More

    ಭಾರಿ ಮಳೆಗೆ ಉಕ್ಕಿ ಹರಿದ ವರದಾ ನದಿ: ನೂರಾರು ಎಕರೆ ಜಮೀನು ಜಲಾವೃತ; ಆನವಟ್ಟಿಯಲ್ಲಿ ಮನೆ, ದೇವಸ್ಥಾನಕ್ಕೆ ನೀರು

    ಸೊರಬ: ತಾಲೂಕಿನ ಜಡೆ ಹಾಗೂ ಆನವಟ್ಟಿ ಹೋಬಳಿಯಲ್ಲಿ ಬುಧವಾರ ಮತ್ತು ಗುರುವಾರ ಸಂಜೆ ಸುರಿದ ಭಾರಿ ಮಳೆಗೆ ಮನೆಗೆ ನೀರು ನುಗ್ಗಿ ನೂರಾರು ಎಕರೆ ಜಮೀನು ಜಲಾವೃತ್ತವಾಗಿದೆ.
    ಏಕಾಏಕಿ ರಾತ್ರಿ ಸುರಿದ ಮಳೆಗೆ ಜನರು ಭಯಭೀತರಾಗಿದ್ದು ಆನವಟ್ಟಿಯ ಶಾಂತಿನಗರದ ಎರಡು ಮನೆಗಳಿಗೆ, ರಾಧಾ ರುಖಮಾಯಿ ದೇವಸ್ಥಾನದ ಆವರಣಕ್ಕೆ ನೀರು ನುಗ್ಗಿತ್ತು. ಮನೆಯಲ್ಲಿನ ಸಾಮಗ್ರಿಗಳು ನೀರು ಪಾಲಾಗಿದ್ದು ಕುಟುಂಬದವರು ಆತಂಕದಿಂದ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿಯಾಗಿದ್ದರಿಂದ ಕುಟುಂಬದರವು ದಿಕ್ಕು ತೋಚದಂತಾಗಿದ್ದರು.
    ತಾಲೂಕಿನ ಜಡೆ ಹೋಬಳಿಯ ಸಬಾರ ಗ್ರಾಮದಲ್ಲಿ ವರದಾ ನದಿ ಬಾರಿ ಮಳೆಗೆ ಉಕ್ಕಿ ಹರಿದ ಪರಿಣಾಮ 200 ಎಕರೆ ಜಮೀನಿನಲ್ಲಿ ಬೆಳೆದ ಭತ್ತ, ಅಡಕೆ, ಶುಂಠಿ ಮತ್ತು ಬಾಳೆ ಬೆಳೆಗಳು ಜಲಾವೃತಗೊಂಡಿವೆ. ಸ್ಥಳಕ್ಕೆ ಕಂದಾಯ ಹಾಗೂ ಕೃಷಿ ಅಧಿಕಾರಿಗಳು ಭೇಟಿ ನೀಡಿದ್ದಲ್ಲದೆ ಶಾಸಕ ಕುಮಾರ್ ಬಂಗಾರಪ್ಪ ಶುಕ್ರವಾರ ಆನವಟ್ಟಿಯಲ್ಲಿ ನೀರು ನುಗ್ಗಿದ ಮನೆಗಳಿಗೆ ಹಾಗೂ ಜಲಾವೃತಗೊಂಡ ಜಮೀನುಗಳನ್ನು ಪರಿಶೀಲಿಸಿದರು. ನಂತರ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಬೆಳೆ ಹಾನಿಯ ವರದಿ ಪಡೆದುಕೊಂಡರು. ತಕ್ಷಣದಲ್ಲಿ ಪರಿಹಾರಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ತಹಸೀಲ್ದಾರ್ ಎಚ್.ಎಸ್.ಶೋಭಾಲಕ್ಷ್ಮೀ ಅವರಿಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts