More

    ಶಿರಸಿ-ಕುಮಟಾ ರಸ್ತೆ ವಿಸ್ತರಣೆ

    ಶಿರಸಿ: ತಡಸ- ಶಿರಸಿ- ಕುಮಟಾ ರಾಷ್ಟ್ರೀಯ ಹೆದ್ದಾರಿ 766-ಇ ರ ವಿಸ್ತರಣೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಮಂಗಳವಾರ ಒಪ್ಪಿಗೆ ದೊರತಿದೆ.

    ಕೇಂದ್ರ ಸರ್ಕಾರದ ಭಾರತ ಮಾಲಾ ಯೋಜನೆಯ ಭಾಗ 1 ರಲ್ಲಿ ಒಟ್ಟು 440.16 ಕೋಟಿ ರೂ. ವೆಚ್ಚದಲ್ಲಿ ಹೆದ್ದಾರಿ ವಿಸ್ತರಣೆಗೆ 2017 ರಲ್ಲೇ ಕೇಂದ್ರ ಸರ್ಕಾರ ಟೆಂಡರ್ ಕರೆದು ಗುತ್ತಿಗೆ ಕಂಪನಿ ನಿಯೋಜಿಸಿತ್ತು. ಆದರೆ, 29.244 ಹೆಕ್ಟೇರ್ ಅರಣ್ಯ ಭೂಮಿ 10 ಸಾವಿರಕ್ಕೂ ಅಧಿಕ ಮರಗಳ ಹನನವಾಗುವುದರಿಂದ ಅರಣ್ಯ ಮಂತ್ರಾಲಯ ತಕ್ಷಣ ಒಪ್ಪಿಗೆ ಸೂಚಿಸಿರಲಿಲ್ಲ. ಕೆಲವೆಡೆ ರಸ್ತೆಯ ಅಗಲ ಕಡಿಮೆ ಮಾಡುವ ಷರತ್ತಿನೊಂದಿಗೆ ಮಂತ್ರಾಲಯದ ಬೆಂಗಳೂರು ರೀಜನಲ್ ಎಂಪವರ್ಡ್ ಕಮಿಟಿಯ ಸಭೆಯ ನಿರ್ಣಯದಂತೆ ಒಪ್ಪಿಗೆ ನೀಡಿ ಮಂಗಳವಾರ ಆದೇಶಿಸಲಾಗಿದೆ. ಈಗಾಗಲೇ ಎನ್​ಎಚ್​ಎಐ ಭೂ ಸ್ವಾಧೀನಕ್ಕೆ ಶಿರಸಿ ಹಾಗೂ ಕುಮಟಾ ಉಪವಿಭಾಗ ವ್ಯಾಪ್ತಿಯಲ್ಲಿ ಪ್ರಥಮ ಅಧಿಸೂಚನೆ ಹೊರಡಿಸಿದ್ದು, ಹೊಸ ಭೂ ಸ್ವಾಧೀನ ಕಾಯ್ದೆಯ ಅನ್ವಯ ಪರಿಹಾರ ನೀಡಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆ ಕೆಲವೇ ತಿಂಗಳುಗಳಲ್ಲಿ ನಡೆಯಲಿದೆ. ರಸ್ತೆ ವಿಸ್ತರಣೆಗೆ ಇದ್ದ ಎಲ್ಲ ಅಡೆತಡೆಗಳು ನಿವಾರಣೆಯಾಗಿದ್ದು, ಮಳೆಗಾಲ ಮುಗಿಯುತ್ತಿದ್ದಂತೆ ವಿಸ್ತರಣೆ ಕಾಮಗಾರಿ ಶುರುವಾಗುವ ಸಾಧ್ಯತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts