More

    ಉತ್ತಮ ಸಂಸ್ಕಾರದಿಂದ ಮಕ್ಕಳ ಭವಿಷ್ಯ ಉಜ್ವಲ

    ಜೇವರ್ಗಿ: ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ಮಾತ್ರ ಭವಿಷ್ಯ ಉಜ್ವಲಗೊಳ್ಳಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ತಂದೆ-ತಾಯಿ ಹಾಗೂ ಶಿಕ್ಷಕರ ಪಾತ್ರ ಬಹಳ ಮಹತ್ತರವಾಗಿದೆ ಎಂದು ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಹೇಳಿದರು.

    ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಗುರುಕುಲ ಉತ್ಸವದಲ್ಲಿ ಮಾತನಾಡಿದ ಅವರು, ಮಕ್ಕಳ ಭವಿಷ್ಯ ತಂದೆ-ತಾಯಿ ಹಾಗೂ ಶಿಕ್ಷಕರ ಕೈಯಲ್ಲಿದೆ. ಈ ಮೂವರ ಒಳ್ಳೆಯ ಮಾರ್ಗದರ್ಶನವೇ ಮಕ್ಕಳನ್ನು ಸರಿದಾರಿಗೆ ಕರೆದೊಯ್ಯುತ್ತದೆ. ಈಗಿನ ಕಾಲದಲ್ಲಿ ಮನುಷ್ಯ ಮನುಷ್ಯರನ್ನು ನಂಬುವುದು ಕಡಿಮೆ ಆಗುತ್ತಿದೆ. ಇದರಿಂದ ಕಳೆದು ಹೋಗುತ್ತಿರುವ ಮನುಷ್ಯತ್ವವನ್ನು ಉಳಿಸಿಕೊಳ್ಳುವುದು ಅಗತ್ಯವಾಗಿದೆ. ಚಿಕ್ಕ ಮಕ್ಕಳ ಕೈಯಲ್ಲಿ ಮೊಬೈಲ್ ನೀಡುವುದು ನಿಲ್ಲಿಸಬೇಕು. ಮೊಬೈಲ್‌ನಿಂದ ನಮ್ಮ ಸಂಸ್ಕೃತಿ ಮರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಮುಖಂಡ ಶಿವಲಾಲ್‌ಸಿಂಗ್ ಉದ್ಘಾಟಿಸಿದರು. ಅಂಕಲಗಿಯ ಶ್ರೀ ಅಭಿನವ ಗುರುಬಸವ ಶಿವಾಚಾರ್ಯರು ಸಾನ್ನಿಧ್ಯ, ಗೊಲಯ್ಯ ಸಿ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.

    ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ತಹಸೀಲ್ದಾರ್ ಮಲ್ಲಣ್ಣ ಯಲಗೋಡ, ಕಲಬುರಗಿಯ ಶ್ರೀಗುರು ಸ್ವತಂತ್ರ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ನಿತಿನ್ ನಾಯ್ಕ್, ಪ್ರಮುಖರಾದ ರಾಜಶೇಖರ ಸಾಹು ಸೀರಿ, ವಿಜಯಕುಮಾರ ಹಿರೇಮಠ, ರಾಜೇಸಾಹೇಬ್ ನಧಾಪ್, ಚನ್ನಮಲ್ಲಯ್ಯ ಹಿರೇಮಠ, ಎಸ್.ಟಿ. ಬಿರಾದಾರ, ಮಹಾಂತಯ್ಯ ಹಿರೇಮಠ, ಕಲ್ಯಾಣಕುಮಾರ ಸಂಗಾವಿ ಗಂವ್ಹಾರ, ಜಗದೀಶ ಉಕನಾಳಕರ್, ಜ್ಯೋತಿ ಸಾಲಿಮಠ, ರಾಜೇಂದ್ರ ಮಠ, ಎಸ್.ಕೆ ಬಿರಾದಾರ, ಭೀಮಾಶಂಕರ ವಿಭೂತಿ ಇತರರಿದ್ದರು.

    ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts