More

    ವನ್ಯಜೀವಿಗಳ ಮರಿಗಳಿಂದ ಪಿಲಿಕುಳಕ್ಕೆ ಮೆರಗು: 15ಕ್ಕೂ ಹೆಚ್ಚು ಪ್ರಾಣಿ-ಪಕ್ಷಿಗಳಿಂದ ಸಂತಾನಾಭಿವೃದ್ಧಿ

    ವಿಜಯವಾಣಿ ಸುದ್ದಿಜಾಲ ಗುರುಪುರ

    ದೇಶದ ಪ್ರಮುಖ ಮೃಗಾಲಯಗಳಲ್ಲಿ ಒಂದಾದ ಪಿಲಿಕುಳ ಜೈವಿಕ ಉದ್ಯಾನದಲ್ಲಿ 15ಕ್ಕೂ ಹೆಚ್ಚು ಪ್ರಾಣಿ-ಪಕ್ಷಿ ಹಾಗೂ ಉರಗಗಳ ಸಂತಾನಾಭಿವೃದ್ಧಿಗೊಂಡಿದ್ದು, ಕೆಲವೇ ದಿನಗಳಲ್ಲಿ ಪಿಲಿಕುಳ ಮೃಗಾಲಯ ಇನ್ನಷ್ಟು ಪ್ರವಾಸಿಗರನ್ನು ಸೆಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

    ಮೃಗಾಲಯದಲ್ಲಿರುವ ಬ್ರೆಜಿಲ್‌ನ ಮೊರಮೊಸೆಟ್ ಕಪಿ, ದಕ್ಷಿಣ ಆಫ್ರಿಕಾದ ಅಳಿಲು, ಮಂಗಗಳು ಮರಿ ಹಾಕಲಿವೆ. ಎರಡು ಕಾಳಿಂಗ ಸರ್ಪಗಳು ಮೊಟ್ಟೆ ಇಡಲು ಸಿದ್ಧವಾಗಿವೆ. ರಾಕ್ ಹೆಬ್ಬಾವು, ರೇಟಿಕುಲಟೆ ಹೆಬ್ಬಾವು ಕೂಡ ಮೊಟ್ಟೆ ಇಡುತ್ತಿವೆ.

    ಮೃಗಾಲಯದಲ್ಲಿ ವನ್ಯಜೀವಿಗಳ ಸಂತಾನ ಅಭಿವೃದ್ಧಿ ಮಾಡಬೇಕಿದ್ದರೆ ಅವುಗಳಿಗೆ ಮೃಗಾಲಯದ ಆವರಣದಲ್ಲಿ ಪೂರಕ ನೈಸರ್ಗಿಕ ವಾತಾವರಣ ಇರಬೇಕು. ಸೂಕ್ತ ಪೌಷ್ಟಿಕ ಆಹಾರ ಒದಗಿಸಿದರೆ ಮಾತ್ರ ವನ್ಯಜೀವಿಗಳ ಆರೋಗ್ಯ ಉತ್ತಮವಾಗಿರುತ್ತವೆ. ಇಲ್ಲಿ ವನ್ಯಜೀವಿಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಪಿಲಿಕುಳ ಜೈವಿಕ ಉದ್ಯಾನ ನಿರ್ದೇಶಕ ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.

    ಪಿಲಿಕುಳದಲ್ಲಿ 1,200ರಷ್ಟು ಪ್ರಾಣಿ, ಪಕ್ಷಿ ಹಾಗೂ ಉರಗಗಳಿವೆ. ಅತಿ ವಿಷಕಾರಿ ಕಾಳಿಂಗ ಸರ್ಪಗಳ ಜತೆಗೆ ಇತರ ವಿಷಪೂರಿತ ಹಾಗೂ ವಿಷರಹಿತ ಸರ್ಪಗಳೂ ಇವೆ. 10 ಮರಿಗಳ ಸಹಿತ 19 ಮಸ್ಕೋವಿ ಬಾತುಕೋಳಿಗಳಿವೆ. 2 ಮರಿಗಳ ಸಹಿತ 4 ರೆಡ್ ಹ್ಯಾಂಡೆಡ್ ಕಪಿಗಳಿವೆ. ಮೃಗಾಲಯಕ್ಕೆ ಬೇರೆಬೇರೆ ಸಂದರ್ಭಗಳಲ್ಲಿ ದೇಶ-ವಿದೇಶಗಳ ಮೃಗಾಲಯಗಳಿಂದ ಅಪೂರ್ವ ಪ್ರಾಣಿ-ಪಕ್ಷಿಗಳ ಆಮದು ಹಾಗೂ ವಿಶೇಷ ಒಪ್ಪಂದದ ಮೇರೆಗೆ ಇಲ್ಲಿನ ಕೆಲವು ಪ್ರಾಣಿ-ಪಕ್ಷಿಗಳನ್ನು ಅನ್ಯ ಮೃಗಾಲಯಗಳಿಗೆ ರವಾನಿಸಲಾಗುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts