More

    ಜನರು ದೇಶಾಭಿಮಾನ ಅಳವಡಿಸಿಕೊಳ್ಳಲಿ

    ಚಿಕ್ಕೋಡಿ: ನೇತಾಜಿ ಸುಭಾಷಚಂದ್ರ ಬೋಸ್ ಅವರಲ್ಲಿದ್ದ ದೇಶಾಭಿಮಾನ ಪ್ರತಿಯೊಬ್ಬ ಭಾರತೀಯನಲ್ಲೂ ಮೂಡಬೇಕು ಎಂದು ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ ಹೇಳಿದರು.

    ತಾಲೂಕಿನ ಅಂಕಲಿ ಕೆಎಲ್‌ಇ ಸಂಸ್ಥೆಯ ಶ್ರೀಮತಿ ಶಾರದಾ ಕೋರೆ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ನೇತಾಜಿ ಸುಭಾಷಚಂದ್ರ ಬೋಸ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಾರ್ಷಿಕ ಕ್ರೀಡೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು.

    ಕೆಎಲ್‌ಇ ಸಂಸ್ಥೆಯ ಆಜೀವ ಸದಸ್ಯ ಬಿ.ಎಸ್.ಅಂಬಿ, ಪ್ರಾಚಾರ್ಯ ಆರ್.ಸಿ.ಪಾಟೀಲ, ದೈಹಿಕ ಶಿಕ್ಷಣ ಶಿಕ್ಷಕ ಎ.ಎಸ್.ಶಿರಗಾಂವೆ, ಎಸ್.ಜೆ.ಬಾಬರ. ಎ.ಎಸ್.ಮಾನೆ, ಆರ್.ಎನ್.ರಾಯಮಾನೆ ಇತರರಿದ್ದರು. ಉಪಪ್ರಾಚಾರ್ಯ ಜೆ.ಎಸ್.ತಮಗೊಂಡ ಸ್ವಾಗತಿಸಿದರು. ಡಿ.ಎಸ್.ಬಾಕಳೆ ನಿರೂಪಿಸಿದರು. ಎಸ್.ಬಿ.ಕಾಳೆ ವಂದಿಸಿದರು.

    ಕಕಮರಿ ವರದಿ: ಗ್ರಾಮದ ಬಸವೇಶ್ವರ ವೃತ್ತದಲ್ಲಿ ಮಂಗಳವಾರ ನೇತಾಜಿ ಸುಭಾಷಚಂದ್ರ ಬೋಸ್ ಜನ್ಮದಿನ ಅದ್ದೂರಿಯಾಗಿ ಆಚರಿಸಲಾಯಿತು. ಗ್ರಾಪಂ ಸದಸ್ಯರಾದ ಈರಣ್ಣ ಬಸರಗಿ, ಸಂಗಮೇಶ ಪುಠಾಣಿ, ಲಕ್ಷ್ಮಣ ಗುರ್ಕಿ, ಬಸಪ್ಪ ದುಂಡಿ, ಶ್ರೀಶೈಲ ಜನಗೌಡ, ಶ್ರೀಕಾಂತ ಕನಮಡಿ, ಸಿದರಾಯ ಸಿಂಧೂರ, ಬಾವುರಾಯ ದಾಶ್ಯಾಳ, ಭೀಮಪ್ಪ ಬಿರಾದಾರ, ಶಿವಾನಂದ ಜನಗೌಡ, ಸತೀಶ ಬಡಿಗೇರ, ಸಹಜಾನಂದ ಬಸರಗಿ, ಸಿದ್ದು ಪುಠಾಣಿ, ಶಿವಾನಂದ ಬಸರಗಿ, ಸುನೀಲ ಪೂಜಾರಿ, ಅಶೋಕ ಹೊನಕಾಂಬಳೆ, ನಾಗೇಶ ಜಾಧವ, ರಾಜು ಪುಠಾಣಿ, ರಮೇಶ ಮೈಗೂರ, ಮಲ್ಲಿಕಾರ್ಜುನ ಗೆಜ್ಜಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts