More

    ಅರಿವು ಮೂಡಿಸುವುದೇ ಗುರುವಿನ ನಿಜ ಧರ್ಮ

    ಹುಬ್ಬಳ್ಳಿ : ಮನುಷ್ಯನಲ್ಲಿ ಅರಿವು-ಮರೆವು ಎರಡೂ ಮನೆ ಮಾಡಿವೆ. ಮರೆವು ದೂರ ಮಾಡಿ ಅರಿವು ಉಂಟು ಮಾಡುವುದೇ ಗುರುವಿನ ನಿಜ ಧರ್ಮವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

    ಇಲ್ಲಿನ ವಿದ್ಯಾನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಶ್ರೀ ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳದ 22ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

    ಮನುಷ್ಯ ಜೀವನದಲ್ಲಿ ಸುಖ, ದುಃಖಗಳು ಬರುವುದು ಸಹಜ. ಸುಖ ಬಂದಾಗ ಹಿಗ್ಗದೇ, ಕಷ್ಟ ಬಂದಾಗ ಕುಗ್ಗದೇ ಸಮತೋಲನದಿಂದ ಬಾಳುವುದು ಜೀವನ ಶ್ರೇಯಸ್ಸಿಗೆ ಕಾರಣವಾಗುತ್ತದೆ ಎಂದು ಸಲಹೆ ನೀಡಿದರು.

    ಶ್ರೀ ಜಗದ್ಗುರು ರೇಣುಕಾಚಾರ್ಯರು ಜಾತಿ ಜಂಜಡಗಳನ್ನು ಮೀರಿ, ಭಾವ ಸಾಮರಸ್ಯ ಸೌಹಾರ್ದತೆಗಾಗಿ ಸದಾ ಶ್ರಮಿಸಿದವರು. ಸಂಸ್ಕಾರದ ಮೂಲಕ ಉತ್ತುಂಗಕ್ಕೇರಲು ಪೂರಕವಾದ ಜೀವನ ಮೌಲ್ಯ ಸೂತ್ರಗಳನ್ನು ಬೋಧಿಸಿದ್ದಾರೆ. ಭಾರತೀಯ ಉತ್ಕೃಷ್ಟ ಸಂಸ್ಕೃತಿಗೆ ಮಹಿಳೆಯರ ಕೊಡುಗೆ ಅಪಾರ. ನಾಗರೀಕತೆ ಮತ್ತು ಸುಧಾರಣೆ ಹೆಸರಿನಲ್ಲಿ ಯಾವುದೇ ಸಂಘರ್ಷ ನಡೆಯಬಾರದೆಂದು ಸ್ಪಷ್ಟಪಡಿಸಿದ್ದಾರೆ. ಕಲಿತ ಪಾಠ ಮರೆತರೂ ಅನುಭವದ ಪಾಠಗಳನ್ನು ಮರೆಯಲಾಗದು ಎಂದು ಹೇಳಿದರು.

    ಉದ್ಘಾಟನೆ ನೆರವೇರಿಸಿ ಮಾತನಾಡಿದ ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ದೇವರು ಧರ್ಮ ಸಂಸ್ಕೃತಿ ನಮ್ಮೆಲ್ಲರ ನಂಬಿಗೆಯ ಮೇಲೆ ನಿಂತುಗೊಂಡಿವೆ. ನಂಬಿಗೆ ಇದ್ದಲ್ಲಿ ಫಲ ಕಟ್ಟಿಟ್ಟ ಬುತ್ತಿ ಎಂದರು.

    ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳ ಅಧ್ಯಕ್ಷೆ ಇಂದುಮತಿ ಮಾನ್ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ ಬೆಂಡಿಗೇರಿ ಮತ್ತು ವಿಶ್ವನಾಥ ಹಿರೇಗೌಡರ ಉಪಸ್ಥಿತರಿದ್ದರು.

    ‘ಅಳಿಯ ಒಳ್ಳೆಯವ’ ಎಂಬ ಕಿರು ನಾಟಕವನ್ನು ಮಹಿಳಾ ಮಂಡಳ ಸದಸ್ಯರು ಅಭಿನಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts