More

    ಬುದ್ಧನ ಪಂಚಶೀಲ ತತ್ವ ಅಳವಡಿಸಿಕೊಳ್ಳಿ

    ಯಾದಗಿರಿ: ಪ್ರತಿಯೊಬ್ಬ ಮನುಷ್ಯ ಜೀವನದಲ್ಲಿ ಭಗವಾನ್ ಗೌತಮ ಬುದ್ಧ ಬೋಧಿಸಿರುವ ಪಂಚಶೀಲ ತತ್ವಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ನಿವೃತ್ತ ವೈದ್ಯಾಧಿಕಾರಿ ಡಾ.ಭಗವಂತ ಅನವಾರ ತಿಳಿಸಿದರು.

    ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಶನಿವಾರ 68ನೇ ವರ್ಷದ ಧಮ್ಮಚಕ್ರ ಪರಿವರ್ತನಾ ದಿನದ ನಿಮಿತ್ತ ಪಂಚಶೀಲ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸಮಾನತೆಯ ಸಮಾಜ ಕಟ್ಟಲು ಸಿದ್ಧಾರ್ಥ ಬಯಸಿದ್ದ. ಮೇಲು-ಕೀಳು, ಅಹಿಂಸೆ ಮಾಡಬಾರದು, ಆಸೆಯೇ ದುಃಖಕ್ಕೆ ಮೂಲ ಎಂದು ಮನುಕುಲಕ್ಕೆ ಬೋಧಿಸಿದ್ದಾನೆ. ಯುವ ಜನತೆ ಬುದ್ಧನ ಜೀವನ ಚರಿತ್ರೆ ಅಧ್ಯಯನ ಮಾಡುವಂತೆ ಸಲಹೆ ನೀಡಿದರು.

    ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೇರಕರ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ರು ತಾವು ಬೌದ್ಧ ಧ ರ್ಮ ಸ್ವೀಕಾರ ಮಾಡುವುದಕ್ಕಿಂತ 20 ರಿಂದ 25 ವರ್ಷಗಳ ಹಿಂದೆಯೇ ನಾನು ಹಿಂದೂವಾಗಿ ಹುಟ್ಟಿದ್ದೇನೆ. ಅದಕ್ಕೆ ಕಾರಣ ನಾನಲ್ಲ, ಆದರೆ ಇಲ್ಲಿರುವ ಕಿಳರಿಮೆ, ಮೂಢ ನಂಬಿಕೆಗಳು, ಕಂದಚಾರಗಳಲ್ಲಿ ಅಗತ್ಯತೆಯನ್ನು ನಾನು ಒಪ್ಪುವುದಿಲ್ಲ. ಆದ್ದರಿಂದ ನಾನು ಈ ಧರ್ಮದಲ್ಲಿ ಉಳಿಯುವುದಿಲ್ಲ ಎಂದು 1956 ಅ.14ರಂದು ನಾಗಪೂರದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದರು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts