More

    ವಕೀಲರ ಸೌಹಾರ್ದ ಕ್ರಿಕೆಟ್ ಕ್ರೀಡಾಕೂಟ

    ದಾವಣಗೆರೆ: ಒತ್ತಡಗಳ ನಡುವೆ ಕೆಲಸ ನಿರ್ವಹಿಸುವ ವಕೀಲರು ಮಾನಸಿಕ ಮತ್ತು ದೈಹಿಕ ಸದೃಢರಾಗಲು ಕ್ರೀಡೆಗಳು ಅಗತ್ಯ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್ ಕುಮಾರ್ ತಿಳಿಸಿದರು.
    ಜಿಲ್ಲಾ ಕ್ರೀಡಾಂಗಣದಲ್ಲಿ ದಾವಣಗೆರೆ ಜಿಲ್ಲಾ ವಕೀಲರ ಸಂಘದಿಂದ ಭಾನುವಾರ ಆಯೋಜಿಸಿದ್ದ ವಕೀಲರ ಸೌಹಾರ್ದ ಕ್ರಿಕೆಟ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
    ನ್ಯಾಯಾಲಯ ಕಾರ್ಯಕಲಾಪಗಳ ಹಿನ್ನೆಲೆಯಲ್ಲಿ ವಕೀಲರು ನಿತ್ಯ ಒಂದಿಲ್ಲೊಂದು ಒತ್ತಡದಲ್ಲಿ ತೊಡಗಿರುತ್ತಾರೆ. ಇದರಿಂದ ಮುಕ್ತರಾಗಲು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಬೇಕು. ಈ ಕೂಟದ ಮೂಲಕ ವಕೀಲರು ತಮ್ಮ ಕ್ರೀಡಾ ಕೌಶಲ ಬೆಳಕಿಗೆ ತರಲು, ಸೌಹಾರ್ದ ವಾತಾವರಣ ಮೂಡಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
    ಮುಂಬರುವ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಮತ್ತು ವಲಯ ಮಟ್ಟದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಲು ದಾವಣಗೆರೆ ಜಿಲ್ಲಾ ವಕೀಲರ ಸಂಘ ನಿರ್ಧರಿಸಿದೆ. ಇಂದಿನ ಕ್ರಿಕೆಟ್ ಕ್ರೀಡಾಕೂಟದಲ್ಲಿ ಒಟ್ಟು ಆರು ತಂಡಗಳಿದ್ದು, ಒಟ್ಟು ನೂರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದಾರೆ ಎಂದು ಹೇಳಿದರು.
    ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ.ಬಸವರಾಜ್ ಗೋಪನಾಳು, ಕಾರ್ಯದರ್ಶಿ ಎಸ್. ಬಸವರಾಜ್, ಸಹಕಾರ್ಯದರ್ಶಿ ಎ. ಎಸ್. ಮಂಜುನಾಥ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಡಿ.ಪಿ.ಬಸವರಾಜ್, ಕಾರ್ಯದರ್ಶಿ ಎಲ್.ಎಚ್.ಪ್ರದೀಪ್, ಉಪಾಧ್ಯಕ್ಷ ದಿವಾಕರ, ಸಹ ಕಾರ್ಯದರ್ಶಿ ಎ.ಸಿ.ರಾಘವೇಂದ್ರ, ಜಿ.ಕೆ.ಬಸವರಾಜ್, ವಕೀಲರಾದ ಯೋಗೇಶ್ವರಪ್ಪ, ಬಿ.ಬಿ.ರಾಮಪ್ಪ, ಲಕ್ಕಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts