More

    ಪೊನ್ನಂಪೇಟೆ-ಕಾನೂರು-ನಿಟ್ಟೂರು ಸಂಪರ್ಕ ರಸ್ತೆ ಉದ್ಘಾಟನೆ

    ಗೋಣಿಕೊಪ್ಪ: ಒಂದು ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಪೊನ್ನಂಪೇಟೆ-ಕಾನೂರು-ನಿಟ್ಟೂರು ಸಂಪರ್ಕ ರಸ್ತೆಯನ್ನು ಶಾಸಕ ಕೆ.ಜಿ. ಬೋಪಯ್ಯ ಸೋಮವಾರ ಉದ್ಘಾಟಿಸಿದರು.
    ಬಳಿಕ ಮಾತನಾಡಿದ ಅವರು, ಮಳೆಯ ಕಾರಣದಿಂದ ಸಾಕಷ್ಟು ಕಾಮಗಾರಿ ವಿಳಂಬವಾಗಿತ್ತು. ಮಾರ್ಚ್ ಅಂತ್ಯದೊಳಗೆ ಕ್ಷೇತ್ರ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾರ್ಯಗಳು ಮುಗಿಯಲಿದೆ ಎಂದು ಬೋಪಯ್ಯ ತಿಳಿಸಿದರು.

    ನಿಟ್ಟೂರು ಗ್ರಾಪಂ ಅಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ ಮಾತನಾಡಿ, ಬುಡಕಟ್ಟು ಸಮುದಾಯ ಹೆಚ್ಚು ವಾಸಿಸುವ ನಿಟ್ಟೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ.100 ಅಭಿವೃದ್ಧಿ ಕಾರ್ಯಗಳು ಶಾಸಕರ ವಿಶೇಷ ಕಾಳಜಿಯಿಂದ ನಡೆದಿವೆ ಎಂದರು.

    ಬಗರ್‌ಹುಕಂ ಸಕ್ರಮೀಕರಣ ಸಮಿತಿ ತಾಲೂಕು ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ನಿಟ್ಟೂರು ಗ್ರಾಪಂ ಸದಸ್ಯ ಚಕ್ಕೇರ ಸೂರ್ಯ ಅಯ್ಯಪ್ಪ, ಬಿಜೆಪಿ ಕೃಷಿ ಮೋರ್ಚಾ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ, ಐಟಿಡಿಪಿ ಅಧಿಕಾರಿ ನವೀನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts