More

    ಶರಣನ ಜಾತ್ರೆಗೆ ಚಾಲನೆ

    ಕಲಬುರಗಿ : ಉತ್ತರ ಕರ್ನಾಟಕ ಭಾಗದ ಆರಾಧ್ಯ ದೈವ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪ್ರಸ್ತುತ ಪೀಠಾಧಿಪತಿ ಶ್ರೀ ಡಾ. ಶರಣಬಸವಪ್ಪ ಅಪ್ಪ ಅವರು ಬುಧವಾರ ಚಾಲನೆ ನೀಡಿದರು.
    ನೂತನವಾಗಿ ನಿರ್ಮಿಸಿದ ಬೆಳ್ಳಿ ಪಲ್ಲಕ್ಕಿಯನ್ನು ಶರಣನಿಗೆ ಸಮರ್ಪಿಸಿ ನಂತರ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು. ಪ್ರತಿವರ್ಷ ಪಲ್ಲಕ್ಕಿ ಉತ್ಸವ ನಡೆಸುವ ಮೂಲಕ ಜಾತ್ರೆಗೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದೆ. ಈ ಸಲ ಬೆಳ್ಳಿ ಪಲ್ಲಕ್ಕಿ ನಿರ್ಮಿಸಿದ್ದು ವಿಶೇಷವಾಗಿದೆ.
    ಡಾ. ಶರಣಬಸವಪ್ಪ, ಅಪ್ಪ, ದಾಕ್ಷಾಯಿಣಿ ಮಾತಾಜಿ ಹಾಗೂ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರು ದಾಸೋಹ ಮಹಾಮನೆಯಿಂದ ಮಂದಿರಕ್ಕೆ ಆಗಮಿಸಿದರು. ಮಂದಿರದ ಮುಂಭಾಗದಲ್ಲಿ ಪುರವಂತರು ಶಸ್ತ್ರ ಹಾಕುವ ಮೂಲಕ ಪುರವಂತಿಕೆ ಪ್ರದರ್ಶಿಸಿದರು.
    ನಂತರ ಶ್ರೀ ಶರಣಬಸವೇಶ್ವರರ ದರ್ಶನ ಪಡೆದ ಅಪ್ಪ ಅವರು ಬೆಳ್ಳಿ ಪಲ್ಲಕ್ಕಿ ಸಮರ್ಪಿಸಿದರು. ಸಂಪ್ರದಾಯದಂತೆ ಮಂದಿರದ ಆವರಣದಲ್ಲಿ ಪಲ್ಲಕ್ಕಿ ಉತ್ಸವ ನೆರವೇರಿತು. ಭಕ್ತರು ಪಾಲ್ಗೊಂಡಿದ್ದರು. ನಾಳೆ ಸಂಜೆ 6ಕ್ಕೆ ಉಚ್ಛಾಯಿ 13ರಂದು ಸಂಜೆ 6ಕ್ಕೆ ಭವ್ಯರಥೋತ್ಸವ ಜರುಗಲಿದೆ. ಮಂದಿರದ ಎದರುಗಡೆ ಜಾತ್ರಾ ಮೈದಾನದಲ್ಲಿ ಆಟಿಕೆ ವಸ್ತುಗಳ, ದಿನ ಬಳಕೆ ವಸ್ತು, ತೂಗು ತೊಟ್ಟಿಲುಗಳು, ತಿಂಡಿ ತಿನಿಸು ವಸ್ತುಗಳ ಮಳಿಗೆಗಳು ತಲೆ ಎತ್ತುತ್ತಿವೆ. ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts