More

    ಪತ್ರಕರ್ತರು ಸದಾ ಕ್ರಿಯಾಶೀಲರಾಗಿರಬೇಕು

    ಯಡ್ರಾಮಿ: ಜಗತ್ತಿನ ವಿದ್ಯಮಾನಗಳನ್ನು ಜನರಿಗೆ ತಲುಪಿಸುವ ಹಾಗೂ ಸಮಾಜವನ್ನು ತಿದ್ದುವ ಕಾರ್ಯ ಮಾಡುವ ಪತ್ರಕರ್ತರು ಸದಾ ಕ್ರೀಯಾಶೀಲರಾಗಿರಬೇಕು ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ಪತ್ರಿಕೋದ್ಯಮ ಹಾಗೂ ಸಮೂಹ ಸಂಪನ್ಮೂಲ ವಿಭಾಗದ ಉಪನ್ಯಾಸಕ ಡಾ.ಅಶೋಕ ದೊಡ್ಡಮನಿ ಅಭಿಪ್ರಾಯಪಟ್ಟರು.

    ಕದಂಬ ಪದವಿಪೂರ್ವ ಕಾಲೇಜಿನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಉಪನ್ಯಾಸ ನೀಡಿ, ಸಮಾಜ ಮತ್ತು ಸರ್ಕಾರದ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತಿರುವ ಪತ್ರಕರ್ತರು ಸಾಕಷ್ಟು ಸಮಸ್ಯೆ ಹಾಗೂ ಸವಾಲು ಎದುರಿಸುತ್ತಿದ್ದಾರೆ. ಇಂದು ಎಲ್ಲರಿಗೂ ಹೋಗಳುವವರೇ ಬೇಕು, ನೈಜ ಪತ್ರಕರ್ತರ ಕಾರ್ಯವನ್ನು ಗುರುತಿಸುವವರೇ ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಆಲೂರಿನ ಶ್ರೀ ಕೆಂಚವೃಷಭೇಂದ್ರ ಶಿವಾಚಾರ್ಯರು ಸಾನ್ನಿಧ್ಯ, ಸಂಘದ ತಾಲೂಕು ಅಧ್ಯಕ್ಷ ಸಂತೋಷ ನವಲಗುಂದ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಶಶಿಕಲಾ ಪಾದಗಟ್ಟಿ ಉದ್ಘಾಟಿಸಿದರು.

    ತಾಲೂಕು ಪಂಚಾಯಿತಿ ಇಒ ಮಹಾಂತೇಶ ಪುರಾಣಿಕ, ಜೆಸ್ಕಾಂ ಎಇಇ ದೇವಿಂದ್ರ ಶಖಾಪುರ, ಪಶು ವೈದ್ಯಾಧಿಕಾರಿ ಡಾ.ಪ್ರಭು ಕಲ್ಲೂರ, ಕದಂಬ ಪಿಯು ಕಾಲೇಜು ಸಂಸ್ಥಾಪಕ ಶ್ರೀಶೈಲ ಖಣದಾಳ, ಪ್ರಮುಖರಾದ ಮಲ್ಲನಗೌಡ ಸಾಲಿ, ವೀರಭದ್ರ ಪತ್ತಾರ, ದೇವು ಮಡಿವಾಳ, ಸಿದ್ದು ನೀರಲಕೋಡ, ದೇವು ಪೂಜಾರಿ, ಪತ್ರಕರ್ತರಾದ ಆನಂದ ಕುಸ್ತಿ, ಭೀಮರಾಯ ಇಸ್ಲಾಂಪುರ, ಮಡಿವಾಳಪ್ಪ ಯತ್ನಾಳ, ತಾಯಪ್ಪ ನಾಯಕ, ರಾಹುಲ್ ಮದರಿ, ಪ್ರಶಾಂತ ಚವ್ಹಾಣ್, ರೇವಣಸಿದ್ದ ಇತರರಿದ್ದರು. ಮಲ್ಲಿಕಾರ್ಜುನ ಯಾದಗಿರ ನಿರೂಪಣೆ ಮಾಡಿದರು. ಸಾಹೇಬಗೌಡ ದೇಸಾಯಿ ಸ್ವಾಗತಿಸಿದರು. ಶರಣು ಬಿಲ್ಲಾರ್ ವಂದಿಸಿದರು.


    ಯಡ್ರಾಮಿ ತಾಲೂಕು ಕೇಂದ್ರವಾಗಿದ್ದು, ಮೂಲ ಸೌಕರ್ಯ ಮರೀಚಿಕೆಯಾಗಿದೆ. ಇಲ್ಲಿವರೆಗೂ ಪ್ರಮುಖ ಇಲಾಖೆ ಕಚೇರಿಗಳು ಪ್ರಾರಂಭವಾಗಿಲ್ಲ. ಸಾರ್ವಜನಿಕರ ಪರದಾಟ ತಪ್ಪಿಲ್ಲ. ಇಂತಹ ಸಮಸ್ಯೆಗಳ ಬಗ್ಗೆ ಪತ್ರಕರ್ತರು ಬೆಳಕು ಚೆಲ್ಲಬೇಕು.
    | ಡಾ.ಅಶೋಕ ದೊಡ್ಡಮನಿ,
    ಉಪನ್ಯಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts