ಅಂದು ನಾನು ಉಚ್ಚಾಟಿತ, ಇಂದು ನೀವು ಉಚ್ಚಾಟಿತ

AliyaAsadi1

ಮಾಜಿ ಶಾಸಕ ರುಪತಿ ಭಟ್​ಗೆ ವ್ಯಂಗ್ಯವಾಡಿದ ಆಲಿಯಾ ಅಸಾದಿ

ವರ್ಷದ ಹಿಂದೆ ನಡೆದಿದ್ದ ಹಿಜಾಬ್​ ಪ್ರಕರಣ ‘ಎಕ್ಸ್​’ ಖಾತೆಯಲಿ ಉಲ್ಲೇಖ

ವಿಜಯವಾಣಿ ಸುದ್ದಿಜಾಲ ಉಡುಪಿ
ಕಳೆದ ವರ್ಷ ಹಿಜಾಬ್​ ಧರಿಸಿ ಪಾಠ ಕೇಳಲು ಅನುಮತಿ ನೀಡಲೇಬೇಕು ಎಂದು ಆಗ್ರಹಿಸಿ ಉಡುಪಿಯಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿ ಆಲಿಯಾ ಅಸಾದಿ ಮತ್ತೊಮ್ಮೆ ಸದ್ದು ಮಾಡಿದ್ದಾಳೆ.

ಬಿಜೆಪಿಯಿಂದ ಉಚ್ಛಾಟಿತ ಮಾಜಿ ಶಾಸಕ ಕೆ.ರಘುಪತಿ ಭಟ್​ ಅವರ ಇಂದಿನ ರಾಜಕೀಯ ಪರಿಸ್ಥಿತಿಯ ಕುರಿತು ತನ್ನ ಎಕ್ಸ್​ ಖಾತೆಯಲ್ಲಿ ವ್ಯಂಗ್ಯ ಮಾಡಿದ್ದಾಳೆ.

ಸಾಧನೆ ತೋರಿಸಿದ್ದರಲ್ಲವೇ?

‘ದೇವನು ತಾನಿಚ್ಛಿಸಿದ್ದನ್ನು ಮಾಡಿಯೇ ತೀರುವನು. ನನ್ನ ವಾರ್ಷಿಕ ಪರೀಕ್ಷೆಗೆ 60 ದಿನ ಬಾಕಿ ಇರುವಾಗ ಹಿಜಾಬ್​ ಧರಿಸಿದ ಏಕಮಾತ್ರ ಕಾರಣಕ್ಕೆ ನನ್ನನ್ನು ಕಾಲೇಜಿನಿಂದ ಹೊರದಬ್ಬಿಸಿದಿರಿ. ನಿಮ್ಮ ಪಕ್ಷಕ್ಕೆ ದೊಡ್ಡ ಸಾಧನೆ ಮಾಡಿದ್ದೇನೆ ಎಂದು ತೋರಿಸಿದ್ದರಲ್ಲವೇ? ಆದರೆ, ಇಂದು ಅದೇ ಪಕ್ಷ ನಿಮ್ಮನ್ನು ಹೊರದಬ್ಬುವ ಆ ಕ್ಷಣವನ್ನು ನಾನು ನನ್ನ ಉಡುಪಿಯಲ್ಲೇ ನೋಡುವಂತಾಯಿತು’ ಎಂದು ಟೀಕಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾಳೆ.

AliyaAsadi2
ಕೆ.ರಘುಪತಿ ಭಟ್ ಉಚ್ಚಾಟನೆ ಕುರಿತು ‘ಎಕ್ಸ್​’ ಖಾತೆಯಲ್ಲಿ ಆಲಿಯಾ ಅಸಾದಿ ಬರವಣಿಗೆ.

ನಾನೀಗ ವಕೀಲೆ, ಪದವಿ ವಿದ್ಯಾರ್ಥಿನಿ

‘ಅಂದು ನಾನು ಉಚ್ಚಾಟಿತ ವಿದ್ಯಾರ್ಥಿ, ನಿಮಗೆ ಪಕ್ಷದಲ್ಲಿ ಪದವಿ ಇತ್ತು. ಇಂದು ನಾನು ವಕೀಲೆಯಾಗಿದ್ದು, ಪದವಿ ವಿದ್ಯಾರ್ಥಿನಿಯಾಗಿದ್ದೇನೆ. ನೀವು ಈಗ ಪಕ್ಕಷದಿಂದಲೇ ಉಚ್ಚಾಟಿತ ವ್ಯಕ್ತಿ’ ಎಂದು ಆಲಿಯಾ ವ್ಯಂಗ್ಯವಾಡಿದ್ದಾಳೆ. ವಿದ್ಯಾರ್ಥಿನಿಯ ಈ ಟ್ವೀಟ್​ಗೆ ನೂರಾರು ಮಂದಿ ಪ್ರತಿಕ್ರಿಯಿಸಿದ್ದಾರೆ.

Share This Article

ನಡೆಯುವಾಗ ನಿಮಗೆ ಈ ಸಮಸ್ಯೆಗಳು ಕಾಡುತ್ತಿವೆಯೇ? ಸಕ್ಕರೆ ಕಾಯಿಲೆಯ ಲಕ್ಷಣ ಇರಬಹುದು ಎಚ್ಚರ! Walking

Walking : ಇತ್ತೀಚಿನ ದಿನಗಳಲ್ಲಿ ಮಧುಮೇಹ ಕಾಯಿಲೆ ಹೆಚ್ಚಾಗಿ ಕಂಡುಬರುತ್ತಿದೆ. ವಯಸ್ಸಿನ ಹೊರತಾಗಿಯೂ, ಚಿಕ್ಕವರಿಂದ ಹಿಡಿದು…

ಚಾಣಕ್ಯನ ಪ್ರಕಾರ ನಿಮಗೆ ಈ 4 ಸಂಗತಿ ಗೊತ್ತಿದ್ದರೆ ಯಾರಿಂದಲೂ ನಿಮ್ಮನ್ನು ಸೋಲಿಸಲು ಸಾಧ್ಯವಿಲ್ಲ! Chanakya Niti

Chanakya Niti : ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ…

ಪ್ರತಿದಿನ ಬೆಳಿಗ್ಗೆ ಪಪ್ಪಾಯಿ ತಿಂದರೆ ಏನಾಗುತ್ತದೆ ಗೊತ್ತಾ? ನೀವು ಇದನ್ನು ತಿಳಿದುಕೊಳ್ಳಲೇಬೇಕು..Papaya

Papaya: ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯಕ್ಕೂ ಪ್ರಯೋಜನಕಾರಿ ಎನ್ನುವುದು ನಮಗೆ ಗೊತ್ತಿರುವ ವಿಚಾರವಾಗಿದೆ. ಪಪ್ಪಾಯಿ…