More

    ಪ್ರತಿಷ್ಠಿತರ ಟ್ವಿಟರ್​ ಖಾತೆಗಳನ್ನು ಹ್ಯಾಕ್​ ಮಾಡುವ ಹಿಂದೆ ಇದ್ದದ್ದು 17ರ ಎಳಸು

    ನವದೆಹಲಿ: ಇತ್ತೀಚೆಗೆ ಪ್ರತಿಷ್ಠಿತರ ಟ್ವಿಟರ್​ ಖಾತೆಗಳನ್ನು ಹ್ಯಾಕ್​ ಮಾಡಿ, ನೀವು ಎಷ್ಟು ಹಣ ಕೊಡುತ್ತೀರೋ ಅದರ ದುಪ್ಪಟ್ಟು ಹಣ ವಾಪಸು ಮಾಡಲಾಗುವುದು ಎಂದು ಟ್ವೀಟ್​ ಮಾಡಿದ್ದ ಹ್ಯಾಕರ್​ಗಳನ್ನು ಬಂಧಿಸುವಲ್ಲಿ ಅಮೆರಿಕದ ಫೆಡರಲ್​ ಬ್ಯೂರೋ ಆಫ್​ ಇನ್​ವೆಸ್ಟಿಗೇಷನ್​ (ಎಫ್​ಬಿಐ) ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

    ಫ್ಲೊರಿಡಾದ ಥಂಪಾದ ನಿವಾಸಿ ಗ್ರಹಾಂ ಕ್ಲಾರ್ಕ್​ (17), ಬ್ರಿಟನ್​ನ ಮೇಸನ್​ ಜಾನ್​ ಶೆಪರ್ಡ್​ (19) ಮತ್ತು ಆರ್ಲೆಂಡೋದ ನಿಮಾ ಫಜೇಲಿ (22) ಬಂಧಿತರು. ಗ್ರಹಾಂ ಕ್ಲಾರ್ಕ್​ ಪ್ರಮುಖ ಆರೋಪಿಯಾಗಿದ್ದಾನೆ.

    ಇತ್ತೀಚೆಗಷ್ಟೇ ಪದವಿ ಶಿಕ್ಷಣ ಪೂರೈಸಿರುವ ಈತನನ್ನು ಫ್ಲೊರಿಡಾದ ಆತನ ಅಪಾರ್ಟ್​ಮೆಂಟ್​ನಿಂದಲೇ ಬಂಧಿಸಲಾಯಿತು ಎಂದು ಎಫ್​ಬಿಐ ತಿಳಿಸಿದೆ.

    ವ್ಯವಸ್ಥಿತವಾದ ವಂಚನೆ, ಸಂವಹನ ವಂಚನೆ, ಗುರುತು ಕಳ್ಳತನ ಮತ್ತು ಹ್ಯಾಕಿಂಗ್​ ಸೇರಿ ಕ್ಲಾರ್ಕ್​ ಮತ್ತು ಆತನ ಸಹಚರರ ವಿರುದ್ಧ 30 ಆರೋಪಗಳನ್ನು ಹೊರಿಸಲಾಗಿದೆ. ಅಲ್ಲದೆ, ಅಪ್ರಾಪ್ತರಾಗಿದ್ದರೂ ವಯಸ್ಕ ಅಪರಾಧಿಯಂತೆ ಪರಿಗಣಿಸಿ, ಅದರಂತೆ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಹೇಳಿದೆ.

    ಇದನ್ನೂ ಓದಿ: ಸಂಭಾವನೆಯಲ್ಲಿ ರಾಜಮೌಳಿಯನ್ನೂ ಮೀರಿಸ್ತಿದ್ದಾರೆ ಕೊರಟಾಲ ಶಿವ

    ಟ್ವಿಟ್ಟರ್​ ಸಂಸ್ಥೆಯ ಉದ್ಯೋಗಿ ಎಂಬ ಸೋಗಿನಲ್ಲಿ ಟ್ವಿಟ್ಟರ್​ ಉದ್ಯೋಗಿಗಳನ್ನು ನಂಬಿಸಿದ್ದ ಕ್ಲಾರ್ಕ್​, ಬರಾಕ್​ ಒಬಾಮಾ, ಜೋ ಬಿಡೆನ್​, ಎಲಾನ್​ ಮಸ್ಕ್​, ಕೇನ್​ ವೆಸ್ಟ್​ ಸೇರಿ ಅನೇಕ ಪ್ರತಿಷ್ಠಿತರ ಟ್ವಿಟ್ಟರ್​ ಖಾತೆಯ ವಿವರಗಳನ್ನು ಪಡೆದುಕೊಂಡಿದ್ದ. ಬಳಿಕ ಅವುಗಳನ್ನು ಹ್ಯಾಕ್​ ಮಾಡಿ, ಹಣಕ್ಕಾಗಿ ಮನವಿ ಇರಿಸಿದ್ದ.

    ಈತ ಒಟ್ಟು 136 ಜನರ ಟ್ವಿಟ್ಟರ್​ ಖಾತೆಗಳನ್ನು ಹ್ಯಾಕ್​ ಮಾಡಿದ್ದರೂ, ಬಿಟ್​ಕಾಯಿನ್​ನಲ್ಲಿ ಹೂಡಿಕೆ ಮಾಡಿದರೆ, ಅದರ ದುಪ್ಪಟ್ಟು ಹಣ ಮರಳಿಸುವುದಾಗಿ ಹೇಳಿ 45 ಜನರ ಖಾತೆಗಳಿಂದ ಮಾತ್ರ ಸಂದೇಶ ರವಾನಿಸಿದ್ದ. ಈ ರೀತಿ ಆತ 88.04 ಲಕ್ಷ ರೂ.ಗಳನ್ನು ಸಂಗ್ರಹಿಸಿದ್ದ. ಆದರೆ, ಯಾರಿಗೂ ಹಣವನ್ನು ಹಿಂದಿರುಗಿಸಿರಲಿಲ್ಲ. ಸಂಗ್ರಹವಾದ ಹಣವನ್ನು ಬೇರೊಂದು ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದ.

    ಕ್ಲಾರ್ಕ್​ ಮತ್ತು ಸಂಗಡಿಗರು ಹ್ಯಾಕ್​ ಮಾಡಿದ ಮಾದರಿಯಲ್ಲಿ ಹಲವು ಲೋಪಗಳಿದ್ದವು. ಇವನ್ನು ಆಧರಿಸಿ ಎಫ್​ಬಿಐ ಅಧಿಕಾರಿಗಳು ಹ್ಯಾಕರ್​ಗಳನ್ನು ಸುಲಭವಾಗಿ ಪತ್ತೆ ಮಾಡಿ, ಬಂಧಿಸಿದರು. ತಮಗೆ ಬರುತ್ತಿದ್ದ ಹಣವನ್ನು ಬಚ್ಚಿಡಸಲು ಸಾಧ್ಯವಾಗದೆ, ಇವರೆಲ್ಲರೂ ತಮ್ಮ ಗುರುತುಗಳನ್ನು ಬಹಿರಂಗಪಡಿಸಿದ್ದರು ಎನ್ನಲಾಗಿದೆ.

    ಸ್ಕರ್ಟ್‌, ಷಾರ್ಟ್‌, ಮಿನಿಗಳ ಮೇಲೆ ಸರ್ಕಾರದ ಕೆಂಗಣ್ಣು- ಇವೆಲ್ಲಾ ಬ್ಯಾನ್‌ ಮಾಡಲಿದೆ ಈ ದೇಶ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts