More

    ಜೆಡಿಎಸ್-ಬಿಜೆಪಿ ಮೈತ್ರಿ ಎಂಪಿ ಚುನಾವಣೆಗೆ ಸೀಮಿತ

    ಚಿತ್ರದುರ್ಗ: ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ, ಕಾಂಗ್ರೆಸ್‌ವಿರುದ್ಧ ಹೋರಾಡಿದ್ದ ನಾವು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದು ಎಂಎಲ್‌ಸಿ ಕೆ.ಎ.ತಿಪ್ಪೇಸ್ವಾಮಿ ಹೇಳಿದರು.
    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿರುವ ಜೆಡಿಎಸ್ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿ ಪಕ್ಷದ ಮುಖಂಡರು, ಕಾರ‌್ಯಕರ್ತರ ಸಭೆಯಲ್ಲಿ ಮಾತನಾಡಿ, ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಹಿರಿಯ ಗಮನಕ್ಕೆ ತರಬೇಕು ಎಂದರು.
    ಚಿತ್ರದುರ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಮತಗಳಿಕೆ ಪ್ರಮಾಣ ಉತ್ತವಾಗಿದ್ದು, ಚಿತ್ರದುರ್ಗವನ್ನು ಜೆಡಿಎಸ್‌ಗೆ ಬಯಸಿರುವುದು ಸಹಜ. ಲೋಕಸಭಾ ಚುನಾವಣೆಗೆ ಸೀಮಿತವಾಗಿ ಮಾತ್ರ ಬಿಜೆಪಿ-ಜೆಡಿಎಸ್ ಮೈತ್ರಿ ಇರಲಿದೆ. ಆದ್ದರಿಂದ ಯಾವುದೇ ವಿವಾದಾತ್ಮಕ, ಭಾವನಾತ್ಮಕ ಹೇಳಿಕೆಗಳನ್ನು ನೀಡದೆ, ಪಕ್ಷದ ಸಿದ್ಧಾಂತಕ್ಕೆ ಬದ್ಧವಾಗಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.
    ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಅನುದಾನದವಿಲ್ಲದಂತಾಗಿದೆ. ಕಾಂಗ್ರೆಸ್ಸಿನ ಆಡಳಿತ ವೈಫಲ್ಯದ ವಿರುದ್ಧ ಬಿಜೆಪಿ-ಜೆಡಿಎಸ್ ಒಂದಾಗಿ ಹೋರಾಟ ನಡೆಸುವುದು ಅನಿವಾರ‌್ಯವಾಗಿದೆ. ಇದರಿಂದಾಗಿ 8-10 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಪೂರಕವಾಗಿದೆ ಎಂದರು.
    ರಾಜ್ಯದಲ್ಲೇ ಪ್ರಥಮ ಬಾರಿಗೆ ಪೂರ್ವಭಾವಿ ಚಿತ್ರದುರ್ಗದಲ್ಲಿ ನಡೆಯುತ್ತಿದೆ, ಇದೇ ರೀತಿ ಕ್ಷೇತ್ರ ವ್ಯಾಪ್ತಿಯ ಎಲ್ಲ 8 ತಾಲೂಕುಗಳಲ್ಲೂ ಸಭೆ ನಡೆಸಿ ಕಾರ‌್ಯಕರ್ತರನ್ನು ಸಜ್ಜುಗೊಳಿಸಬೇಕು. ನಂತರ ಬಿಜೆಪಿ-ಜೆಡಿಎಸ್ ಕಾರ‌್ಯಕರ್ತರ ಜಂಟಿ ಸಭೆಗಳಾಗಬೇಕಿದೆ. ಮಾರ್ಚ್ 15ರ ವೇಳೆಗೆ ಅಧಿಸೂಚನೆ ಸಾಧ್ಯತೆ ಇದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮೊದಲಾದ ಪಕ್ಷದ ಪ್ರಮುಖರು ರಾಜ್ಯ ಪ್ರವಾಸ ನಡೆಸಲಿದ್ದಾರೆ ಎಂದು ಹೇಳಿದರು.
    ಪಕ್ಷದ ತುಮಕೂರು ಜಿಲ್ಲಾಧ್ಯಕ್ಷ ಆರ್.ಸಿ.ಅಂಜನಪ್ಪ ಮಾತನಾಡಿ, ದೇಶದ ಹಿತಕ್ಕಾಗಿ ಹೊಂದಾಣಿಕೆ ಆಗಿದೆ. ಪಕ್ಷದ ಅಣತಿಯಂತೆ ಮೈತ್ರಿ ಅಭ್ಯರ್ಥಿ ಗೆಲ್ಲಿಸೋಣ. ಕಾಂಗ್ರೆಸ್ ಆಡಳಿತ ವೈಫಲ್ಯ ಮುಂದಿಟ್ಟುಕೊಂಡು ಚುನಾವಣೆ ಎದುರಿಸೋಣ ಎಂದರು.
    ಸಹ ಉಸ್ತುವಾರಿ ರವೀಂದ್ರಪ್ಪ ಮಾತನಾಡಿ, ಬೂತ್‌ಮಟ್ಟದಲ್ಲಿ ಪಕ್ಷ ಸಂಘಟಿಸಬೇಕಿದೆ, ಪಕ್ಷದ ಘನತೆ ಉಳಿಸಿಕೊಂಡು ಗೆಲುವಿನ ತಂತ್ರಗಾರಿಕೆ ರೂಪಿಸಬೇಕಿದೆ. ಪಕ್ಷ ಬಿಟ್ಟವರನ್ನು ಮರಳಿ ಪಕ್ಷಕ್ಕೆ ಕರೆ ತರಬೇಕಿದೆ ಎಂದು ಹೇಳಿದರು.
    ಪಕ್ಷದ ಜಿಲ್ಲಾಧ್ಯಕ್ಷ ಎಂ.ಜಯಣ್ಣ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಡಿ.ಯಶೋಧರ, ಕಾರ್ಯಾಧ್ಯಕ್ಷ ಜಿ.ಬಿ.ಶೇಖರ್, ಮುಖಂಡರಾದ ಮಠದಹಟ್ಟಿ ಈರಣ್ಣ, ಎಂ.ಎಸ್.ಮಂಜುನಾಥ್, ಗೋಪಾಲಸ್ವಾಮಿನಾಯಕ್, ಪ್ರತಾಪ್ ಜೋಗಿ, ಪರಮೇಶ್ವರಪ್ಪ, ತಿಮ್ಮಣ್ಣ, ಗೀತಮ್ಮ, ದೀಪು, ಪಿ.ಟಿ.ತಿಪ್ಪೇಸ್ವಾಮಿ, ಎನ್.ಚಂದ್ರಶೇಖರ್,ವೀರಭದ್ರಪ್ಪ, ಗಣೇಶ್, ನಾಗರಾಜು, ಸೂರ್ಯಪ್ರಕಾಶ್, ತಿಮ್ಮಾರೆಡ್ಡಿ, ಹನುಮಂತರಾಯಪ್ಪ, ರುದ್ರೇಶ್ ಮತ್ತಿತರರು ಇದ್ದರು.

    *ಕೋಟ್
    ಮಧ್ಯ ಕರ್ನಾಟಕದ ಪ್ರಮುಖ ಕ್ಷೇತ್ರ ಚಿತ್ರದುರ್ಗದಲ್ಲಿ ಜೆಡಿ ಎಸ್‌ಪ್ರಾಬಲ್ಯವಿತ್ತು. ಅಭ್ಯರ್ಥಿ ಯಾರೆಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ. ವರಿಷ್ಠರ ತೀರ್ಮಾನದಂತೆ ಹೊಂದಾಣಿಕೆಯಾಗಿದೆ. ಪಕ್ಷದ ಭವಿಷ್ಯಕ್ಕಾಗಿ ಯಾವುದೇ ಗೊಂದಲಗಳಿಗೆ ಅವಕಾಶ ಇಲ್ಲದೇ ಯಾರೇ ಅಭ್ಯರ್ಥಿಯಾದರೂ ಅವರ ಗೆಲುವಿಗೆ ಶ್ರಮಿಸೋಣ ವೆಂದರು.
    ಕೆ.ಎಂ.ತಿಮ್ಮರಾಯಪ್ಪ
    ಕ್ಷೇತ್ರ ಉಸ್ತುವಾರಿ, ಮಾಜಿ ಶಾಸಕ

    *ಕೋಟ್
    ಅಭ್ಯರ್ಥಿ ಯಾರೆಂದು ನೋಡದೆ ಪಕ್ಷದ ಆದೇಶದಂತೆ ಗೆಲುವಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಲಿದ್ದೇವೆ. ಈ ಹಿಂದೆ ಹಲವು ವರ್ಷಗಳಿಂದ ಬಿಜೆಪಿ ವಿರುದ್ಧ ಹೋರಾಡಿದ್ದೇವೆ, ತೊಂದರೆಯನ್ನೂ ಅನುಭವಿಸಿದ್ದೇವೆ. ಆದರೂ ಪಕ್ಷದ ತೀರ್ಮಾನಕ್ಕೆ ಬದ್ಧವಾಗಿ ಕೆಲಸ ಮಾಡುತ್ತೇವೆ. ಬಿಜೆಪಿ ಜಿಲ್ಲಾಧ್ಯಕ್ಷರು, ಅಭ್ಯರ್ಥಿ ನಮ್ಮ ಸಹಕಾರ ಪಡೆಯಬೇಕು.
    ಬಿ.ಕಾಂತರಾಜ್
    ರಾಜ್ಯ ಪ್ರಧಾನ ಕಾರ‌್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts