More

    ಭೂ ಸಾಗುವಳಿ ರೈತರಿಗೆ ಹಕ್ಕುಪತ್ರ ವಿತರಿಸಿ

    ಸವಣೂರ: ಶಿಗ್ಗಾಂವಿ ತಾಲೂಕು ಕಂದಾಯ ಇಲಾಖೆಯ ಸರ್ಕಾರಿ ಭೂಮಿಯನ್ನು ಹಲವು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದ ರೈತರಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಮಾನವ ಹಕ್ಕುಗಳ ಸಮಿತಿ ಹಾಗೂ ಭ್ರಷ್ಟಾಚಾರ ನಿಮೂಲನ ಸಮಿತಿ ಮತ್ತು ರೈತ ಸಂಘದಿಂದ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

    ಕುನ್ನೂರ ಗ್ರಾಮದ ಪಕ್ಕದ ಹಳವ ಹರ್ಲಘಟ್ಟಾ ಗ್ರಾಮದಲ್ಲಿ ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಭೂಮಿಯಲ್ಲಿ 80 ರೈತ ಕುಟುಂಬಗಳು ಸುಮಾರು 203 ಎಕರೆ 26 ಗುಂಟೆ ಕ್ಷೇತ್ರವನ್ನು ಸ್ವಾತಂತ್ರ್ಯ ಪೂರ್ವದಿಂದ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ.

    ಈ ಭೂಮಿ ಕಂದಾಯ ಇಲಾಖೆಯದ್ದಾಗಿದ್ದು ಹಿಡುವಳಿ ಮೀರಿದ ಜಮೀನಾಗಿದೆ. ಸರ್ಕಾರ ಇದನ್ನು ತನ್ನ ಅಧೀನಕ್ಕೆ ಪಡೆದುಕೊಂಡಿರುತ್ತದೆ. ಮೂಲತಃ ಈ ಭೂಮಿ ಅರಣ್ಯ ಭೂಮಿಯೂ ಅಲ್ಲ. ಕಾಯ್ದಿಟ್ಟ ಅರಣ್ಯ ಪ್ರದೇಶವೂ ಅಲ್ಲ. ಇದು ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯಾಗಿದೆ. ಈಗಾಗಲೇ ಹಲವು ರೈತರು ಸಾಗುವಳಿ ಮಾಡಿ ಜೀವನ ನಡೆಸುತ್ತಿದ್ದಾರೆ. ಈ ರೈತ ಕುಟುಂಬಗಳಿಗೆ ಅನ್ಯಾಯವಾಗದಂತೆ ಹಕ್ಕುಪತ್ರವನ್ನು ನೀಡಿ ನ್ಯಾಯ ಒದಗಿಸಬೇಕು. ಬಡ ರೈತ ಕುಟುಂಬಗಳು ನೆಲೆ ನಿಲ್ಲಲು ಅವಕಾಶ ಕಲ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಬಿ. ಸೋಮಶೇಖರಗೌಡ, ಪಾರ್ಶ್ವನಾಥ ಸೋಗ್ಲಿ, ಚನ್ನಪ್ಪ ಹೂಗಾರ, ಖರೀಬಸಾಬ ಹೊನ್ನಳ್ಳಿ, ಕಲ್ಲಪ್ಪ ಅಗಸಿಮನಿ, ರಾಮಣ್ಣ ಮತ್ತಿಗಟ್ಟಿ, ಲಕ್ಷ್ಮವ್ವ ಯಲವಿಗಿ, ಸುಜಾತಾ ಹೂಗಾರ, ಮಲ್ಲಿಕಾರ್ಜುನ ಮೊಲೆಜನವರ, ಚಿನ್ನಪ್ಪ ಮಲ್ಲಾಡದ, ಕಲ್ಲಪ್ಪ ಮೊಲೆಜನವರ ಇತರರು ಮನವಿ ಸಲ್ಲಿಸುವ ಸಮಯದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts