More

    ಪರಿಸರ ನಾಶದಿಂದ ಮಾನವನ ವಿನಾಶ

    ಶೃಂಗೇರಿ: ಭೂಮಿಯಲ್ಲಿ ಸಕಲ ಜೀವಿಗಳಿಗಾಗಿ ಕೋಟ್ಯಾನು ಕೋಟಿ ಜೀವ ಪ್ರಬೇಧಗಳು ಸೃಷ್ಟಿಯಾಗಿದೆ. ಪ್ರಕೃತಿ ಹುಟ್ಟುವುದಕ್ಕೆ, ಜೀವಿಸುವುದಕ್ಕೆ ಪೂರಕವಾದ ವಾತಾವರಣ, ಆಹಾರ ಮತ್ತು ಹಲವು ಅಂಶಗಳನ್ನು ನೀಡಿದೆ ಎಂದು ಆರ್ಯುವೇದ ವೈದ್ಯ ಡಾ.ನರಸಿಂಹ ಪ್ರಸಾದ್ ಹೇಳಿದರು.
    ಮಂಗಳವಾರ ಪತಂಜಲಿ ಯೋಗ ಶಿಕ್ಷಣ ಸಮಿತಿ ಶೃಂಗೇರಿ ಶಾಖೆಯ ಆರ್ಷ ವಿದ್ಯಾಕೇಂದ್ರದಲ್ಲಿ ಹಮ್ಮಿಕೊಂಡ ಯುಗಾದಿ ಹಬ್ಬದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಮನುಷ್ಯ ತಾನು ಹುಟ್ಟಿರುವ ಉದ್ದೇಶ, ತಲುಪುವ ಗುರಿಯನ್ನು ಗುರುತಿಸಿ ವ್ಯವಹರಿಸುವ ಜ್ಞಾನ ಹೊಂದಿದ್ದಾನೆ.ಪರಿಸರದ ಆನೇಕ ಅಂಶಗಳು ಮಾನವನ ಬುದ್ಧಿಮತ್ತೆಗೆ ಸಹಕರಿಸುತ್ತದೆ. ಅವುಗಳು ನಾಶವಾದರೆ ಮನುಷ್ಯ ಪ್ರಬೇಧ ನಾಶವಾಗುತ್ತದೆ. ಹಾಗಾಗಿ ನಾವು ಪ್ರಕೃತಿಯನ್ನು ಜೋಪಾನವಾಗಿ ಕಾಪಾಡಿಕೊಂಡು ಹೋಗಬೇಕು ಎಂದರು.
    ನಮ್ಮ ಸಂಸ್ಕೃತಿಯಲ್ಲಿ ಒಂದೊಂದು ಹಬ್ಬಗಳು ಪ್ರಕೃತಿಗೆ ಸಂಬಂಧಪಟ್ಟ ವಿಶೇಷತೆಗಳಿಂದ ಕೂಡಿದೆ.ಯುಗಾದಿ ಹಬ್ಬ ಮನಸ್ಸಿನ ಮೇಲೆ ಉನ್ನತ ಪ್ರಭಾವ ಬೀರುವ ವಿಶಿಷ್ಟ ಹಬ್ಬವಾಗಿದೆ ಎಂದರು.
    ನಗರ ಸಂಚಾಲಕಿ ಶ್ರೀಮತಿ ಸುಬ್ರಮಣ್ಯ ಚಂದ್ರ ನಮಸ್ಕಾರ ಯೋಗ ಕಾರ್ಯಕ್ರಮ ನೆಡೆಸಿಕೊಟ್ಟರು. ಪತಂಜಲಿ ಯೋಗ ಶಿಕ್ಷಣ ಸಮಿತಿ ತಾಲೂಕು ಸಂಚಾಲಕ ನಾಗೇಶ್ ಕಾಮತ್, ಸದಸ್ಯರಾದ ಮಂಜುನಾಥ್ ಗೌಡ, ಮಹೇಶ್ ಕಾಕತ್ಕರ್, ರವಿಕುಮಾರ್, ಸುಬ್ರಹ್ಮಣ್ಯ, ಮಲ್ಲಿಕಾ, ಜಯಶ್ರೀ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts