More

    ಹಕ್ಕುಪತ್ರಕ್ಕಾಗಿ ಗೌರಿಪಾಳ್ಯ ನಿವಾಸಿಗಳ ಪ್ರತಿಭಟನೆ

    ಮದ್ದೂರು: ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ ತಾಲೂಕಿನ ಬೆಸಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌರಿಪಾಳ್ಯದ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
    ಗ್ರಾಮದ ಯುವ ಮುಖಂಡ ಬಿ.ಆರ್.ಚೇತನ್‌ಕುಮಾರ್ ಮಾತನಾಡಿ, ಹಕ್ಕುಪತ್ರವಿಲ್ಲದೆ ನಾವು ವಾಸವಿರುವ ಮನೆಗಳಿಗೆ ಅಧಿಕಾರಿಗಳು ಖಾತೆ ಹಾಗೂ ಇ ಸ್ವತ್ತು ಮಾಡಿಕೊಟ್ಟಿಲ್ಲ. ಚುನಾವಣೆಗಳು ಬಂದಾಗ ಹಕ್ಕುಪತ್ರ ಕೊಡಿಸುತ್ತೇವೆ ಎಂದು ಹೇಳಿ ಮತ ಹಾಕಿಸಿಕೊಳ್ಳುವ ರಾಜಕೀಯ ನಾಯಕರು, ಗೆದ್ದ ನಂತರ ನಮ್ಮನ್ನು ಮರೆಯುತ್ತಿದ್ದಾರೆ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಾವು ಮತದಾನ ಮಾಡುವುದಿಲ್ಲ ಎಂದು ಎಚ್ಚರಿಸಿದರು.
    ಪ್ರತಿಭಟನೆಯಲ್ಲಿ ಉಮೇಶ, ಉಲ್ಲಾಸ್, ಸಿದ್ದರಾಜು, ಪುಟ್ಟಲಿಂಗಯ್ಯ, ಅಶೋಕ, ನಾಗಮ್ಮ, ರಮ್ಯಾ , ತಾಯಮ್ಮ , ಲಕ್ಷ್ಮಮ್ಮ , ಜಯಮ್ಮ , ಶೋಭಾ, ಅತ್ತಮ್ಮ , ಚಿಕ್ಕತಾಯಮ್ಮ, ಲಕ್ಷ್ಮೀ, ಗುಂಡಮ್ಮ, ಸುಶೀಲಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts