ಗೊರೇಬಾಳ: ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಶುದ್ಧೀಕರಿಸಿದ ನೀರು ದೊರೆಯದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ.
ಗ್ರಾಮದಲ್ಲಿ ಒಂದು ಶುದ್ಧ ಕುಡಿಯುವ ನೀರಿನ ಘಟಕವಿದ್ದು, ಜನರಿಗೆ ನೀರು ಸಾಲುತ್ತಿಲ್ಲ. ಇದರಿಂದಾಗಿ ಹಂಚಿನಾಳ ಕ್ಯಾಂಪ್ ಹಾಗೂ ಗೊರೇಬಾಳ ಕ್ಯಾಂಪ್‌ಗೆ ಹೋಗಿ ಜನರು ನೀರು ತರುತ್ತಿದ್ದಾರೆ. ಗ್ರಾಮದಲ್ಲಿನ ನಳಗಳಿಗೆ ಕೆರೆಯಿಂದ ವಾರಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದ್ದು, ಜನರು ಮನೆ ಕೆಲಸಗಳಿಗೆ ಬಳಸುತ್ತಿದ್ದಾರೆ. ಗ್ರಾಪಂನಿಂದ ಹೊಸ ಬೋರ್‌ವೆಲ್ ಕೊರೆಯಿಸಿದ್ದು, ಪೈಪ್‌ಲೈನ್ ಅಳವಡಿಸಿಲ್ಲ.