More

    ಧರ್ಮನಿಂದಕನ ವಿರುದ್ಧ ಕ್ರಮಕ್ಕೆ ಒತ್ತಾಯ

    ಸಿದ್ದಾಪುರ: ಸಾಮಾಜಿಕ ಜಾಲತಾಣ ಫೇಸ್​ಬುಕ್​ನಲ್ಲಿ ಬಸವ ಪ್ರಿಯಾ ಉಮೇಶ ಕುಮಾರ ಎಂಬಾತ ಹಲವು ದಿನಗಳಿಂದ ಜಾತಿ ನಿಂದನೆ, ಧರ್ಮ ನಿಂದನೆ ಮಾಡಿ ಅವಹೇಳನಕಾರಿ ಪೋಸ್ಟ್ ಮಾಡಿರುವುದನ್ನು ಉತ್ತರ ಕನ್ನಡ ಜಿಲ್ಲಾ ವೀರಶೈವ, ಜಂಗಮ, ಅರ್ಚಕರು ಮತ್ತು ಪುರೋಹಿತ ಸಂಘದ ಸದಸ್ಯರು ಖಂಡಿಸಿ ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಮಂಜುಳಾ ಎಸ್. ಭಜಂತ್ರಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

    ಇಂತಹ ಕೃತ್ಯ ಶ್ರದ್ಧಾ ಭಕ್ತಿಯಿಂದ ಆರಾಧಿಸುವ ಹಾಗೂ ಪಾಲಿಸುವ ವೈದಿಕ ಪರಂಪರೆಗೆ ಅಪಮಾನ ಮಾಡಿದಂತೆ. ಈ ರೀತಿಯ ಬರಹ ಸಮಾಜದಲ್ಲಿ ಶಾಂತಿ ಕದಡಿ ಗಲಭೆಗೆ ಪ್ರಚೋದಿಸಿದಂತಾಗುತ್ತದೆ. ಆದ್ದರಿಂದ ತಪ್ಪಿತಸ್ಥನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ನಮ್ಮ ಜಾತಿ, ಧರ್ಮ, ವೃತ್ತಿ , ಸಂಸ್ಕೃತಿ ಕಾಪಾಡಿಕೊಳ್ಳಲು ರಕ್ಷಣೆ ನೀಡಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲಾ ವೀರಶೈವ, ಜಂಗಮ, ಅರ್ಚಕರು ಮತ್ತು ಪುರೋಹಿತ ಸಂಘದ ಅಧ್ಯಕ್ಷ ಪರಮೇಶ್ವರಯ್ಯ ಕಾನಳ್ಳಿಮಠ, ಪ್ರಧಾನ ಕಾರ್ಯದರ್ಶಿ ಪುಟ್ಟಯ್ಯ ಶಾಸ್ತ್ರಿ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts