More

    ಸಹಕಾರ ಮನೋಭಾವದಿಂದ ಸಂಘದ ಅಭಿವೃದ್ಧಿ

    ಮುನವಳ್ಳಿ: ಸಹಕಾರಿ ತತ್ತ್ವ ರೈತರ ಅಭಿವೃದ್ಧಿಗಾಗಿಯೇ ಇರುವ ತತ್ತ್ವವಾಗಿದ್ದು, ಸಹಕಾರ ಮನೋಭಾವ ಎಂಬುದು ಎಲ್ಲರಲ್ಲಿ ಬಂದಾಗ ಮಾತ್ರ ಪರಸ್ಪರ ಅಭಿವೃದ್ಧಿ ಸಾಧ್ಯ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ ಹೇಳಿದರು.

    ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಲ್ಲಿಕಾರ್ಜುನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರ ಸಹಕಾರಿ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ವಿತರಿಸಿ, ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದೆ. ರೈತರು ವ್ಯವಸಾಯದ ಜತೆಗೆ ವ್ಯವಸಾಯೇತರ ಚಟುವಟಿಕೆಗಳನ್ನು ಕೈಗೊಂಡರೆ ಆರ್ಥಿಕ ಸಬಲರಾಗುತ್ತಾರೆ ಎಂದರು. ಸಭೆಯಲ್ಲಿ ರಾಜ್ಯ ಪ್ರಶಸ್ತಿ ವಿಭೂಷಿತ ನಿವೃತ್ತ ಶಿಕ್ಷಕ ಹ.ಬ.ಅಸೂಟಿ ಮಾತನಾಡಿ, ಹಣವನ್ನು ನೀರಿನಂತೆ ಗಳಿಸಬೇಕು ತೀರ್ಥದಂತೆ ಬಳಸಬೇಕು ಎಂದು ರೈತರಿಗೆ ಕಿವಿ ಮಾತು ಹೇಳಿದರು.

    ಸಂಘದ ಮುಖ್ಯ ಕಾರ್ಯನಿರ್ವಾಹಕ ರಾಜೇಶ ಹಿಂಬರಕಿ ವಾರ್ಷಿಕ ವರದಿ ಮಂಡಿಸಿ, ಸಂಘವು 849 ಸದಸ್ಯರನ್ನು ಹೊಂದಿ ಲಾಭದತ್ತ ಸಾಗುತ್ತಿದೆ. ಷೇರು ಸದಸ್ಯರಿಗೆ ಶೇ. 4 ಡಿವಿಡೆಂಡ್ ನೀಡಲಾಗುತ್ತಿದೆ ಎಂದರು. ಚಂದ್ರಯ್ಯಸ್ವಾಮಿ ಹಿರೇಮಠ, ಬಾಳಪ್ಪ ಹೂಲಿ, ಸಂಘದ ಉಪಾಧ್ಯಕ್ಷ ಪಂಚಪ್ಪ ಹನಸಿ, ನಿರ್ದೇಶಕರಾದ ಪಂಚಪ್ಪ ಗುಂಡ್ಲೂರ, ಮಲ್ಲಿಕಾರ್ಜುನಯ್ಯ ಹಿರೇಮಠ, ಪಂಚಲಿಂಗಪ್ಪ ಗೊಂದಿ, ಅಲ್ಲಿಸಾಬ ಕೊಳಚಿ, ಅಲ್ಲಪ್ಪ ಚುಳಕಿ, ಶಂಕ್ರೆವ್ವ ಗೋಕಾಕ, ರಾಜೇಶ್ವರಿ ಬಾಳಿ, ಶಿವಾನಂದ ಭಜಂತ್ರಿ, ಗೋಪಾಲ ತಳವಾರ, ಗೌತಮಗೌಡ ದ್ಯಾಮನಗೌಡರ, ಬಸವರಾಜ ಶಿಗ್ಗಾಂವಿ, ಅಮೀನುದ್ದಿನ್ ಖೊಂದನ್ನವರ, ಮೃತ್ಯುಂಜಯ ಬಸಿಡೋಣಿ, ಪ್ರೇಮಾ ರಾಮಪುರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts