More

    ಭೂಮಿಯ ಸಂರಕ್ಷಣೆ ಎಲ್ಲರ ಕರ್ತವ್ಯ

    ಕೊಳ್ಳೇಗಾಲ: ಭೂಮಿ ಮಾನವನ ಎಲ್ಲ ಅವಶ್ಯಕತೆಯನ್ನು ಈಡೇರಿಸುತ್ತದೆ. ಸದಾ ಒಳ್ಳಿತನ್ನೇ ಬಯಸುತ್ತದೆ. ಹಾಗಾಗಿ ಭೂ ಸಂರಕ್ಷಣೆ ಮಾಡಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಂ.ಎನ್.ನಂದಿನಿ ತಿಳಿಸಿದರು.


    ನಗರದ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅಭಿ ಯೋಜನೆ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವ ಭೂಮಿ ದಿನ ಹಾಗೂ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಸ್ತುತ ಮಾನವ ದುರಾಸೆಯಿಂದ ಭೂಮಿಯನ್ನು ಬೇಕಾದ ರೀತಿ ಬಳಸಿಕೊಂಡಿದ್ದಾನೆ. ಆದರೆ, ಮಾನವರ ಒಳಿತನ್ನೇ ಬಯಸುವ ಭೂಮಿ ನಮ್ಮ ಹಸಿವನ್ನು ನೀಗಿಸಿ ಆಸರೆಯಾಗಿದೆ. ಭೂಮಿಯು ಸದಾ ನಮಗೆ ಜೀವನದ ಎಲ್ಲ ಸೌಕರ್ಯ ಮತ್ತು ಅವಶ್ಯಕತೆಗಳನ್ನು ನೀಡುತ್ತಿದೆ. ಅದು ಎಲ್ಲರನ್ನೂ ತಾಯಿಯಂತೆ ನೋಡಿಕೊಳ್ಳುತ್ತದೆ. ಅದೇ ರೀತಿ ನಾವು ಕೂಡ ಅದನ್ನು ರಕ್ಷಿಸಬೇಕು. ಹೀಗಾಗಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ವಿಶ್ವದಾದ್ಯಂತ ಭೂ ದಿನವನ್ನು ಆಚರಿಸಲಾಗುತ್ತದೆ ಎಂದರು.


    ಸಹಾಯಕ ಸರ್ಕಾರ ಅಭಿಯೋಜಕ ಶಂಕರ್ ಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಡಿ.ಎಸ್.ಬಸವರಾಜು, ಉಪಾಧ್ಯಕ್ಷ ಸೀಮಾತಾಸಿನ್ ಸುಲ್ತಾನ, ಮಲ್ಲಿಕಾರ್ಜುನ, ಮಹದೇವಸ್ವಾಮಿ, ಹೇಮಾವತಿ, ಅಶ್ವಿನಿ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts