More

    ಶ್ರೀ ಅಜಿತ ಸಾಹಿತ್ಯ ಮಹೋತ್ಸವ 18ರಂದು

    ಹುಬ್ಬಳ್ಳಿ: ಜೈನ್ ಮುನಿ ಆಚಾರ್ಯ ಶ್ರೀ ಅಜಿತಶೇಖರ ಸುರೀಶ್ವರ ಮಹಾರಾಜರ ನೇತೃತ್ವದಲ್ಲಿ ಡಿ. 18ರಂದು ಬೆಳಗ್ಗೆ 10.30ಕ್ಕೆ ಕುಸುಗಲ್ಲ ರಸ್ತೆ ಜೈನ್ ಕಾಲನಿಯಲ್ಲಿ ಶ್ರೀ ಅಜಿತ ಸಾಹಿತ್ಯ ಮಹೋತ್ಸವ ಆಯೋಜಿಸಲಾಗಿದೆ. ಶ್ರೀ ಅಜಿತಶೇಖರ ಮಹಾರಾಜ ಅವರು ಬರೆದ 100ನೇ ಪುಸ್ತಕ ‘ರಿಫ್ರೆಶ್ ಯುವರ್ ಮೈಂಡ್’ ಲೋಕಾರ್ಪಣೆ ಮಾಡಲಾಗುವುದು ಎಂದು ಶ್ರೀ ಅಜಿತ ಸಾಹಿತ್ಯ ಮಹೋತ್ಸವ ಸಮಿತಿ ಅಧ್ಯಕ್ಷ ಭವರಲಾಲ ಜೈನ್ ತಿಳಿಸಿದರು.

    ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿಯೇ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದ್ದು, ಸುಮಾರು 10ಸಾವಿರ ಭಕ್ತರು ಪಾಲ್ಗೊಳ್ಳಲಿದ್ದಾರೆ. ಪುಸ್ತಕವು ಕನ್ನಡ, ಗುಜರಾತಿ, ಹಿಂದಿ, ಇಂಗ್ಲಿಷ್, ತೆಲಗು ಹಾಗೂ ಮರಾಠಿಯಲ್ಲಿ ಮುದ್ರಿಸಲಾಗಿದೆ. ರಾಜ್ಯಪಾಲ ಥಾವರಚಂದ್ ಗೆಹ್ಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಕುಮಾರಪಾಲ ಭಾಯಿ ವಿ ಷಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.

    ಮಹಾರಾಷ್ಟ್ರ ಸರ್ಕಾರದ ಸಚಿವ ಮಂಗಲಪ್ರಭಾತ ಲೋಧಾ, ಕರ್ನಾಟಕ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಸಿ.ಸಿ.ಪಾಟೀಲ, ಮಾಜಿ ಸಿಎಂ ಜಗದೀಶ ಶೆಟ್ಟರ, ಎಂಎಲ್​ಸಿ ಬಸವರಾಜ ಹೊರಟ್ಟಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಪ್ರದೀಪ ಶೆಟ್ಟರ, ಮೇಯರ್ ಈರೇಶ ಅಂಚಟಗೇರಿ, ಸಂಸದ ತೇಜಸ್ವಿ ಸೂರ್ಯ, ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಪಾಲ್ಗೊಳ್ಳುವರು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts