More

    ಮುದ ನೀಡಿದ ಜಲ ಕ್ರೀಡೆ, ಕೆಲಗೇರಿ ಕೆರೆಯಲ್ಲಿ ಈಜಿನ ಮೋಜು

    ಧಾರವಾಡ: ರಾಷ್ಟ್ರೀಯ ಯುವಜನೋತ್ಸವ ಅಂಗವಾಗಿ ಇಲ್ಲಿಯ ಕೆಲಗೇರಿ ಕೆರೆಯಲ್ಲಿ ಏರ್ಪಡಿಸಲಾಗಿರುವ ಜಲ ಕ್ರೀಡೆ, ಬೋಟಿಂಗ್ ಮುಂತಾದವು ಜನರಿಗೆ ಮುದ ನೀಡುತ್ತಿವೆ. ಅನೇಕರು ಕೆರೆಯಲ್ಲಿ ಸಾಹಸ ಕ್ರೀಡೆಗಳನ್ನು ಪ್ರದರ್ಶಿಸಿದರು.

    ವಿವಿಧ ರಾಜ್ಯಗಳಿಂದ ಬಂದಿರುವ ಸಾವಿರಾರು ಪ್ರತಿನಿಧಿಗಳಿಗೆ ಉಚಿತವಾಗಿ ಬೋಟಿಂಗ್ ಹಾಗೂ ಸಾಹಸ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗಿದೆ. ಪ್ರತಿನಿಧಿಗಳು, ಸ್ಥಳೀಯರು ಕೆರೆಯಲ್ಲಿ ಈಜಿನ ಮೋಜು ಅನುಭವಿಸಿದರು.

    ಸಣ್ಣ ಬೋಟ್, ಯಂತ್ರಗಳಿಂದ ನಡೆಯುವ ಎಂಟ್ಹತ್ತು ಜನ ಕುಳಿತುಕೊಳ್ಳುವ ಬೋಟ್ ಹೀಗೆ ಅನೇಕ ಬೋಟ್​ಗಳಲ್ಲಿ ಜನರು ಕೆರೆಯಲ್ಲಿ ಸಂಚರಿಸುವ ಮೂಲಕ ಆನಂದ ಪಟ್ಟರು. ಪ್ರತಿಯೊಬ್ಬರಿಗೂ ಲೈಫ್ ಜಾಕೆಟ್ ಹಾಕಿಯೇ ಕೆರೆಯಲ್ಲಿ ಬಿಡಲಾಗುತ್ತಿತ್ತು. ಕೆಲ ಪ್ರತಿನಿಧಿಗಳು ಕೆರೆಯ ಮಧ್ಯದಲ್ಲಿಯೇ ಬೋಟ್​ನಿಂದ ಜಿಗಿದು, ಈಜಿ ದಡ ಸೇರಿದರು. ಆ ಮೂಲಕ ಸಾಹಸ ಪ್ರದರ್ಶನ ಮಾಡಿದರು.

    ಯುವಜನೋತ್ಸವ ನಿಮಿತ್ತ ಏರ್ಪಾಟಾಗಿರುವ ವಾಟರ್ ಸ್ಪೋರ್ಟ್ಸ್​ಗಳನ್ನು ಮಾಜಿ ಸಿಎಂ ಜಗದೀಶ ಶೆಟ್ಟರ್ ಶನಿವಾರ ಉದ್ಘಾಟಿಸಿದರು. ಧಾರವಾಡದ ಯುವಜನೋತ್ಸವ ಯಶಸ್ವಿಯಾಗಿ ನಡೆಯುತ್ತಿದೆ. ಇಡೀ ರಾಷ್ಟ್ರ ಒಂದು ಎಂಬ ಭಾವನೆ ಇಲ್ಲಿ ಉಂಟಾಗಿದೆ. 26ನೇ ಯುವ ಜನೋತ್ಸವದ ಆತಿಥ್ಯ ವಹಿಸಿರುವುದು ಕರ್ನಾಟಕಕ್ಕೆ ಇದೊಂದು ಸದವಕಾಶ. ಈ ಬಾರಿಯ ವಿವೇಕಾನಂದರ ಜನ್ಮದಿನವು ಅವಳಿನಗರ ಜನರಿಗೆ ಹೊಸ ಅನುಭವ ನೀಡಿದೆ ಎಂದು ಜಗದೀಶ ಶೆಟ್ಟರ್ ಅಭಿಪ್ರಾಯಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts