More

    ಸರ್ವರ ಸಹಕಾರ.. ಪೋಲಿಯೋ ಸಂಹಾರ…

    ಕಾರವಾರ: ಪೋಲಿಯೋ ನಿಮೂಲನೆಗೆ ಎಲ್ಲರೂ ಸಹಕರಿಸಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಕರೆ ನೀಡಿದರು.

    ಸರ್ಕಾರಿ ಮೆಡಿಕಲ್ ಕಾಲೇಜ್ ಆವರಣದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು. ಕ್ರಿಮ್್ಸ ನಿರ್ದೇಶಕ ಡಾ.ಗಜಾನನ ನಾಯಕ, ಡಿಎಚ್​ಒ ಡಾ.ಶರದ್ ನಾಯಕ, ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್, ಡಾ.ರಮೇಶ ರಾವ್, ಸುನೀಲ ಸೋನಿ, ಅನಮೋಲ ರೇವಣಕರ್ ಇದ್ದರು.

    ರೆಡ್​ಕ್ರಾಸ್​ನಿಂದ: ನಂದನಗದ್ದಾ ಯುಕೆ ಪಿಕಲ್ಸ್ ಆವರಣದಲ್ಲಿ ಉತ್ತರ ಕನ್ನಡ ಜಿಲ್ಲಾ ರೆಡ್​ಕ್ರಾಸ್ ಸಂಸ್ಥೆಯಿಂದ ಪೋಲಿಯೋ ಲಸಿಕೆ ಅಭಿಯಾನ ನಡೆಸಲಾಯಿತು. ರೆಡ್​ಕ್ರಾಸ್ ಚೇರ್ಮನ್ ವಿ.ಎಂ.ಹೆಗಡೆ ಚಾಲನೆ ನೀಡಿದರು. ಎಲ್.ಕೆ.ನಾಯ್ಕ, ಆರ್.ಎಸ್.ನಾಯ್ಕ, ಅಲ್ತಾಫ್ ಶೇಖ್, ಸಚ್ಚಿದಾನಂದ ನಾಯ್ಕ, ಖೈರುನ್ನಿಸ್ಸಾ ಶೇಖ್, ಸಂದೀಪ ರೇವಣಕರ್, ಸಲೀಂ ಶೇಖ್, ಯೋಗೇಶ ಶಾನಭಾಗ ಇದ್ದರು.

    ಆಜಾದ್ ಯೂತ್ ಕ್ಲಬ್​ನಿಂದ: ಆಜಾದ್ ಯೂತ್ ಕ್ಲಬ್​ನಿಂದ ಕೋಡಿಬಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಡಿಎಚ್​ಒ ಡಾ.ಶರದ್ ನಾಯಕ ಉದ್ಘಾಟಿಸಿದರು. ನಗರಸಭೆ ಉಪಾಧ್ಯಕ್ಷ ಪ್ರಕಾಶ ನಾಯಕ, ಸಾಮಾಜಿಕ ಕಾರ್ಯಕರ್ತ ಆರ್.ಜಿ.ಪ್ರಭು, ನಜೀರ್ ಶೇಖ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts