More

    ದಿಗ್ಗೇನಹಳ್ಳಿಯಲ್ಲಿ ಚಿರತೆ ಸೆರೆಗೆ ಬೋನು

    ಹೊಳೆಹೊನ್ನೂರು: ಭದ್ರಾವತಿ ತಾಲೂಕಿನ ದಿಗ್ಗೇನಹಳ್ಳಿ ಸುತ್ತಮುತ್ತ ಕಾಣಿಸಿಕೊಂಡ ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನು ಇರಿಸಿದೆ.

    ಆನವೇರಿ ಸಮೀಪದ ಆದ್ರಿಹಳ್ಳಿ, ಸೈದರಕಲ್ಲಹಳ್ಳಿಯ ಕಾಡಂಚಿನ ಜಮೀನುಗಳಲ್ಲಿ ಎರಡು ಚಿರತೆ ಕಾಣಿಸಿಕೊಂಡಿವೆ. ರಾತ್ರಿ ವೇಳೆ ಗ್ರಾಮದೊಳಗೆ ಬಂದು ಬೀದಿನಾಯಿ ಹಿಡಿದುಕೊಂಡು ಹೋಗುತ್ತಿವೆ. ಇಟ್ಟಿಗೆಹಳ್ಳಿ ಜಮೀನು ಗಡಿಯಿಂದ ಶಾಂತಿಸಾಗರ ಅರಣ್ಯ ಆರಂಭವಾಗುತ್ತದೆ. ಶಾಂತಿಸಾಗರ ವ್ಯಾಪ್ತಿಯಲ್ಲಿ ಚಿರತೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಕಾಡಿನಿಂದ ತಪ್ಪಿಸಿಕೊಂಡ ಕೆಲ ಪ್ರಾಣಿಗಳು ಸಣ್ಣ ಪುಟ್ಟ ಗುಡ್ಡಗಳಲ್ಲಿ ಇದ್ದುಕೊಂಡು ಗ್ರಾಮಗಳಿಗೆ ಲಗ್ಗೆಯಿಡುತ್ತಿವೆ ಎನ್ನುತ್ತಾರೆ ಅರಣ್ಯ ಇಲಾಖೆ ಸಿಬ್ಬಂದಿ.

    ಎಸ್.ಕೆ ಹಳ್ಳಿ, ದಿಗ್ಗೇನಹಳ್ಳಿ, ಸೈದರಕಲ್ಲಹಳ್ಳಿ, ಆದ್ರಿಹಳ್ಳಿಗಳಲ್ಲಿ ಗ್ರಾಮಸ್ಥರು ಸಾಕುಪ್ರಾಣಿಗಳನ್ನು ಮನೆಯೊಳಗೆ ಕಟ್ಟಿಹಾಕಿಕೊಳ್ಳುವ ಪರಿಸ್ಥಿತಿ ನಿರ್ವಣವಾಗಿದೆ. ಆಗೊಮ್ಮೆ ಈಗೊಮ್ಮೆ ದಿಗ್ಗೆನಹಳ್ಳಿಯ ದೇವಸ್ಥಾನದ ಬಳಿ ಬಂದು ಹೋಗುತ್ತಿದ ಕರಡಿಗಳು ಕೆಲ ದಿನಗಳಿಂದ 4-5 ಮರಿಗಳೊಂದಿಗೆ ಗ್ರಾಮದ ಬೀದಿಗೆ ಬರುತ್ತಿವೆ. ಇಟ್ಟಿಗೆಹಳ್ಳಿ, ಎಸ್.ಕೆ.ಹಳ್ಳಿಯ ಕಾಡುದಾರಿಯಲ್ಲಿ ಚಿರತೆಗಳು ಸಂಚಾರ ಮಾಮೂಲಿಯಾಗಿದೆ. ಆದರಿಂದ ಕಳೆದ ಬಾರಿ ಚಿರತೆ ಸೆರೆಯಾಗಿದ ಜಾಗದಲ್ಲಿ ಅರಣ್ಯ ಇಲಾಖೆ ಬೋನು ಇಟ್ಟಿದೆ.

    ಚಿರತೆ ಭಯದಿಂದ 4-5 ಗ್ರಾಮಗಳಲ್ಲಿ ಜನ ಸಂಜೆಯಾಗುತ್ತಿದಂತೆ ಮನೆ ಸೇರುತ್ತಿದ್ದಾರೆ. ಮೆಕ್ಕೆಜೋಳಕ್ಕೆ ಲಗ್ಗೆ ಹಿಡುವ ಕಾಡುಹಂದಿಗಳ ಬೇಟೆ ಹೆಸರಿನಲ್ಲಿ ಮೊಲ, ಕಾಡುಕುರಿ, ಸಾರಗಗಳ ಬೇಟೆಯೂ ಹೆಚ್ಚಾಗಿದೆ. ಕಾಡಿನಲ್ಲಿ ಆಹಾರ ಸಿಗದೆ ಕಾಡುಪ್ರಾಣಿಗಳು ರಾತ್ರಿ ವೇಳೆ ಗ್ರಾಮಗಳಿಗೆ ನುಗ್ಗಿ ಸಾಕು ಪ್ರಾಣಿಗಳನ್ನು ಬಲಿಪಡೆಯುತ್ತಿವೆ. ಕಳೆದೆರಡು ತಿಂಗಳ ಹಿಂದೆ ಭಗವತಿಕೆರೆ, ಗುಡ್ಡದ ಮಲ್ಲಾಪುರ ಭಾಗದಲ್ಲಿ ಕಾಣಿಸಿಕೊಂಡಿದ ಚಿರತೆ ಮರಿ ಸೆರೆಗೆ ಬೋನು ಇಟ್ಟರೂ ಯಾವುದೇ ಪ್ರಯೋಜನವಾಗಿರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts