಲಿ ನಡೆದ ಹಾಗ್ ಸಮಾವೇಶದಲ್ಲಿ ಆಗಿನ ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್, ಮಾಜಿ ಯುಎಸ್ ಅಧ್ಯಕ್ಷ ಬರಾಕ್ ಒಬಾಮ, ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನ್ಯೂಕ್ಲಿಯರ್ ದಾಳಿಯ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಒಂದು ಸಿಮ್ಯುಲೇಶನ್‌ ಆಟದಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ನ್ಯೂಕ್ಲಿಯರ್ ದಾಳಿ ಬ್ರಿನಿಯಾ ಎಂಬ ಒಂದು ಕಾಲ್ಪನಿಕ ರಾಷ್ಟ್ರದ ಮೇಲಾಗಿದೆ ಎಂದು ಆಟವನ್ನು ರೂಪಿಸಲಾಗಿತ್ತು.

    ಕೆಲ ನಟರು ನನ್ನೊಂದಿಗೆ ನಟಿಸಲು ಭಯಪಡುತ್ತಾರೆ! ಬಹುಭಾಷಾ ನಟ ಪ್ರಕಾಶ್​ ರಾಜ್ ಕೊಟ್ಟ ಕಾರಣವಿದು​

    2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಡೋನಾಲ್ಡ್​ ಟ್ರಂಪ್​ ಘೋಷಣೆ

    ಪದವೀಧರ ಪ್ರಾಥಮಿಕ ಶಾಲಾ‌ ಶಿಕ್ಷಕರ ನೇಮಕ ಸಂಬಂಧ 1:1 ‘ತಾತ್ಕಾಲಿಕ ಆಯ್ಕೆ’ ಪಟ್ಟಿ ಈ ವಾರವೇ ಪ್ರಕಟ: ಬಿ.ಸಿ.ನಾಗೇಶ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts