More

    ಪ್ಲೇ ಆಫ್​ಗೇರಿದ ಆರ್​ಸಿಬಿ: ಸಿಎಸ್‌ಕೆ ಸೋಲುತ್ತಿದ್ದಂತೆ ಸ್ಟುಡಿಯೋದಲ್ಲಿ ಕಣ್ಣೀರಿಟ್ಟ ಧೋನಿ ಶಿಷ್ಯ ಅಂಬಟಿ ರಾಯುಡು!

    ಬೆಂಗಳೂರು: ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಮಹತ್ವದ ಲೀಗ್ ಹಂತದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 27 ರನ್​ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಟ್ಟಿದೆ.

    ಯಾವುದೇ ಫೈನಲ್ ಪಂದ್ಯಕ್ಕೂ ಕಡಿಮೆ ಇಲ್ಲದಂತೆ ನಡೆದ ಈ ಪಂದ್ಯದ ಫಲಿತಾಂಶದ ಬಳಿಕ ಆರ್‌ಸಿಬಿ ಅಭಿಮಾನಿಗಳ ಸಂತಸಕ್ಕೆ ಪಾರವೇ ಇರಲಿಲ್ಲ. ಇತ್ತ ಸಿಎಸ್‌ಕೆ ಸೋಲುತ್ತಿದ್ದಂತೆ ಅತ್ತ ಸ್ಟುಡಿಯೋದಲ್ಲಿ ಕುಳಿತು ಕಾಮೆಂಟ್ರಿ ಮಾಡುತ್ತಿದ್ದ ಸಿಎಸ್​ಕೆ ತಂಡದ ಮಾಜಿ ಆಟಗಾರ ಅಂಬಟಿ ರಾಯುಡು ಶಾಕ್​ಗೆ ಒಳಗಾಗಿ, ಕಣ್ಣೀರು ಹಾಕಿದ್ದಾರೆ.

    ಇದನ್ನೂ ಓದಿ: ನಮ್ಮ ಗುರಿ ದೊಡ್ಡದಿದೆ, ಗೆಲ್ಲುವ ವಿಶ್ವಾಸವಿದೆ, 3ನೇ ಅವಧಿಯ ಆಡಳಿತಕ್ಕೆ ಸಿದ್ಧವಾಗುತ್ತಿದ್ದೇವೆ: ಪ್ರಧಾನಿ ಮೋದಿ

    ಆರ್​ಸಿಬಿ ತಂಡದ ವೇಗದ ಬೌಲರ್​ ಯಶ್‌ ದಯಾಳ್‌ ಕೊನೆ ಬಾಲ್‌ ಎಸೆದಾಗ ರಾಯುಡು ತಮ್ಮ ಕೈಯನ್ನು ಬಾಯಿ ಮೇಲೆ ಇಟ್ಟುಕೊಂಡು ಮೂಕವಿಸ್ಮಿತರಾಗಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ. ಜೊತೆಗೆ ಟ್ರೋಲ್‌ ಆಗುತ್ತಿದೆ.

    ಸಿಎಸ್​ಕೆ ಮಾಜಿ ಆಟಗಾರ ಅಂಬಾಟಿ ಏನು ಹೇಳಿದ್ದರು ? ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹಾಡಿ ಹೊಗಳಿದ್ದ ಮಾಜಿ ಆಟಗಾರ ಅಂಬಾಟಿ ರಾಯುಡು, ಬಲಿಷ್ಠ ಪಡೆಯಾಗಿ ಗುರುತಿಸಿಕೊಂಡಿರುವ ಸಿಎಸ್​ಕೆ ವಿರುದ್ಧ ಲೀಗ್ ಪಂದ್ಯಗಳನ್ನಾಡುವುದು ಸಮಯ ವ್ಯರ್ಥ. ನನ್ನ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್‌ಗೆ ನೇರವಾಗಿ ಫೈನಲ್​ ಆಡಲು ಅವಕಾಶ ನೀಡಬೇಕು. ಇತರ ಫ್ರಾಂಚೈಸಿಗಳು ಲೀಗ್ ಹಂತದಲ್ಲಿ ಸ್ಪರ್ಧಿಸಿ ಫೈನಲ್​ಗೆ ಬರಲಿ. ಏಕೆಂದರೆ ಸಿಎಸ್​ಕೆ ಫೈನಲ್ ಆಡುವುದಂತು ಖಚಿತ ಎಂದು ಅಂಬಾಟಿ ರಾಯುಡು ಹೇಳಿದ್ದರು.

    ಐಪಿಎಲ್​ ಇತಿಹಾಸದಲ್ಲಿ ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಬಾರಿ ಕೂಡ ಬಲಿಷ್ಠ ಪಡೆಯಾಗಿ ಗುರುತಿಸಿಕೊಂಡಿದೆ. ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದೆ. ಹೀಗಾಗಿ ಹಾಲಿ ಚಾಂಪಿಯನ್​ ಸಿಎಸ್​ಕೆ ತಂಡ ಈ ಬಾರಿ ಕೂಡ ಪ್ಲೇಆಫ್​ ಪ್ರವೇಶಿಸುವುದನ್ನು ಎದುರು ನೋಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

    ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌: ಶಾಸಕ ಶ್ರೀನಿವಾಸ್ ವಿರುದ್ಧ ಹರಿಹಾಯ್ದ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts