ಅಮ್ಮಿನಬಾವಿ ಪಂಚಗೃಹ ಹಿರೇಮಠದ ಜಾತ್ರಾ ಮಹೋತ್ಸವ ಏ. 12ಕ್ಕೆ

blank

ಧಾರವಾಡ: ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗ್ರಹ ಹಿರೇಮಠದ ಮಹಾತಪಸ್ವಿ ಕರ್ತ ಶ್ರೀ ಗುರುಶಾಂತಲಿಂಗ ಶಿವಯೋಗಿಗಳ ಪ್ರಥಮ ಜಾತ್ರಾ ಮಹೋತ್ಸವ ಏಪ್ರಿಲ್ 12ರಂದು ಜರುಗಲಿದೆ. ಇದರ ಅಂಗವಾಗಿ ಮಾರ್ಚ್ 29 ರಿಂದ ಕಲಬುರ್ಗಿ ಶ್ರೀ ಶರಣಬಸವೇಶ್ವರರ ಪುರಾಣ ಪ್ರವಚನ ನಡೆಯಲಿದೆ. ಕಲಬುರ್ಗಿ ಜಿಲ್ಲೆ ಸೂಗೂರು ಶ್ರೀ ರುದ್ರಮುನೇಶ್ವರ ಸಂಸ್ಥಾನ ಹಿರೇಮಠದ ಡಾ. ಚೆನ್ನರುದ್ರಮನಿ ಶಿವಾಚಾರ್ಯ ಸ್ವಾಮೀಜಿ ಪುರಾಣ ಪ್ರವಚನ ನೀಡಲಿದ್ದಾರೆ.

ಮಾ. 29 ರಂದು ಸಂಜೆ 6.30ಕ್ಕೆ ಕಲಘಟಗಿ ಹನ್ನೆರೆಡುಮಠದ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಪುರಾಣ ಪ್ರವಚನ ಉದ್ಘಾಟಿಸುವರು. ಹಾವೇರಿ ಜಿಲ್ಲೆ ನೆಗಳೂರು ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ, ಮುಳುಮುತ್ತಲ-ಯಾದವಾಡ ಸಿದ್ಧಾರೂಢಮಠದ ಡಾ. ಆನಂದ ಸ್ವಾಮೀಜಿ ಪಾಲ್ಗೊಳ್ಳುವರು. ಏ. 8ರಂದು ಸಂಜೆ 6.30ಕ್ಕೆ ಪುರಾಣ ಪ್ರವಚನದ ಮಂಗಲಗೊಳ್ಳಲಿದ್ದು, ವಿಜಯನಗರ ಜಿಲ್ಲೆ ಹಂಪಸಾಗರ ನವಲಿಹಿರೇಮಠದ ಶ್ರೀ ಅಭಿನವ ಶಿವಲಿಂಗ ರುದ್ರಮನಿ ಶಿವಾಚಾರ್ಯ ಸ್ವಾಮೀಜಿ, ಇನಾಮಹೊಂಗಲ ವಿರಕ್ತಮಠದ ಶ್ರೀ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಮಂಟೂರು ರಾಮಲಿಂಗೇಶ್ವರಮಠದ ಶ್ರೀ ಮಹಾಂತಲಿಂಗ ಸ್ವಾಮೀಜಿ ಪಾಲ್ಗೊಳ್ಳುವರು.

ಉದ್ಘಾಟನೆ : ಏ ಪ್ರಿಲ್ 9ರಂದು ಸಂಜೆ 6.30ಕ್ಕೆ ಪ್ರಥಮ ಜಾತ್ರಾ ಮಹೋತ್ಸವವನ್ನು ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸುವರು. ಮುರಗೋಡ ದುರುದುಂಡೇಶ್ವರಮಠದ ಶ್ರೀ ನೀಲಕಂಠ ಸ್ವಾಮೀಜಿ, ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಶ್ರೀಕುಮಾರ ವಿರೂಪಾಕ್ಷ ಸ್ವಾಮೀಜಿ, ಸವದತ್ತಿ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ನವಲಗುಂದ ಪಂಚಗ್ರಹ ಹಿರೇಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ನರಗುಂದ ಪಂಚಗೃಹ ಹಿರೇಮಠದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಳ್ಳುವರು.

ಏ. 10ರಂದು ರಂದು ಸಂಜೆ 6.30ಕ್ಕೆ ಜನಜಾಗೃತಿ ಭಾವೈಕ್ಯ ಧರ್ಮ ಸಮಾವೇಶವನ್ನು ವರೂರು ನವಗ್ರಹತೀರ್ಥ ಜೈನ್ ಮಠದ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಪಟ್ಟದಾರ್ಯ ಸ್ವಾಮೀಜಿ ಉದ್ಘಾಟಿಸಲಿದ್ದು, ತಿಪಟೂರು ತಾಲೂಕಿನ ನೊಣವಿನಕೆರೆ ಕಾಡುಸಿದ್ಧೇಶ್ವರಮಠದ ಡಾ.ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ, ದೊಡ್ಡವಾಡ ಹಿರೇಮಠದ ಜಡೇಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಮಗಳೂರು ಜಿಲ್ಲೆ ಬೇರುಗುಂಡಿ ಬ್ರಹನ್ಮಠದ ಶ್ರೀ ರೇಣುಕಮಹಾಂತ ಶಿವಾಚಾರ್ಯ ಸ್ವಾಮೀಜಿ, ಕಲಬುರ್ಗಿ ಜಿಲ್ಲೆ ಬೆಳಗುಂಪಿ ಬ್ರಹನ್ಮಠದ ಶ್ರೀ ಅಭಿನವ ಪರ್ವತೇಶ್ವರ ಶಿವಾಚಾರ್ಯ ಸ್ವಾಮೀಜಿ, ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವಿಜಯಾನಂದ ಸರಸ್ವತಿ ಹಾಗೂ ಉಪ್ಪಿನಬೆಟಿಗೇರಿಯ ಇಸ್ಲಾಂ ಧರ್ಮಗುರು ಹಜರತ್ ಆರಿಫ್​ಹುಲ್​ಹಕ್ಷಾ ಖಾದ್ರಿ್ರ ಚಿಸ್ತಿ ಭಾಗವಹಿಸುವರು.

ಏ. 11 ರಂದು ಸಂಜೆ 6.30ಕ್ಕೆ ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಸಾನಿಧ್ಯದಲ್ಲಿ ಧಮೋತ್ತೇಜಕ ಸಮಾರಂಭ ನಡೆಯಲಿದೆ. ಸುಳ್ಳ ಪಂಚಗೃಹ ಹಿರೇಮಠದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶಿರಕೋಳ ಹಿರೇಮಠದ ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಮೈಸೂರು ಅರಮನೆ ಜಪದಕಟ್ಟಿಮಠದ ಮುಮ್ಮಡಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕುಂದಗೋಳ ಪಂಚಗೃಹ ಹಿರೇಮಠದ ಶ್ರೀ ಶಿಥಿಕಂಠೇಶ್ವರ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಳ್ಳುವರು. ಮಾ. 29 ರಿಂದ ಏ. 12ರವರೆಗೆ ಪ್ರತಿನಿತ್ಯದ ಧರ್ಮ ಸಮಾರಂಭದಲ್ಲಿ ಅಮ್ಮಿನಬಾವಿಯ ಶ್ರೀ ಸಂಸ್ಥಾನ ಪಂಚಗ್ರಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಜರಿದ್ದು, ಉಪದೇಶಾಮೃತ ನೀಡುವರು.

ಗುರುರಕ್ಷೆ ಗೌರವ : ಸಮಾಜದ ವಿವಿಧ ಕ್ಷೇತ್ರಗಳ ವಿವಿಧ ಗಣ್ಯರಿಗೆ ಅಮ್ಮಿನಬಾವಿ ಸಂಸ್ಥಾನ ಪಂಚಗ್ರಹ ಹಿರೇಮಠದ ವತಿಯಿಂದ ಗುರುರಕ್ಷೆಯ ಗೌರವ ನೀಡಲಾಗುವುದು. ವೀರೇಶಕುಮಾರ ಮಳಲಿ, ಅಂದಾನಯ್ಯ ಮಠದ, ಮಡಿವಾಳಯ್ಯ ಶಹಪೂರಮಠ ಅವರ ಸಂಗೀತ ಸೇವೆಯ ಜೊತೆಗೆ ಸೃಷ್ಟಿ ಕಾಜಗಾರ ಹಾಗೂ ಹುಬ್ಬಳ್ಳಿಯ ಶ್ರೇಯಾ ಲುಕ್ ಭರತನಾಟ್ಯ ಪ್ರದರ್ಶನ ನೀಡುವರು.

ಪ್ರಥಮ ರಥೋತ್ಸವದ ಉದ್ಘಾಟನೆ : ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳ ಅಮೃತ ಹಸ್ತದಿಂದ ಏ. 12ರಂದು ಸಂಜೆ 4.30ಕ್ಕೆ ಅಮ್ಮಿನಬಾವಿಯ ಸಂಸ್ಥಾನ ಪಂಚಗೃಹ ಹಿರೇಮಠದ ಪ್ರಥಮ ರಥೋತ್ಸವದ ಉದ್ಘಾಟನೆ ನಡೆಯಲಿದ್ದು, ನಾಡಿನ ವಿವಿಧ ಭಾಗಗಳ ಮಠಾಧೀಶರು ಪಾಲ್ಗೊಳ್ಳುವರು.

Share This Article

7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಿದ್ರೆ ದೇಹ, ಮನಸ್ಸಿನ ಮೇಲೆ ಪರಿಣಾಮ!  ಸಂಶೋಧನೆಯಿಂದ ಬಹಿರಂಗ.. Sleeping  

Sleeping : ಆರೋಗ್ಯವಾಗಿರಲು ನಿದ್ರೆ ಬಹಳ ಮುಖ್ಯ. ನಿದ್ರೆಯ ಕೊರತೆಯು ದೇಹದಲ್ಲಿ ಅನೇಕ ರೋಗಗಳನ್ನು ಉಂಟುಮಾಡುತ್ತದೆ.…

Beauty Tips: ಲಿಪ್‌ಸ್ಟಿಕ್ ಹೆಚ್ಚು ಬಳಸುತ್ತೀರಾ? ಹುಷಾರಾಗಿರಿ.. ಇಲ್ಲಿದೆ ನೋಡಿ ಬೆಚ್ಚಿ ಬೀಳಿಸೋ ವರದಿ

Beauty Tips : ಹುಡುಗಿಯರು ಬಳಸುವ ಸೌಂದರ್ಯವರ್ಧಕಗಳಲ್ಲಿ ಲಿಪ್‌ಸ್ಟಿಕ್ ಕೂಡ ಒಂದು. ತುಟಿಗಳು ಸುಂದರವಾಗಿ ಮತ್ತು…

ಬಿಸಿ ಮಾಡದೆ ಹಾಲನ್ನು ಹಸಿಯಾಗಿ ಕುಡಿಯಲೇಬಾರದು! Raw Milkನಿಂದಾಗುವ ಸಮಸ್ಯೆ ಎದುರಿಸೋಕೆ ರೆಡಿಯಾಗಿ!

Raw Milk : ಗ್ರಾಮೀಣ ಪ್ರದೇಶದ ಜನರು ಹಸು ಅಥವಾ ಎಮ್ಮೆ ಹಾಲನ್ನು ಸೇವಿಸುತ್ತಾರೆ. ಆದರೆ…