More

    ಬಸ್ ನಿಲ್ದಾಣದಲ್ಲಿ ಹೆಚ್ಚಿದ ಪ್ರಯಾಣಿಕರ ಸಂಖ್ಯೆ

    ಹುಬ್ಬಳ್ಳಿ: ಕರೊನಾ ಆತಂಕದ ಮಧ್ಯೆಯೂ ನಗರದ ಹಳೇ ಬಸ್ ನಿಲ್ದಾಣದಲ್ಲಿ ಶನಿವಾರ ದಿನಕ್ಕಿಂತ ಹೆಚ್ಚಿನ ಪ್ರಯಾಣಿಕರ ದಟ್ಟಣೆ ಹಾಗೂ ಹೆಚ್ಚು ಸಾರಿಗೆ ಬಸ್​ಗಳ ಸಂಚಾರ ಕಂಡುಬಂದಿತು.

    ಗ್ರಾಮೀಣ ಭಾಗಗಳಿಗಿಂತಲೂ ಹುಬ್ಬಳ್ಳಿ-ಧಾರವಾಡ ಮಧ್ಯೆ ಹೆಚ್ಚು ಬಸ್​ಗಳು ಸಂಚರಿಸುತ್ತಿದ್ದವು. ಬಿಆರ್​ಟಿಎಸ್ ಬಸ್​ಗಳ ಸಂಚಾರವೂ ಪ್ರಾರಂಭಗೊಂಡಿದ್ದರಿಂದ ನಿಲ್ದಾಣಗಳಲ್ಲಿ ಹೆಚ್ಚು ಬಸ್​ಗಳು ನಿಂತಿದ್ದವು. ಸಾಮಾನ್ಯ ಹಾಗೂ ಬಿಆರ್​ಟಿಎಸ್ ಬಸ್​ಗಳೆರಡೂ ಸಂಚರಿಸುತ್ತಿದ್ದು, ಪ್ರಯಾಣಿಕರು ಸಾಮಾನ್ಯ ಬಸ್​ಗಳಲ್ಲಿಯೇ ಹೆಚ್ಚು ಕಂಡುಬಂದರು.

    ಹುಬ್ಬಳ್ಳಿಯಿಂದ ದೂರದ ಹಾಗೂ ಸುತ್ತಲಿನ ಗ್ರಾಮೀಣ ಭಾಗಕ್ಕೆ ತೆರಳುವ ಪ್ರಯಾಣಿಕರ ಸಂಖ್ಯೆ ಕಡಿಮೆ ಕಾಣಿಸಿತು. ಅವಳಿ ನಗರ ಹೊರತುಪಡಿಸಿ ಇತರೆಡೆ ತೆರಳುವ ಬಸ್​ಗಳ ಚಾಲಕರು ಹಾಗೂ ನಿರ್ವಾಹಕರು ಪ್ರಯಾಣಿಕರಿಗೆ ಕಾಯುತ್ತ ಕೂತಿದ್ದರು.

    ನವಲಗುಂದ, ವಿಜಯಪುರ, ಬಾಗಲಕೋಟೆ, ಕಾರವಾರ, ಕಲಘಟಗಿಯತ್ತ ತೆರಳುವ ಬಸ್​ಗಳಲ್ಲಿ ಪ್ರಯಾಣಿಕರು ದಿನಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರು.

    ದುರ್ಗದಬೈಲ್, ಎಂ.ಜಿ. ಮಾರ್ಕೆಟ್​ನಲ್ಲಿಯಂತೂ ಜನರು ಮಾಸ್ಕ್ ಅನ್ನು ಸರಿಯಾಗಿ ಧರಿಸದೆ, ಪರಸ್ಪರ ಅಂತರ ಕಾಯ್ದುಕೊಳ್ಳದೇ ವಿವಿಧ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದರು.

    ಸರ್ಕಾರಿ ಕಚೇರಿ: ಮಿನಿ ವಿಧಾನಸೌಧದಲ್ಲಿರುವ ವಿವಿಧ ಕಚೇರಿಗೆ ಬರುತ್ತಿದ್ದ ಜನ ಪರಸ್ಪರ ಅಂತರ ಮರೆತಂತೆ ವರ್ತಿಸುತ್ತಿದ್ದರು. ಉಪ ನೋಂದಣಿ ಕಚೇರಿಯಲ್ಲಿ ನೋಂದಣಿ ಕಾರ್ಯಕ್ಕೆ ಬರುವವರನ್ನು ಸರತಿಯಂತೆ ಬಿಡಲಾಗುತ್ತಿತ್ತು. ಉಳಿದವರು ಕಚೇರಿ ಹೊರಗೆ ಗುಂಪುಗುಂಪಾಗಿ ನಿಂತಿದ್ದರು. ಪಕ್ಕದ ಪೊಲೀಸ್ ಠಾಣೆಯಲ್ಲಿಯೂ ಜನರು ಗುಂಪಾಗಿ ಬರದಂತೆ ಬಾಗಿಲಿಗೆ ಅಡ್ಡಲಾಗಿ ಕುರ್ಚಿಗಳನ್ನು ಇಡಲಾಗಿತ್ತಾದರೂ, ಠಾಣೆ ಹೊರಗೆ ಜನರು ಗುಂಪಾಗಿ ನಿಂತಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts