ಶ್ರದ್ಧಾಭಕ್ತಿಯಿಂದ ಜರುಗಿದ ಕನ್ನಂಬಾಡಿ ಅಮ್ಮನ ವಾರ್ಷಿಕೋತ್ಸವ

1 Min Read
ಶ್ರದ್ಧಾಭಕ್ತಿಯಿಂದ ಜರುಗಿದ ಕನ್ನಂಬಾಡಿ ಅಮ್ಮನ ವಾರ್ಷಿಕೋತ್ಸವ

ಗೋಣಿಕೊಪ್ಪ:ಪೊನ್ನಂಪೇಟೆ ಸಮೀಪದ ಕೃಷ್ಣ ನಗರದಲ್ಲಿ ಶ್ರೀ ಕನ್ನಂಬಾಡಿಯಮ್ಮ ದೇವಾಲಯ ಸಮಿತಿ ವತಿಯಿಂದ ಗ್ರಾಮ ದೇವತೆ ಕನ್ನಂಬಾಡಿ ಅಮ್ಮನವರ ವಾರ್ಷಿಕೋತ್ಸವ ಮಂಗಳವಾರ ಶ್ರದ್ದಾಭಕ್ತಿಯಿಂದ ನೆರವೇರಿತು.

ಕಳಸ ಹೊತ್ತ ಮಹಿಳೆಯರು ಕೊಡಗಿನ ಸಾಂಪ್ರದಾಯಿಕ ವಾಲಗದೊಂದಿಗೆ ಗ್ರಾಮಸ್ಥರು ಹಾಗೂ ದೇವಾಲಯ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ಮೆರವಣಿಗೆ ಮೂಲಕ ಸಾಗಿ ದೇವಾಲಯ ತಲುಪಿದರು. ಕಳಸ ಹೊತ್ತು ಬರುತ್ತಿದ್ದ ಮಹಿಳೆಯರಿಗೆ ಆರತಿ ಬೆಳಗಿಸಿ, ಈಡುಗಾಯಿ ಒಡೆದು ಗ್ರಾಮಸ್ಥರು ಪೂಜೆ ಸಲ್ಲಿಸಿದರು.

ಮಹಾಪೂಜೆ ಹಾಗೂ ಮಹಾಮಂಗಳಾರತಿ ನಡೆದ ನಂತರ ಭಕ್ತರು ದೇವಿಗೆ ಹರಕೆ ಒಪ್ಪಿಸಿದರು. ಗ್ರಾಮದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಅರ್ಚಕ ಉಮೇಶ್ ಉತ್ತಯ್ಯ, ವೆಂಕಟೇಶ್ ಸಿಲನ್ ಪೂಜಾ ಕೈಂಕರ್ಯ ನೆರವೇರಿಸಿದರು. ದೇವಾಲಯ ಸಮಿತಿ ಅಧ್ಯಕ್ಷ ಎಚ್.ಕೆ.ಇಂದ್ರ, ಉಪಾಧ್ಯಕ್ಷ ರವಿದಾಸ್, ಕಾರ್ಯದರ್ಶಿ ಎಚ್.ಆರ್.ವೆಂಕಟೇಶ್, ಖಜಾಂಚಿ ಎಚ್.ಆರ್. ಅಣ್ಣಪ್ಪ ಇತರರು ಇದ್ದರು.

See also  ಹಳಿ ಮೇಲೆ ಬಿದ್ದ ಬಂಡೆ; ಬೀದರ್​-ಕಲಬುರ್ಗಿ ನಡುವೆ 2 ಘಂಟೆ ರೈಲು ಸಂಚಾರ ಸ್ಥಗಿತ
Share This Article