More

    ಸಮಾಜಮುಖಿ ಕೆಲಸಗಳು ಶಾಶ್ವತ

    ಕಲಬುರಗಿ: ವ್ಯಕ್ತಿ ನಮ್ಮೊಂದಿಗೆ ಇಲ್ಲದಿದ್ದಾಗ ಅವರು ಮಾಡಿದ ಉತ್ತಮ ಕೆಲಸಗಳನ್ನು ಸ್ಮರಿಸುತ್ತೇವೆ. ಸಮಾಜಮುಖಿ ಕಾರ್ಯಗಳು ಶಾಶ್ವತವಾಗಿರುತ್ತವೆ ಹೊರತು, ಸಾಯುವುದಿಲ್ಲ ಎಂದು ಸೊನ್ನ ವಿರಕ್ತ ಮಠದ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಹೇಳಿದರು.

    ಜೇವರ್ಗಿ ತಾಲೂಕಿನ ಸೊನ್ನ ಕ್ರಾಸ್ ಬಳಿ ಮಲ್ಲಿಕಾರ್ಜುನ ಬಿರಾದಾರ ಸ್ಮರಣಾರ್ಥ ಅವರ ಪರಿವಾರ ಸುತ್ತಲಿನ ಹಳ್ಳಿ ಪ್ರಯಾಣಿಕರು ಮತ್ತು ಜನರ ಅನುಕೂಲಕ್ಕಾಗಿ ನಿರ್ಮಿಸಿರುವ ತಂಗುದಾಣವನ್ನು ಸೋಮವಾರ ಲೋಕಾರ್ಪಣೆ ಮಾಡಿ ಮಾತನಾಡಿ, ಜನಹಿತದ ಚಿಂತನೆಯೊಂದಿಗೆ ಮಾಡಿದ ಕಾರ್ಯವನ್ನು ಶ್ಲಾಘಿಸಿದರು.

    ಜನಿಸಿದ ಪ್ರತಿಯೊಬ್ಬರೂ ಒಂದು ದಿನ ಸಾಯುವುದು ಸಾಮಾನ್ಯ. ಆದರೆ ನಾವು ಅಗಲಿದ ಬಳಿಕವೂ ನಮ್ಮ ಕೆಲಸಗಳು ಮಾತನಾಡುವಂತಿರಬೇಕು. ಮಲ್ಲಿಕಾರ್ಜುನ ಬಿರಾದಾರ ಹಾಗೆಯೇ ಬದುಕಿದ್ದರು. ಅವರ ನೆನಪಿಗಾಗಿ ತುಂಗುದಾಣ ಮಾಡಿ ಜನರಿಗೆ ಅನುವು ಮಾಡಿಕೊಟ್ಟಿರುವುದು ಮಾದರಿಯಾಗಿದೆ ಎಂದರು.

    ಸೊನ್ನ ಕ್ರಾಸ್‌ನಲ್ಲಿದ್ದ ಬಸ್ ನಿಲ್ದಾಣ ರಸ್ತೆ ಅಗಲಗೊಳಿಸುವಾಗ ನೆಲಸಮ ಮಾಡಲಾಗಿತ್ತು. ಪ್ರಯಾಣಿಕರು ಕುಳಿತುಕೊಳ್ಳಲು ಪರದಾಡುವಂತಾಗಿತ್ತು. ಈಗ ಅದಕ್ಕೊಂದು ಪರಿಹಾರ ಸ್ಕಿಕಿದೆ ಎಂದು ನ್ಯಾಯವಾದಿ ಬಸವರಾಜ ಬಿರಾದಾರ ಹೇಳಿದರು.

    ಪ್ರಮುಖರಾದ ಶಾಂತಪ್ಪ ಹೊಸಮನಿ, ವಿಜಯಕುಮಾರ ಬಿರಾದಾರ, ಲಕ್ಷ್ಮಣ ಗುಬ್ಬೇವಾಡ, ಮಲ್ಲಿಕಾರ್ಜುನ ಬಿರಾದಾರ, ಗುರುರಾಜ ನಿಪ್ಪಾಣಿ, ಶಿವಾನಂದ ಬಿರಾದಾರ, ಬಸವರಾಜ ಜೇವರ್ಗಿ, ಚನ್ನಬಸಮ್ಮ ಬಿರಾದಾರ ಇತರರಿದ್ದರು. ಬಳಿಕ ಅನ್ನ ಸಂತರ್ಪಣೆ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts